ಜಿಲ್ಲಾ ಸುದ್ದಿಗಳು

ದ.ಕ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಪ್ರೊ ಎ.ವಿ ನಾವಡ, ಡಾ. ಯು.ವಿ ಶೆಣೈ, ಪತ್ರಕರ್ತ ಜಿನ್ನಪ್ಪ ಗೌಡ ಸೇರಿ 38 ಮಂದಿಗೆ ಪುರಸ್ಕಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಮಟ್ಟದ 2020ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಹಿರಿಯ ಶಿಕ್ಷಣ ತಜ್ಞ ಪ್ರೊ. ಎ.ವಿ ನಾವಡ, ಹೆಸರಾಂತ ವೈದ್ಯ ಡಾ. ಯು.ವಿ ಶೆಣೈ, ಹಿರಿಯ ಪತ್ರಕರ್ತ ಜಿನ್ನಪ್ಪ ಗೌಡ ಸೇರಿದಂತೆ 38 ಮಂದಿ ಗಣ್ಯರಿಗೆ ಈ ಬಾರಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪುರಸ್ಕಾರಗಳನ್ನು ಪ್ರಕಟಿಸಲಾಗಿದೆ.

ಪುರಸ್ಕೃತರ ವಿವರ ಇಂತಿದೆ:
ಸಾಹಿತ್ಯ ಶಿಕ್ಷಣ: ಪ್ರೊ.ಎ.ವಿ. ನಾವಡ, ವಿಶ್ರಾಂತ ಪ್ರಾಧ್ಯಾಪಕರು, ಮಂಗಳೂರು.
ವೈದ್ಯಕೀಯ: ಡಾ. ಯು.ವಿ ಶೆಣೈ, ಅಶೋಕನಗರ ಮಂಗಳೂರು
ವೈದ್ಯಕೀಯ ಸೇವೆ: ಡಾ| ವೇಣುಗೋಪಾಲ ಶರ್ಮ ಎಸ್, ಗುರುವಾಯನಕೆರೆ, ಬೆಳ್ತಂಗಡಿ,
ಸಮಾಜಸೇವೆ: ನವೋದಯ ಮಿತ್ರಕಲಾ ವೃಂದ ನೆತ್ತರಕೆರೆ ಬಂಟ್ವಾಳ,
ಸಾಹಸ/ಕ್ರೀಡೆ: ಅಬ್ದುಲ್ ಸತ್ತಾರ್‌, ಗೂಡಿನ ಬಳಿ ಬಂಟ್ವಾಳ
ಸಮಾಜ ಸೇವೆ: ಎಂ ಸುಬ್ರಹ್ಮಣ್ಯ ಭಟ್‌, ಮಂಜಿನಡ್ಕ, ಸಜಿಪ; ವೀರ ಕೇಸರಿ ಧರ್ಮಸ್ಥಳ, ಬೆಳ್ತಂಗಡಿ; ಎ.ಕೆ ಮೊಯ್ದೀನ್ ಹಾಜಿ ಉಳ್ಳಾಲ; ಸೇಸಪ್ಪ ಪೂಜಾರಿ (ಪಿ.ಎಸ್ ಟೈಲರ್) ಬಂಟ್ವಾಳ; ಬಂಟರ ಸಂಘ ಸುರತ್ಕಲ್‌; ಕದ್ರಿ ಕ್ರಿಕೆಟರ್ಸ್‌ ಮಂಗಳೂರು; ಹ್ಯೂಮನ್‌ ರೈಟ್ಸ್‌ ಫೆಡರೇಶನ್ ಆಫ್‌ ಇಂಡಿಯಾ, ಕುದ್ರೋಳಿ ಅಳಕೆ ಮಂಗಳೂರು;

