ಗ್ರಾಮಾಂತರ ಸ್ಥಳೀಯ

ಧರ್ಮಸ್ಥಳ: ಬಾಣಸಿಗರಾದ ಕೆಎಸ್ಆರ್‌ಟಿಸಿ ನೌಕರರು

ಉಜಿರೆ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ರಾಜ್ಯದೆಲ್ಲೆಡೆ ನಡೆಯುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಶನಿವಾರ ಧರ್ಮಸ್ಥಳದಲ್ಲಿರುವ ಕೆ.ಎಸ್.ಆರ್.ಟಿ.ಸಿ. ಡಿಪೊದಿಂದ ಯಾವುದೇ ಬಸ್‍ಗಳು ಸಂಚಾರ ಮಾಡಿಲ್ಲ.

ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿ ಊಟ, ಉಪಾಹಾರದ ವ್ಯವಸ್ಥೆ ಮಾಡಿಕೊಂಡರು. ಚಾಲಕರು, ನಿರ್ವಾಹಕರು ಸೌಟು ಹಿಡಿದು ಊಟ ತಯಾರಿಸಿ, ಪ್ರಯಾಣಿಕರಿಗೂ “ನಳಪಾಕ”ದ ಸೊಗಡನ್ನು ತಿಳಿಸಿದರು.

ಪ್ರಯಾಣಿಕರ ಪರದಾಟ: ಶುಕ್ರವಾರ ಧರ್ಮಸ್ಥಳದಿಂದ ಎಲ್ಲಾ ಬಸ್‍ಗಳು ಸಂಚಾರ ಮಾಡಿವೆ. ಆದರೆ ಶನಿವಾರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಇವತ್ತು ಎರಡನೆ ಶನಿವಾರ ರಜಾದಿನವಾಗಿದ್ದು, ಲಕ್ಷದೀಪೋತ್ಸವಕ್ಕೆ ಅನೇಕ ಕಡೆಯಿಂದ ಪ್ರವಾಸಿಗರು ಬಂದಿದ್ದರು. ಮುಷ್ಕರದ ಬಿಸಿ ಅವರಿಗೂ ತಟ್ಟಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಆಳ್ವಾಸ್ ‘ಅನ್ವೇಷಣಾ’- ರಿಸರ್ಚ್‌ ಫೋರಂ ಉದ್ಘಾಟನೆ

Upayuktha

ಅರಿಯಡ್ಕ ಗ್ರಾ.ಪಂ ಸದಸ್ಯರಾಗಿ ಚುನಾಯಿತರಾದವರಿಗೆ ಅಭಿನಂದನಾ ‌ಕಾರ್ಯಕ್ರಮ

Harshitha Harish

ಗೃಹರಕ್ಷಕ ಕ್ಷೇಮಾಭಿವೃದ್ದಿ ನಿಧಿಯಿಂದ ಸಹಾಯ ಧನ

Upayuktha