ಅಪಘಾತ- ದುರಂತ ಸ್ಥಳೀಯ

ಮಾರ್ಗನ್ಸ್ ಗೇಟ್: ರೈಲ್ವೇ ಹಳಿಯಲ್ಲಿ ಯುವಕನ ಮೃತದೇಹ ಪತ್ತೆ

ಉಳ್ಳಾಲ: ರೈಲ್ವೇ ಹಳಿಯಲ್ಲಿ ಯುವಕನ ಶವ ಎರಡು ಕಾಲುಗಳು ಬೇರ್ಪಟ್ಟ ಸ್ಥಿತಿಯಲ್ಲಿ ಮಾರ್ಗನ್ಸ್ ಗೇಟ್ ಎರಡನೇ ಬ್ರಿಡ್ಜ್ ನಡಿ ಭಾನುವಾರ ತಡರಾತ್ರಿ 1.30 ಸುಮಾರಿಗೆ ಬೆಳಕಿಗೆ ಬಂದಿದೆ.

ಸುಮಾರು 30-35 ವರ್ಷ ಒಳಗಿನ ಯುವಕನ ಮೃತದೇಹ ಇದಾಗಿದೆ. ಸಮೀಪದಲ್ಲೇ ಬ್ಯಾಗ್ ಹಾಗೂ ಅದರೊಳಗೆ ಬಿಸ್ಲರಿ ಬಾಟಲ್ ನಲ್ಲಿ ಮದ್ಯ ಪತ್ತೆಯಾಗಿದೆ. ಧರಿಸಿದ್ದ ಪ್ಯಾಂಟಿನ ಕಿಸೆಯಲ್ಲಿ ತ್ರಿಶ್ಶೂರಿನ ಬ್ಯಾಂಕೊಂದರಲ್ಲಿ ಹಣ ಪಾವತಿಸಿದ ರಶೀದಿಯೊಂದು ಪತ್ತೆಯಾಗಿದೆ. ಪರ್ಸ್‌ನಲ್ಲಿ ಚಿಲ್ಲರೆ ಹಣ ಬಿಟ್ಟರೆ ಮೊಬೈಲ್ ಕೂಡಾ ಇರಲಿಲ್ಲ.

ಕೇರಳದಿಂದ ಬರುವ ರೈಲಿನಿಂದ ಯುವಕ ಬಿದ್ದು ಮೃತಪಟ್ಟಿರುವ ಸಾಧ್ಯತೆಗಳೂ ಇವೆ. ಅಥವಾ ರೈಲು ಹಳಿಯಲ್ಲಿ ನಡೆದುಕೊಂಡು ಬಂದು ಆತ್ಮಹತ್ಯೆ ನಡೆಸಿರುವ ಶಂಕೆಯೂ ಇದೆ.

ತಡರಾತ್ರಿ ವೇಳೆ ಗಣೇಶ್ ಆಂಬ್ಯುಲೆನ್ಸ್ ನ ಗಣೇಶ್ ಇವರು ಸಹಾಯಕ ಜತೆಗೆ 2:00 ಗಂಟೆಯ ವರೆಗೂ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ಮಂಗಳೂರು ರೈಲ್ವೇ ಪೊಲೀಸರು ಸಾಥ್ ನೀಡಿದರು. ಸಂಬಂಧಿಕರು ಇದ್ದಲ್ಲಿ ಮಂಗಳೂರು ರೈಲ್ವೇ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ದೇಶ ಸೇವೆಯ ಅವಕಾಶ ಸಿಗುವುದೇ ಒಂದು ಅದೃಷ್ಟ: ಎಸ್. ಜಿ. ಟಿ. ಶ್ರೀವತ್ಸ

Upayuktha

ಕರಾವಳಿಗೆ ಮತ್ತೆ ಚಂಡಮಾರುತ: ಕಾಸರಗೋಡು ಜಿಲ್ಲೆಯಲ್ಲಿ ನಾಳೆ ಶಾಲೆ, ಕಾಲೇಜುಗಳಿಗೆ ರಜೆ

Upayuktha

ಬೆಳ್ತಂಗಡಿ: ಬೆಳಾಲಿನ ಖ್ಯಾತ ಶಿಲ್ಪಕಲೆ ಕಲಾವಿದ ಶಶಿಧರ ಆಚಾರ್ಯಗೆ ಒಲಿದ ರಾಷ್ಟ್ರಮಟ್ಟ ಬಸವ ವಿಭೂಷಣ ಪ್ರಶಸ್ತಿ

Sushmitha Jain