ರಂಗಭೂಮಿ ಮತ್ತು ಕಿರುತೆರೆ: ಬಿ. ಚೇತನ್ ರೈ ಮಾಣಿ, ಅನಂತಾಡಿ ಬಂಟ್ವಾಳ
ಕ್ರೀಡೆ: ದೊಡ್ಡಣ್ಣ ಬರೆಮೇಲು, ಸುಳ್ಯ ಮತ್ತು ಭಾಸ್ಕರ ಪಾಲಡ್ಕ, ಮೂಡಬಿದ್ರೆ (ಕರಾಟೆ)
ಕೃಷಿ: ಕೆ. ವಿಶ್ವನಾಥ ಪೈ ಐವರ್ನಾಡು, ಸುಳ್ಯ; ಕಸ್ತೂರ್‌ಬಾ ಸಂಜೀವಿನಿ ಮಹಿಳಾ ಸಂಘ ಬೆಳಾಲು ಬೆಳ್ತಂಗಡಿ
ನೃತ್ಯ: ವಿದುಷಿ ನಯನ ವಿ ರೈ, ಸುಳ್ಯಪದವು ಪುತ್ತೂರು
ಪತ್ರಿಕೋದ್ಯಮ: ಬಿಟಿ. ರಂಜನ್ ಶೆಣೈ ಪುತ್ತೂರು, ಮತ್ತು ಜಿನ್ನಪ್ಪ ಗೌಡ ಬೆಳಾಲು
ಕಲಾಕ್ಷೇತ್ರ: ಚಂದ್ರಶೇಖರ ಹೆಗ್ಡೆ ಪುತ್ತೂರು
ವಾದ್ಯ ಕಲಾವಿದರು: ಸುಂದರ ದೇವಾಡಿಗ ಅಳದಂಗಡಿ, ಬೆಳ್ತಂಗಡಿ.
ಇತಿಹಾಸಕಾರರು: ಡಾ| ವೈ ಉಮಾನಾಥ ಶೆಣೈ
ಯಕ್ಷಗಾನ ಹಾಗೂ ರಂಗಭೂಮಿ ಕ್ಷೇತ್ರ: ಗಣೇಶ ಕೊಲೆಕಾಡಿ, ಮುಲ್ಕಿ ಮೂಡಬಿದ್ರೆ
ದೈವಪಾತ್ರಿ: ಗಂಗಯ್ಯ ಪರವ, ಮೂಡಬಿದ್ರೆ,
ಸಾಹಿತ್ಯ: ಯೋಗೀಶ್ ಕಾಂಚನ್, ಬೈಕಂಪಾಡಿ ಮಂಗಳೂರು.
ಶಿಲ್ಪಕಲೆ/ ಚಿತ್ರಕಲೆ: ಪದ್ಮನಾಭ ಕೆ, ಸುರತ್ಕಲ್, ಮಂಗಳೂರು.
ನಾಟಿ ವೈದ್ಯ: ಡಾ. ಎಂ ಮುರಳಿ ಕುಮಾರ್ ಉರ್ವ ಚಿಲಿಂಬಿ ಮಂಗಳೂರು.
ಶೈಕ್ಷಣಿಕ/ಸಾಮಾಜಿಕ ಮತ್ತು ಸಾಂಸ್ಕೃತಿಕ: ಪ್ರಜ್ವಲ್‌ ಯುವಕ ಮಂಡಲ ಸೂಟರ್‌ಪೇಟೆ, ಮಂಗಳೂರು

ಸಮಾಜಸೇವೆ: ಪರಿಶಿಷ್ಟ ಜಾತಿ ಮತ್ತು ಪಂಗಡ ಜಾತಿಗಳ ನಾಗರಿಕ ಜಾಗೃತಿ ಸಮಿತಿ, ಹಂಪನಕಟ್ಟೆ ಮಂಗಳೂರು; ಫ್ರಾನ್ಸಿಸ್‌ ಮ್ಯಾಕ್ಸಿಮ್ ಮೊರಾಸ್‌, ಪದವು ಹೈಸ್ಕೂಲ್ ರಸ್ತೆ ಮಂಗಳೂರು.; ಅನಂತ ಪ್ರಭು ಜಿ. ಪ್ರಾಧ್ಯಾಪಕರು, ಸೈಬರ್ ಸೆಕ್ಯುರಿಟಿ ಮತ್ತು ಸೈಬರ್ ಲಾ ಟ್ರೈನಿ ಮಂಗಳೂರು
ದೃಶ್ಯ ಮಾಧ್ಯಮ: ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು
ಸಮಾಜಸೇವೆ (ಗಡಿನಾಡು): ಸ್ನೇಹಾಲಯ ಚಾರಿಟೇಬಲ್‌ ಟ್ರಸ್ಟ್‌ ಮಂಜೇಶ್ವರ
ಸಮಾಜ ಸೇವೆ (ಹೊರನಾಡು ಕನ್ನಡಿಗ): ಸುರೇಶ್ ಶ್ಯಾಮ್‌ ರಾವ್, ನೇರಂಬಳ್ಳಿ, ಮಂಗಳೂರು
ಸಮಾಜಸೇವೆ: ಜೈ ಭಾರತಿ ತರುಣ ಕಲಾವೃಂದ ಉರ್ವ, ಮಂಗಳೂರು

ನವೆಂಬರ್ 1ರಂದು ನಡೆಯುವ ಜಿಲ್ಲಾ ಮಟ್ಟದ ರಾಜ್ಯೋತ್ಸವ ಸಮಾರಂಭದಲ್ಲಿ ದಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ದೇವಾಲಯಗಳಲ್ಲಿ ಸಿಸಿಟಿವಿ ಕಡ್ಡಾಯ: ದ.ಕ ಜಿಲ್ಲಾಧಿಕಾರಿ

Upayuktha

ಮೈಸೂರು: ಡಾ. ಕೆ. ರಘುರಾಮ ವಾಜಪೇಯಿ ಅವರಿಗೆ `ಗಾಂಧಿಸ್ಮೃತಿ’ ಪ್ರಶಸ್ತಿ ಪ್ರದಾನ

Upayuktha

ಕೋವಿಡ್ 19- ಮಧ್ಯಾಹ್ನದ ಸುದ್ದಿ: ದ.ಕ. ಜಿಲ್ಲೆಯಲ್ಲಿ ಎರಡು, ರಾಜ್ಯದಲ್ಲಿ 42 ಕೊರೊನಾ ಪಾಸಿಟಿವ್

Upayuktha

Leave a Comment