ನಗರ ಸ್ಥಳೀಯ

ಮಹಾಮಾರಿಯ ನಿರ್ಮೂಲನಕ್ಕಾಗಿ ವಿಷ್ಣುಸಹಸ್ರನಾಮ ಪಾರಾಯಣ, ಧನ್ವಂತರೀ ಜಪಾನುಷ್ಠಾನ

ಉಡುಪಿ: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಮಹಾಮಾರಿಯ ನಿವಾರಣಾರ್ಥವಾಗಿ ಸಂಕಲ್ಪ ಪೂರ್ವಕವಾಗಿ ವಿಷ್ಣು ಸಹಸ್ರನಾಮ ಪಠಣ ಮತ್ತು ಶ್ರೀ ಧನ್ವಂತರಿ ಜಪಾನುಷ್ಠಾನ ನಡೆಸುವಂತೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಆಸ್ತಿಕ ಭಕ್ತರಿಗೆ ಕರೆ ನೀಡಿದ್ದಾರೆ.

ದೇಶದಲ್ಲಿ ಭೀಕರವಾಗಿ ವ್ಯಾಪಿಸುತ್ತಿರುವ ಕೊರೊನಾ ಮಹಾಮಾರಿ ಮತ್ತು ಅದರಿಂದ ಎದುರಾಗುತ್ತಿರುವ ಮೃತ್ಯು ಸದೃಶ ಭೀಕರ ಪರಿಣಾಮಗಳಿಗೆ ಅದೇ ಪ್ರಮಾಣದಲ್ಲಿ ಆಸ್ತಿಕರು ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಧನ್ವಂತರಿ ಜಪಾನುಷ್ಠಾನವೇ ಪರಿಹಾರ ಎಂದು ತಮ್ಮ ಗುರುಗಳಾದ ವೃಂದಾವನಸ್ಥ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಪ್ರೇರಣೆ ನೀಡಿದ್ದಾರೆ. ನಾಡಿನ ಜನತೆ ಬೃಹತ್‌ ಪ್ರಮಾಣದಲ್ಲಿ ಏಕಕಾಲಕ್ಕೆ ಈ ಅನುಷ್ಠಾನವನ್ನು ಕೈಗೊಂಡಲ್ಲಿ ಅದರಿಂದ ಉಂಟಾಗುವ ಧ್ವನಿತರಂಗಗಳು ಕೊರೊನಾ ಮಾತ್ರವೇ ಅಲ್ಲ, ವಾತಾವರಣದಲ್ಲಿರುವ ಯಾವುದೇ ವಿಷಾಣುಗಳನ್ನು ಮತ್ತು ಕೆಡಕನ್ನುಂಟುಮಾಡುವ ಶಕ್ತಿಗಳನ್ನು ನಾಶಪಡಿಸಬಲ್ಲವು ಎಂದು ಶ್ರೀಗಳು ಹೇಳಿದ್ದಾರೆ.

ಅದಕ್ಕಾಗಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಇಂದು (ಸೋಮವಾರ ಮೇ 3) ಸಾಯಂಕಾಲದಿಂದ ಪ್ರತಿದಿನ ಸಂಜೆ 6 ರಿಂದ 6.45ರ ವರೆಗೆ ಬೆಂಗಳೂರಿನ ಪೂರ್ಣಪ್ರಮತಿ ವಿದ್ಯಾಲಯದ ಆವರಣದಲ್ಲಿರುವ ಶ್ರೀ ವಿಶ್ವೇಶತೀರ್ಥರ ಶ್ರೀಪಾದರ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿ ವಿಷ್ಣುಸಹಸ್ರನಾಮ‌ ಪಾರಾಯಣ ಮತ್ತು ಧನ್ವಂತರೀ ಜಪಾನುಷ್ಠಾನಗಳು ಕೆಲ ಶಿಷ್ಯರಿಂದ ನಡೆಯಲಿದೆ.

