ಪದ್ಯರೂಪಿ ಭಗವದ್ಗೀತೆ: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ
ಅಧ್ಯಾಯ..೬ ಶ್ಲೋಕ..೩೯
*********
ಏತನ್ಮೇ ಸಂಶಯಂ ಕೃಷ್ಣ ಚ್ಛೇತ್ತುಮರ್ಹಸ್ಯಶೇಷತಃ।
ತ್ವದನ್ಯಃ ಸಂಶಯಸ್ಯಾಸ್ಯ ಚ್ಛೇತ್ತಾನಹ್ಯುಪಪದ್ಯತೇ ॥
ಪದ್ಯ-39
***
ಶ್ರೀಕೃಷ್ಣ ನನ್ನ ಈ
ಮನದ ಗೊಂದಲವನ್ನು
ಸಂಪೂರ್ಣವಾಗಿಯೇ
ನೀನೆ ತೊಲಗಿಸಬೇಕು ।
ನೀನಲ್ಲದೇ ಕೃಷ್ಣ
ಈ ಜಗದಿ ಯಾರಿಹರು
ಇಂಥ ಸಂಶಯವನ್ನು
ನಿಶ್ಶೇಷ ಕಳೆವವರು ॥
ಅಧ್ಯಾಯ..೬ ಶ್ಲೋಕ..೪೦
*********
ಭಗವಾನುವಾಚ
ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ ।
ನಹಿ ಕಲ್ಯಾಣಕೃತ್ ಕಶ್ಚಿದ್ ದುರ್ಗತಿಂ ತಾತ ಗಚ್ಛತಿ ॥
ಪದ್ಯ-40
***
ಹೇ ಪಾರ್ಥ ಅಂಥವನ
ಸಾಧನೆಯು ಎಂದಿಗೂ
ವ್ಯರ್ಥವಾಗದು ಎಂದು
ಯಾವ ಲೋಕದ ಒಳಗು ।
ಒಳಿತನ್ನೆ ಮಾಡುವವ
ಕೆಡನೆಂದು ಈ ಜಗದಿ
ಇದು ನಿಶ್ಚಯವು ಎಂದು
ಭಗವಂತ ಹೇಳಿದನು ॥
********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