ಚಂದನವನ- ಸ್ಯಾಂಡಲ್‌ವುಡ್ ರಾಜ್ಯ

ನಟ ಕೋಮಲ್ ಅವರ ಹೊಸ ‘2020’ ಚಿತ್ರಕ್ಕೆ ನಾಯಕಿಯಾಗಿ ಧನ್ಯಾ ಬಾಲಕೃಷ್ಣ

ಬೆಂಗಳೂರು :  ಕನ್ನಡ ನಟ ಕೋಮಲ್ ಕುಮಾರ್ ಹೊಸ ಸಿನಿಮಾ ಕ್ಕೆ ಎಂಟ್ರಿ ಕೊಟ್ಟಿದ್ದು, ಈ ಚಿತ್ರ ಕಾಮಿಡಿ ಕಥೆ ಹೊಂದಿದೆ.

ಸಂಭಾಷಣೆಕಾರ ಕೆಎಲ್ ರಾಜಶೇಖರ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ‘2020’ ಎಂದು ಹೆಸರು ಸಹ ಇಡಲಾಗಿದೆ.

ನಿನ್ನೆ 2020 ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಮಕ್, ಅಯೋಗ್ಯ ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ‘ಕ್ರಿಸ್ಟಲ್ ಪಾರ್ಕ್ ಸಿನೆಮಾಸ್’ ಬ್ಯಾನರ್ ಅಡಿ ಟಿಆರ್ ಚಂದ್ರಶೇಖರ್ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಕೋಮಲ್ ನಾಯಕಿ ಧನ್ಯಾ ಬಾಲಕೃಷ್ಣ (2020) ಚಿತ್ರದಲ್ಲಿ ಕೋಮಲ್ ಕುಮಾರ್ ಗೆ ನಾಯಕಿಯಾಗಿ ಧನ್ಯಾ ಬಾಲಕೃಷ್ಣ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚು ನಟನೆ ಮಾಡಿದ ಧನ್ಯಾ, ಕೋಮಲ್ ಜೊತೆ ನಟನೆ ಮಾಡಲು ಅವಕಾಶ ಸಿಕ್ಕಿದೆಯಂತೆ.

2020 ಚಿತ್ರ ದೀಪಾವಳಿ ಪ್ರಯುಕ್ತ ಚಿತ್ರದ ಮುಹೂರ್ತ ಮಾಡುವ ತಯಾರಿಯಲ್ಲಿದೆ. ಕೋಮಲ್, ಧನ್ಯ ಜೊತೆ ಕುರಿ ಪ್ರತಾಪ್, ತಬಲ ನಾಣಿ, ಮಿಮಿಕ್ರಿ ಗೋಪಿ ಸೇರಿದಂತೆ ಹಲವರು ನಟಿಸಲಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಲಿದ್ದಾರೆ.

Related posts

ಬೆಂಗಳೂರಿಗೆ ಬಂದಿಳಿದ ಡಿಕೆಶಿಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ

Upayuktha

ಹವ್ಯಕರ ಮೂಲನೆಲೆ ಹೈಗುಂದದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಅದ್ದೂರಿ ಚಾಲನೆ

Upayuktha

ಮಾವುತನನ್ನೇ ಕೊಂದ ಮೈಸೂರು ಮೃಗಾಲಯದ ಆನೆ

Harshitha Harish