ರಾಜ್ಯ

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಕೋವಿಡ್ ಪಾಸಿಟಿವ್

ಮಂಗಳೂರು: ವಿಧಾನ ಪರಿಷತ್ ಸದಸ್ಯ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೇರಳ ಹಾಗೂ ರಾಜ್ಯ ಉಪಚುನಾವಣೆ ಹಿನ್ನೆಲೆ ಬ್ಯುಸಿಯಾಗಿದ್ದ ಹರೀಶ್ ಕುಮಾರ್ ಅವರಿಗೆ ಏ.12 ರಂದು ಆರೋಗ್ಯದಲ್ಲಿ ವ್ಯತ್ಯಾಸ ವಾಗಿದ್ದು, ಬೀದರ್‌ನಲ್ಲಿ ಕೊವಿಡ್ ತಪಾಸಣೆ ನಡೆಸಿ, ಚಿಕಿತ್ಸೆ ಪಡೆದುಕೊಂಡಿದ್ದರು.

ಬೀದರ್‌ನಲ್ಲಿ ತಪಾಸಣೆ ನಡೆಸಿದಾಗ ಕೊವಿಡ್ ನೆಗೆಟಿವ್ ಬಂದಿತ್ತು. ಆ ಬಳಿಕ ದೇಹದಲ್ಲಿ ನಿಶ್ಶಕ್ತಿ ಹಿನ್ನಲೆಯಲ್ಲಿ ಏ.16ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಮತ್ತೆ ಕೊವಿಡ್ ತಪಾಸಣೆ ನಡೆಸಲಾಗಿದ್ದು, ಆ ವರದಿಯಲ್ಲಿ ಪಾಸಿಟಿವ್ ಬಂದಿದೆ.

Related posts

ಸಾಹುಕಾರನ ಸಿಡಿ ಪ್ರಕರಣ: ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಜಾರಕಿಹೊಳಿ ರಾಜೀನಾಮೆ

Sushmitha Jain

ಜೂ. 21ರಿಂದ ಜು. 5ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ: ಅಂತಿಮ ವೇಳಾಪಟ್ಟಿ ಪ್ರಕಟ

Sushmitha Jain

ಎಚ್ ಡಿ ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ಕೋವಿಡ್ ಪಾಸಿಟಿವ್

Harshitha Harish