ಪದ್ಯರೂಪಿ ಭಗವದ್ಗೀತೆ: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ
ಅಧ್ಯಾಯ..೪ ಶ್ಲೋಕ..೫
********
ಭಗವಾನುವಾಚ
ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ ।
ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ॥
ಪದ್ಯ -5
***
ಭಗವಂತ ಹೇಳಿದನು ।
ತಿಳಿ ನೀನು ಅರ್ಜುನನೆ ।
ನನಗಿಂಥ ಜನನಗಳು ।
ಹಲವಾರು ಆಗಿಹವು ॥
ಆ ಎಲ್ಲ ಹುಟ್ಟುಗಳ ।
ಅರಿವೆಲ್ಲ ನನಗಿಹುದು ।
ನಿನಗಾದರದು ಒಂದು ।
ತಿಳಿಯಲಾರದೆ ಇಹುದು ॥
ಅಧ್ಯಾಯ..೪ ಶ್ಲೋಕ..೬
*******
ಅಜೋऽಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋऽಪಿ ಸನ್ ।
ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮಮಾಯಯಾ॥
ಪದ್ಯ -6
***
ನನಗೆ ಎಂದೆಂದಿಗೂ ।
ಹುಟ್ಟು ಎಂಬುದೆ ಇಲ್ಲ।
ನನ್ನ ಈ ಕಾರ್ಯಕ್ಕೆ ।
ಸಾವು ಎಂಬುದೆ ಇಲ್ಲ॥
ಎಲ್ಲ ಜೀವಿಗಳೊಡೆಯ ।
ನಾನೆ ಆಗಿದ್ದರೂ ।
ಪ್ರಕೃತಿಯ ಒಳಬಂದು ।
ಕಾಣಿಸುವೆ ನಿಮ್ಮೆದುರು ॥
********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್ App ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.