ಕ್ಯಾಂಪಸ್ ಸುದ್ದಿ ಪ್ರಮುಖ ಯೂತ್ ಶಿಕ್ಷಣ

ಸಾರಿಗೆ ಮುಷ್ಕರ: ಮಂಗಳೂರು ವಿವಿ ಎಲ್ಲ ಪದವಿ ಪರೀಕ್ಷೆಗಳ ಮುಂದೂಡಿಕೆ

ಮಂಗಳೂರು: ಕೆಎಸ್​​ಆರ್​ಟಿಸಿ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಮಂಗಳೂರು ವಿಶ್ವವಿದ್ಯಾಲಯದ ಏ.10ವರೆಗೆ ನಡೆಯಬೇಕಿದ್ದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ.

ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ಏ.1ರಿಂದ ಆರಂಭವಾಗಿದ್ದವು. ಬಸ್ ಮುಷ್ಕರದ ಹಿನ್ನೆಲೆ ಇಂದು ನಡೆಯಬೇಕಿದ್ದ ಪದವಿ ಪರೀಕ್ಷೆ ಮುಂದೂಡಲಾಗಿತ್ತು. ಇದೀಗ ಏ.8 ರಿಂದ ಏ.10ರವರೆಗೆ ನಡೆಯುವ ಎಲ್ಲ ಪದವಿ ಪರೀಕ್ಷೆಗಳನ್ನು ಮುಂದೂಡಿ ಆದೇಶಿಸಲಾಗಿದೆ.

ಮಂಗಳೂರು ವಿವಿಯ ಮೂರು ಪದವಿ ಪರೀಕ್ಷೆಗಳು ಈಗಾಗಲೇ ನಡೆದಿದ್ದು, ಇದೀಗ ಮುಂದೂಡಲಾಗಿರುವ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ರಿಜಿಸ್ಟ್ರಾರ್ ಪಿ.ಎಲ್. ಧರ್ಮ ತಿಳಿಸಿದ್ದಾರೆ.

Related posts

ಪ್ರಾಚೀನ ವೈಶಿಷ್ಟ್ಯತೆ ದಾಖಲಿಸಲು ಶೋಧ ಪ್ರಜ್ಞೆ ಅಗತ್ಯ: ಡಾ. ಡಿ. ವೀರೇಂದ್ರ ಹೆಗ್ಗಡೆ

Upayuktha

ಕೊರೊನಾ ನಿಯಂತ್ರಣ: ಪ್ರಧಾನಿ ಮೋದಿ ಅವರ ದಿಟ್ಟ ಕ್ರಮಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ

Upayuktha

ಚಿಕಿತ್ಸೆಗೆ ಸ್ಪಂದಿಸುತ್ತಿರುವ ಪೇಜಾವರ ಶ್ರೀಗಳು: ವೈದ್ಯಕೀಯ ಬುಲೆಟಿನ್ ತಾಜಾ ಮಾಹಿತಿ

Upayuktha