ಕತೆ-ಕವನಗಳು

ಭಕ್ತಿಗೀತೆ: ರಂಗಾ…ಶ್ರೀರಂಗಾ

ನಿತ್ಯ ನಿನ್ನನು ನಾನು ನೆನೆಯುವೆ
ರಂಗನಾಥನೆ ರಕ್ಷಿಸು
ಭಕ್ತಿಯಿಂದಲಿ ಧ್ಯಾನಗೈಯುವೆ
ಜನ್ಮ ಪಾಪವ ತೊಲಗಿಸು… ||

ಪಟ್ಟೆ ಪೀತಾಂಬರದಿ ಅಲಂಕೃತ
ರಂಗನಾಥನ ಬೇಡುವೆ
ಮುತ್ತು ರತ್ನ ಹೊನ್ನುಗಳನು
ನಿನ್ನ ಕೊರಳಲಿ ನೋಡುವೆ….. ||

ತುಳಸಿ ದಳವನು ಅರ್ಪಿಸಲು ನೀ
ಭವದ ಭಯವನು ಕಳೆವೆಯಾ
ಭಕ್ತ ವತ್ಸಲ ಪಾಂಡುರಂಗನೆ
ಮುಕ್ತಿ ಮಾರ್ಗವ ತೋರೆಯಾ… ||

ವ್ರತವ ಗೈದು ತಪವ ಮಾಡುವೆ
ಹರಿಯ ನಾಮವ ಪಾಡುವೆ
ದಯೆಯ ತೋರು ಪಾದಕೆರಗುವೆ
ರಂಗ ನಾಮವ ಭಜಿಸುವೆ…… ||

ವಿಠ್ಠಲ.. ವಿಠ್ಠಲ.. ಜೈಜೈ ವಿಠ್ಠಲ
ಜಯ ಹರಿ ವಿಠ್ಠಲ ಶ್ರೀರಂಗಾ
ವಿಠ್ಠಲ… ವಿಠ್ಠಲ.. ಜೈಜೈ ವಿಠಲ
ಜಯ ಹರಿ ವಿಠಲ ಶ್ರೀರಂಗಾ… ||

-ರೂಪಾಪ್ರಸಾದ ಕೋಡಿಂಬಳ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕವನ: ಸಂಭ್ರಮದ ಮೋಕಳೀಕು

Upayuktha

ಯುಗಾದಿ ಕವನ: ನವ ಯುಗಾದಿಯ ನಿರೀಕ್ಷೆ

Upayuktha

ನಿದ್ದೆ ಬರಲಿಲ್ಲ

Harshitha Harish