ಜಿಲ್ಲಾ ಸುದ್ದಿಗಳು ಪೆಟ್ರೋಲ್-ಡೀಸೆಲ್ ದರ ಸ್ಥಳೀಯ

ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ವಿರೋಧ: ಮಾ.2ರಂದು ಮಂಗಳೂರು ನಗರದಲ್ಲಿ ರಿಕ್ಷಾ- ಬಸ್ ಬಂದ್

ಮಂಗಳೂರು: ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ‌ವಿರೋಧಿಸಿ ಮಾ.2 ರಂದು ಬಸ್ ಮತ್ತು ರಿಕ್ಷಾಗಳನ್ನು ಅರ್ಧ ದಿನದ ಮಟ್ಟಿಗೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೊಳಗಾಗಿದ್ದಾರೆ. ಬಿಜೆಪಿಯೇತರ ರಾಜ್ಯಗಳಿಗಿಂತ ಬಿಜೆಪಿ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿದೆ.

ತೈಲ ದರ ಹೆಚ್ಚಳದಿಂದ ಮೀನುಗಾರಿಕೆಗೆ ಸಮಸ್ಯೆಯಾಗಿದೆ. ಅಲ್ಲದೇ, ನಷ್ಟದ ಹಿನ್ನೆಲೆ ಶೇ. 70ರಷ್ಟು ಬೋಟ್​ಗಳು ಮೀನುಗಾರಿಕೆಗೆ ತೆರಳುತ್ತಿಲ್ಲ. ಬಸ್ ಓಡಾಟಕ್ಕೂ ಸಮಸ್ಯೆಯಾಗಿದೆ. ಬೋರ್​ವೆಲ್​ ರಿಂಗ್ ತಯಾರಿಕರಿಗೂ ಸಮಸ್ಯೆಯಾಗಿದೆ ಎಂದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

‘ಅಮೃತ ಪ್ರಕಾಶ’ ಸರಣಿ 22ನೇ ಕಾರ್ಯಕ್ರಮ: ‘ಮರೀಚಿಕೆ ಬೆನ್ನಟ್ಟಿ’ ಕಥಾ ಸಂಕಲನ ಬಿಡುಗಡೆ

Upayuktha

ನಾಳೆಯಿಂದ ಮಂಗಳೂರು ಪೂರ್ಣ ಬಂದ್; ಅಗತ್ಯವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸಲಾಗುವುದು: ನಳಿನ್ ಕುಮಾರ್ ಕಟೀಲ್

Upayuktha

ಉಡುಪಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ

Upayuktha