ಕತೆ-ಕವನಗಳು

ದೇವತೆ

ಓ ನನ್ನ ಬಾಳ ದೇವತೆ
ನಿನಗಾಗಿ ಬರೆಯುವೆ ಒಂದು ಕವಿತೆ
ನಾ ಕಂಡೆ ನಿನ್ನಾ ಗೆಳತಿಯಾಗಿ
ಬರುವೆಯಾ ಜೀವದ ಓಡತಿಯಾಗಿ

ಜಗಕೆ ಬೆಳಕನು ನೀಡುವ ಸೂಯ‌‌‌‌‌‌‌‌‌‍೯
ನನಗೆ ಬೆಳಕಾಯಿತು ಆ ನಿನ್ನ ಸೌಂದರ್ಯ
ನಾ ಕಂಡೆನು ನಿನ್ನಯ ಮೊಗವ
ಹೇಗೆ ಹೇಳಲಿ ಆ ನಿನ್ನಾ ಚೆಲುವ

ಹೃದಯದೀ ಸುರಿಸಿದೆ ನೀ ನಗುವಿನ ಮಳೆ
ಹರಡಿತು ಮನವೆಲ್ಲಾ ಪ್ರೀತಿಯ ಬೆಳೆ
ಯಾತಕೆ ಆಯಿತು ಈ ನಮ್ಮ ಪರಿಚಯ
ಇದರಿಂದ ನಾನಾದೆ ಅತಿಶಯ

ತೆರೆಯಿತು ನನ್ನಯ ಮನವು
ಮೆರೆಯಿತು ‌ನಿನ್ನಯ ಒಲವು
ಮೂಡಿತು ಸ್ನೇಹದ ಚಿಗುರು
ಬೆಳೆಯಿತು ಪ್ರೀತಿಯ ತೇರು

ಕಳೆದೆ ಸಮಯವನು ನಿನ್ನ ಗುಂಗಲ್ಲಿ
ಬಿಡದಿರು ನನ್ನಾ ಅಧ೯ ದಾರೀಲಿ
ಮನದಿ ಮೂಡಿದೆ ಪ್ರಶ್ನೆಗಳ ಮಾಲೆ
ಬರೆಯುವೆಯಾ ಅದಕ್ಕೊಂದು ಓಲೆ
ದೇವತೆ

✍🏻✍🏻ಯತೀ ಕುಲಾಲ್

Related posts

ಕವನ: ಭಕ್ತಿ ನಮನ

Upayuktha

ಕವನ: ಅರ್ಘ್ಯವನು ಸ್ವೀಕರಿಸಿ ಹರಸು ಶ್ರೀಕೃಷ್ಣ

Upayuktha

ಬದ್ಕ್ ಪನ್ಪಿ ಮೇಪುನ ಕನ.

Harshitha Harish