ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಮಾನವ ಸಂಪನ್ಮೂಲ ವಿಭಾಗದ ಯೂಟ್ಯೂಬ್ ಚಾನೆಲ್‌ ಉದ್ಘಾಟನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಧರ್ಮಸ್ಥಳದ ಸಿಬ್ಬಂದಿ-ಮಾನವ ಸಂಪನ್ಮೂಲ ವಿಭಾಗದ ಯೂಟ್ಯೂಬ್ ಚಾನೆಲ್ ಅನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಇಂದು ಉದ್ಘಾಟಿಸಿದರು.

ಸಂಸ್ಥೆಯು ಪ್ರಾಯೋಜಿಸಿದ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಆರ್ಥಿಕ ಸಬಲೀಕರಣದ ಜೊತೆಗೆ ಸಾಮಾಜಿಕ ಹಾಗೂ ವೈಯಕ್ತಿಕ ಸಬಲೀಕರಣಕ್ಕಾಗಿ ನಿರಂತರವಾಗಿ ಅಗತ್ಯ ಮಾಹಿತಿಗಳನ್ನು ಒದಗಿಸಿಕೊಡಲಾಗುತ್ತದೆ. ಇದಕ್ಕಾಗಿ ಈಗಾಗಲೇ ‘ನಿರಂತರ ಪ್ರಗತಿ’ ಎಂಬ ಮಾಸ ಪತ್ರಿಕೆಯನ್ನು ಪ್ರಕಟಗೊಳಿಸಲಾಗುತ್ತಿದೆ. ಅಲ್ಲದೆ ಮಹಿಳಾ ಸಮಾವೇಶ, ವಿಚಾರ ಸಂಕಿರಣ, ತರಬೇತಿ ಪ್ರಾತ್ಯಕ್ಷಿಕೆಗಳ ಮೂಲಕ ಅನೇಕ ಮಾಹಿತಿ ಕಾರ್ಯಕ್ರಮಗಳನ್ನು ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಒದಗಿಸಲಾಗುತ್ತಿದೆ.

ಜ್ಞಾನವಿಕಾಸ ಕಾರ್ಯಕ್ರಮದ ಮೂಲಕವೂ ಮಹಿಳೆಯರ ದೈನಂದಿನ ಜೀವನದ ಅನುಕೂಲಕ್ಕಾಗಿ ಕೇಂದ್ರ ಸಭೆಗಳ ಮೂಲಕ ಪ್ರಸಕ್ತ ದಿನಗಳಿಗೆ ಪೂರಕ ವಿಚಾರಗಳನ್ನು ಚರ್ಚಿಸಿ ಮನನ ಮಾಡಲಾಗುತ್ತದೆ. ಈ ದಿಕ್ಕಿನಲ್ಲಿ ಮತ್ತೊಂದು ಮಹತ್ತರವಾದ ಹೆಜ್ಜೆಯನ್ನು ಇಡಲಾಗುತ್ತಿದ್ದು ಶ್ರದ್ಧಾ ಅಮಿತ್‍ರವರ ಮಾರ್ಗದರ್ಶನದಲ್ಲಿ ಯೂಟ್ಯೂಬ್ ಚಾನೆಲ್‍ನ್ನು ಇಂದು ಪ್ರಾರಂಭಮಾಡಲಾಯಿತು.

ಸಾಮಾಜಿಕ ಅಂತರ್ಜಾಲದಲ್ಲಿ ಅನೇಕ ಮಾಹಿತಿಗಳು ಲಭ್ಯವಿದ್ದು ಇದರಲ್ಲಿ ಮಹಿಳೆಯರಿಗೆ ಪೂರಕವಾಗಿರುವ ಮಾಹಿತಿಗಳನ್ನು ಆಯ್ಕೆ ಮಾಡಿ ಅವರಿಗೆ ತಲುಪಿಸುವ ಪ್ರಯತ್ನಗಳನ್ನು ಮಾಡುವುದಕ್ಕಾಗಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿರುವ ಅನೇಕ ಸಂಸ್ಥೆಗಳಲ್ಲಿ ಇರುವ ಮಾಹಿತಿ ಸಂಪನ್ಮೂಲಗಳನ್ನು ಸದಸ್ಯರಿಗೆ ತಲುಪಿಸುವುದಕ್ಕಾಗಿ ಪ್ರತ್ಯೇಕ ಚಾನೆಲ್ ಅನ್ನು ಮಾಡಲಾಗಿದೆ.

