ವಿಜಯಪುರ: ಜಿಲ್ಲೆಯ ಕರ್ತವ್ಯ ನಿರತ ಯೋಧನೊಬ್ಬ ದೆಹಲಿಯ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನೇಣಿಗೆ ಶರಣಾದ ಯೋಧನನ್ನು ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಣ್ಣೂರು ಗ್ರಾಮದ ಪರಸಪ್ಪ ಚಿಲಕನಹಳ್ಳಿ (25 ವರ್ಷ) ಎಂದು ಗುರುತಿಸಲಾಗಿದೆ.
ಯೋಧನಾದ ಈತ ಪರಸಪ್ಪ ಮದ್ರಾಸ್ ರೆಜಿಮೆಂಟ್ 27ನೇ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇವರು ಪತ್ನಿಯೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದರು. ಆದರೆ ಯೋಧನಾ ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.