ದೇಶ-ವಿದೇಶ ನಿಧನ ಸುದ್ದಿ

ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳು ಸಾವು

ಹುಬ್ಬಳ್ಳಿ: ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳು ಮಹಾಮಾರಿ ಕೋವಿಡ್ ಗೆ ಸಾವನ್ನಪ್ಪಿದ್ದು, ಪುತ್ರ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳು ಮಾಧವಿ ಜೋಶಿಯವರು ಕೊವಿಡ್ ನಿಂದಾಗಿ ಪುಣೆಯಲ್ಲಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.

ಗುಂಗೂಬಾಯಿ ಅವರ ಪುತ್ರ ಬಾಬೂರಾವ್ ಹಾನಗಲ್ ಹಾಗೂ ಅವರ ಮೊಮ್ಮಗ ಅರುಣ್ ಹಾನಗಲ್ ಕೊವಿಡ್ ಸೋಂಕಿಗೊಳಗಾಗಿದ್ದರು.

ಕಳೆದ ವಾರ ಮಾಧವಿ ಜೋಶಿ (55) ಅವರಿಗೂ ಸೋಂಕು ದೃಢಪಟ್ಟಿತ್ತು. ಬಳಿಕ ಅವರನ್ನು ಮಹಾರಾಷ್ಟ್ರದ ಪುಣೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಸೋಮವಾರ ಅವರಲ್ಲಿ ತೀವ್ರ ಉಸಿರಾಟ ಸಮಸ್ಯೆ ಉಂಟಾಗಿ, ಮೃತಪಟ್ಟರು ತಿಳಿದುಬಂದಿದೆ.

ಇನ್ನೂ ಗಂಗೂಬಾಯಿ ಹಾನಗಲ್ ಅವರ ಪುತ್ರ ಬಾಬುರಾವ್ (90) ವರ್ಷ ಅವರ ಸ್ಥಿತಿ ಕೂಡ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿ ಆಕ್ಸಿಜನ್ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಸೋಂಕಿಗೊಳಗಾದ ಅರುಣ್ ಹಾನಗಲ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ.

Related posts

ದಿಲ್ಲಿ, ಲಂಡನ್ ಮೇಲೆ ಉಗ್ರ ದಾಳಿಗೆ ಸೊಲೈಮಾನಿ ಸಂಚು ಹೂಡಿದ್ದ: ಟ್ರಂಪ್‌

Upayuktha

ಹಿರಿಯ ಪತ್ರಕರ್ತ, ಸಾಹಿತಿ ಪಾಟೀಲ್ ಪುಟ್ಟಪ್ಪ ನಿಧನ

Upayuktha

ಕೊರೊನಾ ಸೋಂಕಿಗೆ ವೈದ್ಯ ಸಾವು

Harshitha Harish