ಅಪರಾಧ ನಗರ ಸ್ಥಳೀಯ

ದೇರಳಕಟ್ಟೆ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ನಡೆಸಿದ ಇಬ್ಬರ ಬಂಧನ

ಹಿಂದೂ ಸಂಘಟನೆಗಳ ಪ್ರತಿಭಟನೆಯ 24 ಗಂಟೆಯೊಳಗೆ ಆಶ್ರಫ್ ಮತ್ತು ನಿಝಾಂ ಅರೆಸ್ಟ್

ಮಂಗಳೂರು: ದೇವಸ್ಥಾನದಲ್ಲಿ ಕಳ್ಳತನ ನಡೆಸಿದ ಆರೋಪದಡಿಯಲ್ಲಿ ಇಬ್ಬರನ್ನು ಕೊಣಾಜೆ ಪೊಲೀಸರು ಜ.26 ರಂದು ಬಂಧಿಸಿದ್ದಾರೆ. ಕೊಣಾಜೆ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ.

ತಲಪಾಡಿ ಕೆ.ಸಿ ರೋಡ್ ಮೂಲದ ಮಹಮ್ಮದ್ ಆಶ್ರಫ್ ಮತ್ತು ನಿಝಾಂ ಬಂಧಿತ ಆರೋಪಿಗಳು. ಜ.15 ರಂದು ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಲಾಗಿತ್ತು. ಕಳ್ಳತನ ನಡೆದು ವಾರವಾದರೂ ಆರೋಪಿಗಳ ಬಂಧನವಾಗಿಲ್ಲ ಎಂದು ಆಕ್ರೋಶಿತರಾದ ಹಿಂದೂ ಸಂಘಟನೆಗಳು ಜ.25ರಂದು ಬೃಹತ್ ಪ್ರತಿಭಟನೆ ನಡೆಸಿದ್ದರು.

ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಹಾಗೂ ಹಿಂದೂ ಕಾರ್ಯಕರ್ತರು ಕೂಡಲೇ ಕಳ್ಳರನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಪ್ರತಿಭಟನೆ ನಡೆದು 24 ಗಂಟೆಯ ಒಳಗಡೆ ಕೃತ್ಯಕ್ಕೆ ಸಂಭಂಧಿಸಿದಂತೆ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಸಫಲತೆ ಹೊಂದಿದ್ದಾರೆ.

ದೇವಸ್ಥಾನದ ಒಳಗಡೆ ಕಳ್ಳತನ ನಡೆಸುತ್ತಿರುವ ದೃಶ್ಯಗಳು ದೇವಾಲಯದಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು ಇಂದು ಬೆಳಿಗ್ಗೆ ಎರಡು ಆರೋಪಿಗಳು ದಸ್ತಗಿರಿ ಮಾಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದ್ದೂ ಪ್ರಕರಣದ ಹಿಂದಿರುವ ಷಡ್ಯಂತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಯಾದಗಿರಿಯಲ್ಲಿ ಕೃಷ್ಣಮೃಗ ಚರ್ಮದ ಬೃಹತ್ ದಂಧೆಯ ಜಾಲ ಭೇದಿಸಿದ ಮಂಗಳೂರು ಅರಣ್ಯಾಧಿಕಾರಿಗಳ ತಂಡ

Upayuktha

ಹಿರಿಯ ಕವಿ, ಸಾಹಿತಿ, ಹವ್ಯಾಸಿ ಭಾಗವತ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ನಿಧನ

Upayuktha

ಕ್ರೀಡಾ ಪತ್ರಕರ್ತ ಯೋಗೇಶ್ ಗರುಡ ನಿಧನ

Upayuktha