ಕತೆ-ಕವನಗಳು

ಕವನ: ಓಂಕಾರನಾದ

ಅಖಿಲಾಂಡ ಕೋಟಿ ಬ್ರಹ್ಮಾಂಡಕ್ಕೆ
ತೇಜ ಪರಶಿವನೆಂಬ ಓಂಕಾರ ನಾದ..
ಮೂಜಗದ ನಭೋಮಂಡಲಕ್ಕೆ
ಮುಕ್ಕಣ್ಣನೆಂಬ ಭಕ್ತಿಯ ಸುನಾದ..

ಢಮರುವಾಣಿ ನೀನು ತ್ರಿಶೂಲಪಾಣಿ
ವಿಷದ ಉರಗವೇ ನಿನ್ನ ಕೊರಳ ಭೂಷಣ..
ತಂಪು ನೀಡುವ ಶಶಿ ನಿನ್ನ ನೆತ್ತಿ ಮೇಲೆ
ಪ್ರೀತಿಯ ಉಮೆಯೇ ನಿನ್ನ ಅರ್ಧ ಭಾಗ..

ಮಹಾದೇವ ನಿನ್ನ ಒಲಿಸಿಕೊಳ್ಳಲು ಸಾಕು
ಕಾರ್ತಿಕ ಸೋಮವಾರದ ಸುಲಭ ಪೂಜೆ..
ಶಂಭುವೇ ನಿನ್ನ ಹೃದಯ ಸೇರಲು ಬೇಕು
ಪರಿಶುದ್ಧ ಭಕ್ತಿಯ ಅಂತರಂಗದ ಅರಿವು..

ಆ ಕೊರೆವ ಹಿಮಗಿರಿಯಲ್ಲಿ ನಿನ್ನ ವಾಸ
ಹಿಮಾಲಯವೇ ಈ ಭುವಿಯ ಕೈಲಾಸ..
ಆದಿಯಿದ್ದಲ್ಲಿ ಮತ್ತೆ ಇರಲೇಬೇಕು ಅಂತ್ಯ
ಮುಕ್ತಿಪಥ ತೋರಿಸೆಂದು ಕೇಳುವೆನು ನಿತ್ಯ.

– ಗೀತಾ ರಾಘವೇಂದ್ರ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಪುಟಾಣಿ ಕವಿತೆ: ಅಮ್ಮನೆಂಬ ಮೊದಲ ಗುರು

Upayuktha

*ಶೈಲಪುತ್ರಿ*

Harshitha Harish

ಮಕ್ಕಳ ಕವನ: ರಕ್ಷಾ ಬಂಧನ

Upayuktha