ನಾಡಿನಾದ್ಯಂತ ಭಕ್ತರು ಆನ್ ಲೈನ್ ಮೂಲಕ ಇದರಲ್ಲಿ ಭಾಗವಹಿಸಬಹುದು. ಅಥವಾ ತಮ್ಮ ತಮ್ಮ ಮನೆಗಳಲ್ಲಿ ಪ್ರತಿನಿತ್ಯ ಪಾರಾಯಣ ಮತ್ತು ಕನಿಷ್ಠ 108 ಬಾರಿ ಧನ್ವಂತರೀ ಜಪಾನುಷ್ಠಾನವನ್ನು ಶ್ರದ್ಧೆಯಿಂದ ನಡೆಸುವಂತೆ ಶ್ರೀ ವಿಶ್ವಪ್ರನ್ನತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.

ದೇಶದಲ್ಲಿ ಭೀಕರವಾಗಿ ವ್ಯಾಪಿಸುತ್ತಿರುವ ಕೊರೊನಾ ಮಹಾಮಾರಿ ಮತ್ತು ಅದರಿಂದ ಎದುರಾಗುತ್ತಿರುವ ಮೃತ್ಯು ಸದೃಶ ಭೀಕರ ಪರಿಣಾಮಗಳಿಗೆ ಅದೇ ಪ್ರಮಾಣದಲ್ಲಿ ಆಸ್ತಿಕರು ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಧನ್ವಂತರಿ ಜಪಾನುಷ್ಠಾನವೇ ಪರಿಹಾರ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಶಿಷ್ಯರೂ ಭಕ್ತರೂ ಬೆಂಗಳೂರಿನ ಮಾಗಡಿ ಸಮೀಪದ ಆನಂದವನದ ಪೂರ್ಣಪ್ರಮತಿ ವಿದ್ಯಾಲಯದ ಸ್ಥಾಪಕರೂ (ಮಾಜಿ ಐಟಿ ಉದ್ಯೋಗಿ) ಸ್ವಪ್ನ ಸೂಚನೆ ನೀಡಿರುವ ರೋಚಕ ಸಂಗತಿ ತಿಳಿದುಬಂದಿದೆ.

ತಾವು ವೃಂದಾವನ ಪ್ರವೇಶಿಸುವ (ಇಹಲೋಕ ತ್ಯಜಿಸುವ) ಪೂರ್ವದಲ್ಲಿ ತಿರುಪತಿ ಪ್ರವಾಸದಿಂದ ಮರಳಿಬರುವಾಗ ಆಪ್ತರಲ್ಲಿ ಒಂದು ವಿಷಯವನ್ನು ತಿಳಿಸಿದ್ದು ಅದನ್ನು ತಿಳಿದು ಕೂಡಲೇ ಆಚರಿಸುವಂತೆ ಗುರುಗಳು ತಮ್ಮ ಮೃತ್ತಿಕಾ ವಂದಾವನದ ಸಮೀಪ ಗೋಚರಕ್ಕೆ ಬಂದು ಸ್ವಪ್ನ ಸೂಚನೆ ನೀಡಿರುವುದಾಗಿ ಶ್ರೀನಿವಾಸ್ ತಿಳಿಸಿದ್ದಾರೆ.‌ ಅದರಂತೆ ಶ್ರೀಗಳ ಆಪ್ತರಾಗಿದ್ದ ವಿಷ್ಣುಮೂರ್ತಿ ಆಚಾರ್ಯರಲ್ಲಿ ಈ ಬಗ್ಗೆ ಕೇಳಿದಾಗ ಈ ಎರಡೂ ಲೋಕದ ಯಾವುದೇ ಮಹಾಮಾರಿ, ವಿಪತ್ತುಗಳಿಗೂ ಅತ್ಯಂತ ವಿಹಿತ ಪರಿಹಾರ ಎಂದು ಹೇಳಿದ್ದಾಗಿ ತಿಳಿಸಿದರು.

 

 

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಪರಿಸರ ವಿನಾಶದಿಂದ ರೋಗರುಜಿನ ಹೆಚ್ಚಳ: ಶ್ರೀಧರ

Upayuktha

ಅ 6ಕ್ಕೆ ನೀರ್ಚಾಲಿನಲ್ಲಿ ಬಣ್ಣದ ಮಹಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಯಕ್ಷಗಾನ ಬಯಲಾಟ

Upayuktha

ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸ

Upayuktha