ನಗರ ವ್ಯಾಪಾರ- ವ್ಯವಹಾರ ಸ್ಥಳೀಯ

ಪುತ್ತೂರಿನಲ್ಲಿ ದೇವಕಾರ್ಯ ಗ್ರೂಪ್‍ನ ಗುಣಮಟ್ಟದ ಆಹಾರ ಪೂರೈಕೆ ವ್ಯವಸ್ಥೆಗೆ ಚಾಲನೆ

ಪರಿಶ್ರಮ ಮತ್ತು ಪ್ರಾಮಾಣಿಕತೆ ಮುಖ್ಯ: ಸುಬ್ರಹ್ಮಣ್ಯ ಭಟ್

ಪುತ್ತೂರು: ಪರಿಶ್ರಮ ಮತ್ತು ಪ್ರಾಮಾಣಿಕತೆ ಮನುಷ್ಯನನ್ನು ಉತ್ತುಂಗಕ್ಕೆ ಏರಿಸುತ್ತದೆ. ಮಾಡುವ ಕಾರ್ಯವನ್ನು ಸಮರ್ಪಕವಾಗಿ ಮತ್ತು ಶ್ರದ್ಧೆಯಿಂದ ಮಾಡಬೇಕಾದ್ದು ಅಗತ್ಯ. ನಿರಂತರವಾಗಿ ಗುಣಮಟ್ಟದ ಸೇವೆಯನ್ನು ಒದಗಿಸುವುದೇ ಉದ್ಯಮದ ಗುರಿಯಾಗಬೇಕು. ಆಗ ಯಶಸ್ಸು ತಾನಾಗಿಯೇ ಒಲಿದುಬರುತ್ತದೆ ಎಂದು ದೇವಕಾರ್ಯ ಆಹಾರೋತ್ಪನ್ನ ಘಟಕದ ಗೌರವ ಸಲಹೆಗಾರ ಸುಬ್ರಹ್ಮಣ್ಯ ಭಟ್ ಹೇಳಿದರು.

ಅವರು ಸೋಮವಾರ ಪರ್ಲಡ್ಕದಲ್ಲಿ ದೇವಕಾರ್ಯ ಗ್ರೂಪ್ ಇದರ ವತಿಯಿಂದ ಆರಂಭಿಸಲಾದ, ಕಚೇರಿ ಮತ್ತು ಮನೆಗಳಿಗೆ ತಲಪಿಸುವ ಮಧ್ಯಾಹ್ನದ ಮನೆ ಊಟ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು.

ಪುತ್ತೂರಿನಲ್ಲಿ ಮಧ್ಯಾಹ್ನದ ಊಟ ಆಹಾರ ಕಲ್ಪನೆ ವಿನೂತನವಾದದ್ದು. ಅನೇಕರಿಗೆ ಇದರ ಅಗತ್ಯವಿದೆ. ಕಚೇರಿಗೆ ಬರುವವರಿಗೆ ಮಧ್ಯಾಹ್ನದ ಮನೆ ಊಟ ಸಿದ್ಧಗೊಂಡು ಬಂದರೆ ತುಂಬ ಉಪಯುಕ್ತ ಅನಿಸುತ್ತದೆ. ಹಾಗೆಯೇ ಅನೇಕ ಮನೆಗಳಲ್ಲಿ ಏಕಾಂಗಿಯಾಗಿರುವ ವಯಸ್ಕರಿದ್ದಾರೆ. ಅಂತಹವರಿಗೆ ಊಟದ ವ್ಯವಸ್ಥೆ ಮಾಡುವುದು ಪುಣ್ಯದ ಕೆಲಸ. ಗುಣಮಟ್ಟದ ಆಹಾರವನ್ನು ಸಿದ್ಧಪಡಿಸುವುದು ಮತ್ತು ಸರಿಯಾದ ಸಮಯಕ್ಕೆ ತಲಪಿಸಿಕೊಡುವುದು ಆದ್ಯತೆಯ ಸಂಗತಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪುತ್ತೂರಿನ ದಸ್ತಾವೇಜು ಬರಹಗಾರ ಕೃಷ್ಣ ಉಪಾಧ್ಯಾಯ, ಪುತ್ತೂರಿನ ಟಿವಿ ಕ್ಲಿನಿಕ್‍ನ ಮಾಲಿಕ ಸತ್ಯಶಂಕರ್ ಭಟ್, ದೇವಕಾರ್ಯ ಆಹಾರೋತ್ಪನ್ನ ಘಟಕದ ನಿರ್ವಾಹಕ ಆದರ್ಶ ವಿ, ದೇವಕಾರ್ಯ ಗ್ರೂಪ್‌ನ ಸದಸ್ಯರಾದ ಸರ್ವೇಶ್ವರಿ ಹಾಗೂ ಸುಮಿತ್ರ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಮಾತಾ ಅಮೃತಾನಂದಮಯಿ ಮಠದಲ್ಲಿ ಆರೋಗ್ಯ ಮೇಳ, ಸ್ವಾಸ್ಥ್ಯ ಸೇವೆಗಳ ಮಹಾ ಸಂಭ್ರಮ

Upayuktha

ಶಿಕ್ಷಣ ಕ್ಷೇತ್ರದ ಲೋಪದಿಂದ ಜನರ ನಡುವೆ ಕಂದಕ: ಪ್ರೊ. ಚಿನ್ನಪ್ಪ ಗೌಡ

Upayuktha

ನಾಲ್ವರು ಪ್ರತಿಭಾವಂತರಿಗೆ ಮಾಮ್ ಇನ್‍ಸ್ಪೈರ್ ಪ್ರಶಸ್ತಿ ಪ್ರದಾನ

Upayuktha