ಕತ್ತಲೊಳಗ
ಧುಸ್ ಎಂದು
ಕದ್ದು ಕುಳಿತ
ಕುರುಡು ಮನಸ
ಹೊತ್ತಾತು ಎದ್ದೇಳು
ಬೆಳಕರಿದು ಭುವಿಗ
ತಡಕಡುತಾವ ಕೈ
ತೊಟ್ಟಿಳೊಳಗ
ರೊಟ್ಟಿ ಉಪರಿಗಿಯೊಳಗ
ಬಿರಿದ ಕೈ ಮಗನ
ಮೊಗದ ಮ್ಯಾಲ
ಎಷ್ಟಾರ ಅತ್ತಿ
ಅರಳ್ಯಾವ ಹೊಲದಾಗ ಹತ್ತಿ
ಬುತ್ತಿ ಇಲ್ಲದ ನೀ ಇರತಿ..!?
ಅವನ ಜನ್ಮ ಇಷ್ಟ ಐತಿ
ಆ ಕೂಸ ನಿನ ನಂಬೇತಿ
ಕಟ್ಟಬೇಕ ನೋವಿಗ ಗಂಟು ಮೂಟಿ
ನಿನ ಜೀವ ನಿನ ಕೈಯಾಗೈತಿ
ಜೀವ ಇರೋವರಗ ಬದುಕ ಬೇಕಾಗೈತಿ
ಬೆಳಕಿನೆಡೆಗೆ ಮುಖ ಮಾಡೇ ಧರಿತ್ರಿ
ಡಾ.ಅನಪು