ಕತೆ-ಕವನಗಳು

ಭಕ್ತಿಗೀತೆ: ರಾಮನಾಮ ಪಾಡುವ

ರಾಮ ನವಮಿ ಬಂದಿತದೋ
ರಾಮ ನಾಮ ಪಾಡುವ
ಭಕ್ತಿ ಭಾವ ತಂದಿತದೋ
ದಾಶರಥಿಯ ಭಜಿಸುವ ||

ಸೀತಾದೇವಿ ವರನು ಇವನು
ವೀರ ರಘುರಾಮನು
ಶಬರಿ ಭಕ್ತಿ ಅಹಲ್ಯಾಮುಕ್ತಿ
ದಾತನವನು ಶೂರನು ||

ಹನುಮ ಪ್ರಾಣ ಅನುಜ ಪ್ರೇಮ
ಪಡೆದ ಶ್ರೀರಾಮನು
ಹವನ ಹೋಮ ಕಾಯ್ದನಿವ
ಲೋಕವುದ್ಧರಿಪ ದೇವನು ||

ಸಾಧುಧರ್ಮ ಸತ್ಯಮರ್ಮ
ಪೊರೆವ ಆದರ್ಶನು
ತೇದು ಶ್ರೀಗಂಧದಂತೆ
ತೊರೆದ ದಾನವಗುಣವನು ||

ಚೈತ್ರ ಶುದ್ಧ ನವಮಿ ಬರಲು
ರಾಮ ನಾಮ ಜಪಿಸುವ
ನಿತ್ಯ ಶುದ್ಧ ಮನದಿ ಅವನ
ಚರಣ ದಾಸರೆಸಿಸುವ ||

-ರೂಪಾಪ್ರಸಾದ ಕೋಡಿಂಬಳ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

Related posts

ಪುಟಾಣಿ ಕವಿತೆ: ಅಮ್ಮನೆಂಬ ಮೊದಲ ಗುರು

Upayuktha

ಕವನ: ಕಣಿಪುರದ ಜಾತ್ರೆ

Upayuktha

*ಕಾತ್ಯಾಯನಿ*

Harshitha Harish