ಸ್ಥಳೀಯ

ಬದಿಯಡ್ಕದಲ್ಲಿ ಅ.27ಕ್ಕೆ ಸಾರ್ವಜನಿಕ ಬಲೀಂದ್ರ ಪರ್ಬ

ಬಲೀಂದ್ರ ಪೂಜೆ (ಸಾಂದರ್ಭಿಕ ಚಿತ್ರ)

ಬದಿಯಡ್ಕ:

ಬದಿಯಡ್ಕ ಗ್ರಾಮ ಪಂಚಾಯತ್ ಎದುರು ಸಾರ್ವಜನಿಕ ಬಲಿಯೇಂದ್ರ ಪರ್ಬ ಆಚರಣೆ ಅಕ್ಟೋಬರ್ 27 ಆದಿತ್ಯವಾರ ಅಪರಾಹ್ನ 3 ಗಂಟೆಯಿಂದ 7 ಗಂಟೆಯ ತನಕ ವೈವಿಧ್ಯಪೂರ್ಣವಾಗಿ ನಡೆಯಲಿದೆ.

ರಂಗಸಿರಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗಾಗಿ ಸಂಗೀತ ಕುರ್ಚಿ, ಮಹಿಳೆಯರಿಗಾಗಿ ಹೂವು ಕಟ್ಟುವ ಸ್ಪರ್ಧೆ ಹಾಗೂ ಸಾರ್ವಜನಿಕರಿಗಾಗಿ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಸಂಗೀತ ಕುರ್ಚಿ ಸ್ಪರ್ಧೆಯು 5ನೇ ತರಗತಿ ಮೇಲ್ಪಟ್ಟ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ನಡೆಯಲಿದೆ. ಹೂಮಾಲೆ ಕಟ್ಟುವ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ವಯೋಮಾನದ ಮಿತಿಯಿಲ್ಲ.

ಕರುಣಾಳು ಬಾ ಬೆಳಕೆ…. ದೀಪಾವಳಿಗೊಂದು ಬೆಳಕಿನ ಚಿತ್ತಾರ

ಹೂವು, ದಾರಗಳನ್ನು ಸ್ಪರ್ಧಾಳುಗಳೇ ತರಬೇಕು. ಗ್ರಾಮೀಣ ಸೊಗಸಿನ ಹೂಗಳನ್ನು ಬಳಸಿಕೊಂಡ ರೀತಿ, ಕಟ್ಟಿದ ಕ್ರಮ ಇವುಗಳನ್ನು ಗಮನಿಸಿ ಮೌಲ್ಯನಿರ್ಣಯ ಮಾಡಲಾಗುವುದು. ರಸಪ್ರಶ್ನೆ ಸ್ಪರ್ಧೆಗೆ ಮುಕ್ತ ಅವಕಾಶವಿದೆ. ನಮ್ಮ ಈ ಮಣ್ಣಿನ ಭಾಷೆ, ಇತಿಹಾಸ, ಸಂಸ್ಕೃತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುವುದು. ಎಲ್ಲಾ ಸ್ಪರ್ಧಾಳುಗಳು ಆ ದಿನ ಸಂಜೆ 3 ಗಂಟೆಗೆ ಸ್ಥಳದಲ್ಲೇ ಹೆಸರು ನೋಂದಾಯಿಸಿ ಭಾಗವಹಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಸ್ಪಧೆಗಳ ಬಳಿಕ, ಬಲೀಂದ್ರ ತಯಾರಿ, ಸಭೆ, ಭಾಷಣ, ಬಹುಮಾನ ವಿತರಣೆ, ಸಾಕ್ಷ್ಯಚಿತ್ರ ಪ್ರದರ್ಶನ, ಬಲೀಂದ್ರ ಲೆಪ್ಪುನಿ, ಸಿಹಿ ಅವಲಕ್ಕಿ ಪಾನಕ ವಿತರಣೆ ನಡೆಯಲಿದೆ. ಬಳಿಕ ಹಾನಿಯಿಲ್ಲದ ಸುಡುಮದ್ದುಗಳನ್ನು ಸಾಮೂಹಿಕವಾಗಿ ಉರಿಸುವ ಸುಂದರ ಕಾರ್ಯಕ್ರಮವಿದೆ. ವೈವಿಧ್ಯಪೂರ್ಣವಾಗಿ, ಸುಂದರವಾಗಿ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ರಂಗಸಿರಿ ಪ್ರಕಟಣೆ ಕೋರಿದೆ.

Related posts

ಆಳ್ವಾಸ್ ಸಂಗೀತ ತಂಡದ ಲಾಕ್‍ಡೌನ್ ‘ಲಹರಿ’

Upayuktha

ಕೋವಿಡ್ 19- ಮಧ್ಯಾಹ್ನದ ಸುದ್ದಿ: ದ.ಕ. ಜಿಲ್ಲೆಯಲ್ಲಿ ಎರಡು, ರಾಜ್ಯದಲ್ಲಿ 42 ಕೊರೊನಾ ಪಾಸಿಟಿವ್

Upayuktha

ಜನರೇ ನಿರ್ಮಿಸಿದ ಬಸ್ ತಂಗುದಾಣ: ಹೊಸಳ್ಳಿ ಗ್ರಾಮಸ್ಥರ ಮಾದರಿ ಕಾರ್ಯ

Upayuktha