ಕ್ಷೇತ್ರಗಳ ವಿಶೇಷ ಜಿಲ್ಲಾ ಸುದ್ದಿಗಳು

ಧರ್ಮಸ್ಥಳದ ಲಕ್ಷ್ಮೀ ಆನೆಯ ಮರಿ ಆನೆಗೆ ನಾಮಕರಣ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ್ಮೀ ಎಂಬ ಹೆಸರಿನ ಆನೆಯೊಂದು ಕಳೆದ‌ ಜುಲೈ1 ರಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು ಆ ಆನೆ ಮರಿಯ ನಾಮಕರಣ ಆ.31 ರಂದು ತುಲಾ ಲಗ್ನ ಮುಹೂರ್ತದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ ಪ್ರಸಾದ ನೀಡಿ, ಗಂಟೆ ಕಟ್ಟುವ ಮೂಲಕ ವಿಧಿ ನೆರವೇರಿಸಿದರು.

ಧರ್ಮಸ್ಥಳದ ಡಾ.ಡಿ.ಹೆಗ್ಗಡೆ ಮೊಮ್ಮಗಳು ಮಾನ್ಯ ಅವರು ಶಿವಾನಿ ಎಂದು ನಾಮಕರಣ ಮಾಡಿದರು.

ಶ್ರೀಧಾಮ‌ ಮಾಣಿಲದ ಮೋಹನದಾಸ ಸ್ವಾಮೀಜಿ ಆನೆಯ ಮಾವುತ ಕೃಷ್ಣ ರಿಗೆ ಸನ್ಮಾನ ನೆರವೇರಿಸಿದರು.

ಈ‌ ಸಂದರ್ಭದಲ್ಲಿ ಹೇಮಾವತಿ ವಿ ಹೆಗ್ಹಡೆ, ಡಿ. ಹರ್ಷೇಂದ್ರ ಕುಮಾರ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು

Related posts

ಕೊರೊನಾ ಅಪ್ ಡೇಟ್: ದ.ಕ.- 30, ಉಡುಪಿ- 14, ಕರ್ನಾಟಕ- 308

Upayuktha

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರಿಗೆ ಕೋವಿಡ್ ಪಾಸಿಟಿವ್

Harshitha Harish

ಕೆರೆ ಕಾಮೇಗೌಡ್ರ ಆರೋಗ್ಯ ಸ್ಥಿತಿ ಗಂಭೀರ: ಎಚ್ ಡಿ ಕುಮಾರಸ್ವಾಮಿ ಟ್ವೀಟ್

Harshitha Harish

Leave a Comment

error: Copying Content is Prohibited !!