ದೇಶ-ವಿದೇಶ ಪ್ರಮುಖ

ಕಾಶ್ಮೀರಿ ನಾಯಕರಿಗೆ ಶೀಘ್ರ ಬಂಧಮುಕ್ತಿ: ಸರಕಾರದ ಇಂಗಿತ

ಅಬ್ದುಲ್ಲಾಗಳು, ಮುಫ್ತಿಗೆ ಇಲ್ಲ ಶೀಘ್ರ ಮುಕ್ತಿ

 

ಶ್ರೀನಗರ: ಎರಡು ತಿಂಗಳಿನಿಂದ ಗೃಹಬಂಧನದಲ್ಲಿರುವ ಕಾಶ್ಮೀರದ ರಾಜಕೀಯ ಮುಖಂಡರನ್ನು ಪರಿಸ್ಥಿತಿಯ ವಿಶ್ಲೇಷಣೆ ಬಳಿಕ ಶೀಘ್ರವೇ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಸಲಹೆಗಾರರು ತಿಳಿಸಿದರು.

ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್‌ ಅಬ್ದುಲ್ಲಾ, ಓಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ಸುಮಾರು 40 ಮುಖಂಡರು ಗೃಹಬಂಧನದಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಅವರನ್ನು ಗೃಹಬಂಧನಕ್ಕೆ ಒಳಪಡಿಸಲಾಗಿತ್ತು.

ಹಾಗಿದ್ದರೂ ಸದ್ಯಕ್ಕೆ ಮಧ್ಯಮ ಹಂತದ ನಾಯಕರನ್ನು ಮಾತ್ರ ಬಿಡುಗಡೆ ಮಾಡಲಾಗುವುದು. ಅಬ್ದುಲ್ಲಾಗಳು ಮತ್ತು ಮುಫ್ತಿಗೆ ಸದ್ಯಕ್ಕೆ ಮುಕ್ತಿ ಇಲ್ಲ ಎಂದು ಮೂಲಗಳು ಹೇಳಿವೆ.

ಕಣಿವೆಯಲ್ಲಿನ ಪರಿಸ್ಥಿತಿಗೆ ಪ್ರತಿಕೂಲವಾಗಿ ಪರಿಣಮಿಸದು ಎಂಬುದು ಖಚಿತವಾದ ಬಳಿಕವಷ್ಟೇ ನಾಯಕರನ್ನು ಬಿಡುಗಡೆ ಮಾಡಲಾಗುವುದು ಎಂದು ಸರಕಾರ ಹೇಳಿದೆ. ‘ಭರವಸೆಯಿದೆ, ಪ್ರತಿಯೊಬ್ಬ ನಾಯಕನ ಬಗ್ಗೆ ವೈಯಕ್ತಿ ಅಧ್ಯಯನ, ವಿಶ್ಲೇಷಣೆ ನಡೆಸಿದ ಬಳಿಕವಷ್ಟೇ ಅವರನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು’ ಎಂದು ರಾಜ್ಯಪಾಲರ ಸಲಹೆಗಾರ ಫಾರೂಕ್ ಖಾನ್ ಜಮ್ಮುವಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ನುಡಿದರು.

ಜಮ್ಮು ಪ್ರಾಂತ್ಯದ ಬಿಜೆಪಿಯೇತರ ಪಕ್ಷಗಳ ನಾಯಕರು ತಮ್ಮ ಮೇಲಿನ ನಿರ್ಬಂಧಗಳನ್ನು ಸರಕಾರ ತೆಗೆದುಹಾಕಿದೆ ಎಂದು ತಿಳಿಸಿದ್ದಾರೆ. ಆದರೆ, ಜಮ್ಮು ಪ್ರಾಂತ್ಯದ ನಾಯಕರನ್ನು ಗೃಹಬಂಧನಕ್ಕೆ ಒಳಪಡಿಸಿರಲೇ ಇಲ್ಲ, ಅವರು ಮುಕ್ತವಾಗಿ ಓಡಾಡಿಕೊಂಡಿದ್ದರು ಎಂದು ಜಮ್ಮು ವಿಭಾಗೀಯ ಆಯುಕ್ತ ಸಂಜೀವ್ ವರ್ಮಾ ತಿಳಿಸಿದರು.

ಜಮ್ಮು-ಕಾಶ್ಮೀರದಲ್ಲಿ ಸಂವಹನ ನಿರ್ಬಂಧಗಳು 60ನೇ ದಿನಕ್ಕೆ ಪ್ರವೇಶಿಸಿದ್ದು, ರಾಷ್ಟ್ರೀಯ ಹಾಗೂ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳು ಕಾಶ್ಮೀರ ಪ್ರೆಸ್‌ ಕ್ಲಬ್‌ನಲ್ಲಿ ಗುರುವಾರ ಧರಣಿ ನಡೆಸಿದರು. ಇಂಟರ್‌ನೆಟ್‌, ಬ್ರಾಡ್‌ಬ್ಯಾಂಡ್‌ ಮತ್ತು ಮೊಬೈಲ್ ಸಂಪರ್ಕಗಳನ್ನು ಕೂಡಲೇ ಮರುಸ್ಥಾಪಿಸುವಂತೆ ಪತ್ರಕರ್ತರು ಆಗ್ರಹಿಸಿದ್ದಾರೆ.

Related posts

ಕೊರೊನಾ ನಿಯಂತ್ರಣ ಕ್ರಮ: ಮಂಗಳೂರು-ಕಾಸರಗೋಡು ನಡುವೆ 10 ದಿನಗಳ ಕಾಲ ವಾಹನ ಸಂಚಾರ ನಿಷೇಧ

Upayuktha

2ನೇ ಅಂತಾರಾಷ್ಟ್ರೀಯ ಟಿ20: ದ. ಆಫ್ರಿಕಾ ವಿರುದ್ಧ ಭಾರತ ಭರ್ಜರಿ ಜಯ

Upayuktha

ಮೌನಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು

Upayuktha