ನಿತ್ಯ ಪಂಚಾಂಗ

ಗೀತೆಯ ಬೆಳಕು: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ- ಭಾಗ-141

ಪದ್ಯರೂಪಿ ಭಗವದ್ಗೀತೆ: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ

ಅಧ್ಯಾಯ..೬ ಶ್ಲೋಕ..೪೫
********
ಪ್ರಯತ್ನಾದ್ ಯತಮಾನಸ್ತು ಯೋಗೀ ಸಂಶುದ್ಧಕಿಲ್ಬಿಷಃ।
ಅನೇಕಜನ್ಮಸಂಸಿದ್ಧಸ್ತತೋ ಯಾತಿ ಪರಾಂ ಗತಿಮ್॥

ಪದ್ಯ -45
***
ನಿತ್ಯ ಧ್ಯಾನದಲ್ಲಿ
ತೊಡಗಿರುವ ಸಾಧಕನು
ತನ್ನೆಲ್ಲ ಪಾಪಗಳ
ಕಳೆದಂಥ ನಿರ್ಮಲನು।
ಹಲವು ಜನುಮಗಳಿಂದ
ಹಲವು ಪುಣ್ಯವೇ ಮಾಡಿ
ಸಿದ್ಧಿಯನ ಪಡೆಯುತ್ತ
ಪರಮಗತಿ ಹೊಂದುವನು ॥

ಅಧ್ಯಾಯ..೬ ಶ್ಲೋಕ..೪೬
********
ತಪಸ್ವಿಭ್ಯೋಽಧಿಕೋ ಯೋಗೀ ಜ್ಞಾನಿಭ್ಯೋಽಪಿ ಮತೋಽಧಿಕಃ।
ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ ಯೋಗೀ ಭವಾರ್ಜುನ॥

ಪದ್ಯ -46
***
ಎಲ್ಲ ತಪದಲಿ ಹಿರಿಯ
ಎಲ್ಲ ತಿಳಿವಿಗು ಹಿರಿಯ
ಎಲ್ಲ ಯೋಗಕು ಹಿರಿಯ
ಸಾಧನೆಯು ಇದು ಅಹುದು ।
ಕರ್ಮಯೋಗಕು ಮಿಗಿಲು
ಆಗಿರುವ ಈ ಯೋಗ
ನೀ ತಿಳಿದು ಅರ್ಜುನನೆ
ಧ್ಯಾನ ಯೋಗಿಯು ಆಗು ॥
********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನಿತ್ಯ ಪಂಚಾಂಗ (09-01-2021)

Upayuktha

ನಿತ್ಯ ಪಂಚಾಂಗ (23-04-2020)

Upayuktha

ನಿತ್ಯ ಪಂಚಾಂಗ (02-08-2020)

Upayuktha