ಈ ಚಾನೆಲ್‍ನ ಮೂಲಕ ಗ್ರಾಮೀಣ ಭಾಗದ ಮಹಿಳೆಯರ ದೈನಂದಿನ ಜೀವನಕ್ಕೆ ಪೂರಕವಾದ ಮಾಹಿತಿ ಕ್ರೋಢೀಕರಣ ಮಾಡಲಾಗುತ್ತದೆ. ಮಹಿಳೆಯರು ಮನೆಯಲ್ಲಿಯೇ ಕುಳಿತು ತಮಗೆ ಉಪಯೋಗಕ್ಕೆ ಬರುವ ವಿಚಾರಗಳನ್ನು ತಿಳಿದುಕೊಳ್ಳಬಹುದು. ಆಪ್ತ ಸಮಾಲೋಚನೆ, ಮಕ್ಕಳ ಮಾನಸಿಕ ಬೆಳವಣಿಗೆಗಳು, ಇತ್ಯಾದಿ ವಿಚಾರಗಳ ಕುರಿತು ಮಾಹಿತಿಗಳನ್ನು ಈ ಚಾನೆಲ್‌ನಲ್ಲಿ ನೀಡಲಾಗುತ್ತದೆ.

ಮನೆಯಲ್ಲಿ ತರಕಾರಿ ಬೆಳೆಯುವ ವಿಧಾನ, ಕೈತೋಟ ರಚನೆ, ಟೆರೆಸ್ ಗಾರ್ಡನ್, ಮನೆಯ ತ್ಯಾಜ್ಯಗಳಿಂದ ಸಾವಯವ ಗೊಬ್ಬರ ತಯಾರಿ, ಮನೆ ನಿರ್ವಾಹಣೆ ಕುರಿತು ಮಾಹಿತಿ, ಯೋಗಾಸನಗಳ ಕುರಿತು ಕಿರುಚಿತ್ರ, ಕೋವಿಡ್-19 ಸಂದರ್ಭ ಸ್ವಚ್ಚತೆ, ಅಂತರ ಕಾಯ್ದುಕೊಳ್ಳುವಿಕೆ ಮತ್ತು ಸಾಮಾಜಿಕ ಅಂತರದ ಮಹತ್ವ, ಸರಕಾರಿ ಯೋಜನೆಗಳನ್ನು ಪಡೆದುಕೊಳ್ಳುವ ಕುರಿತು ಮಾಹಿತಿ, ನಮ್ಮ ಸಂಸ್ಥೆಯ ಕಾರ್ಯಕ್ರಮಗಳ ಕುರಿತು ಮಾಹಿತಿ, ತನ್ನನ್ನು ತಾನು ಪ್ರೀತಿಸುವ ಮತ್ತು ಗೌರವಿಸುವ ಕುರಿತು ಮಾಹಿತಿ, ಮಕ್ಕಳಿಗಾಗಿ ಸುಭಾಷಿತ, ಮೌಲ್ಯಾಧಾರಿತ ಕಥೆಗಳು, ಮಹಿಳೆಯರು ಓದಬಹುದಾದ ಪುಸ್ತಕಗಳ ಕುರಿತು ಮಾಹಿತಿ ಮುಂತಾದ ವಿಚಾರಗಳನ್ನು ಈ ಯೂ ಟ್ಯೂಬ್ ಚಾನೆಲ್‍ನಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.

ಈ ಚಾನೆಲ್ ಅನ್ನು ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು, ಶ್ರೀಮತಿ ಶ್ರದ್ಧಾ ಅಮಿತ್‍ರವರ ಸಮ್ಮುಖದಲ್ಲಿ ಯೂಟ್ಯೂಬ್ ಚಾನೆಲ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಟೆಲಿಗ್ರಾಂ ಬ್ರಾಡ್‌ಕಾಸ್ಟ್‌ ಮೂಲಕ ಉಪಯುಕ್ತ ನ್ಯೂಸ್‌ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

Related posts

ಕಾಸರಗೋಡಿನ ಕನ್ನಡಿಗರ ಹೃದಯ ಶ್ರೀಮಂತಿಕೆ ಮರೆಯಲಾಗದ್ದು: ಹಂಪನಾ ದಂಪತಿ

Upayuktha

ಶತಾಯುಷಿ ಹಿರಿಯಡ್ಕ ಗೋಪಾಲ ರಾಯರಿಗೆ ಜಿಲ್ಲಾ ಕ.ಸಾ.ಪ.ದಿಂದ ಶ್ರದ್ಧಾಂಜಲಿ

Upayuktha

‘ರಾಜಕುಮಾರ್- ಪಂಚಪದಿ’: ಕೊಳದ ಮಠದ ಶ್ರೀ ಶಾಂತವೀರ ಮಹಾಸ್ವಾಮೀಜಿಯವರಿಂದ ಲೋಕಾರ್ಪಣೆ

Upayuktha