ಕತೆ-ಕವನಗಳು

ದೃಶ್ಯಮಾಧ್ಯಮಗಳ ಸದ್ದು

ಸದ್ದು ಸದ್ದು ಏನಿದು ಸದ್ದು ,


ದೃಶ್ಯಮಾಧ್ಯಮದಿ ತರತರ ಸದ್ದು ,
ಬಿಸಿ ಬಿಸಿ ಸುದ್ದಿಯ ಗುದ್ದು ,
ಮಾಧ್ಯಮವೆಲ್ಲಾ ಎದ್ದೂ ಬಿದ್ದೂ ,
ಬ್ರೇಕಿಂಗ್ ನ್ಯೂಸ್ಗಳನು ಸಾಲು ಹೊದ್ದು ; ।

ಹೀಗೂ ಉಂಟು ಹಾಗೂ ಉಂಟು ;
ಬ್ರೇಕಿಂಗ್ ನ್ಯೂಸ್ಗಳಲಿ ಎಲ್ಲವು ಉಂಟು ,
ನೆರೆಹೊರೆ ಪಕ್ಕದ ಸುದ್ದಿಗಳುಂಟು ;
ಅಚ್ಚರಿ ಮೂಡಿಸೋ ಕಲ್ಪನೆಯುಂಟು,,
ಭಯವ ತೊರೆವ ಭರವಸೆಯುಂಟು ;
ನೈಜತೆ ಹುಡುಕುವ ನೀರವತೆಯುಂಟು… ॥

ಕೃೀಡಾ ಸುದ್ದಿಯ ತುಣುಕಿಲ್ಲ ;
ನಳ ಪಾಕಗಳ ರುಚಿಯಿಂದಿಲ್ಲ ;
ಟೋಪಿವಾಲಾ ಬರಲೊಲ್ಲ ;
ಚುಟುಕು ರಹಸ್ಯ ದೊರೆತರೆ ಸಾಕು
ಬಿಗ್ ಬ್ರೇಕಿಂಗ್ ನ್ಯೂಸ್ ದಿನವೆಲ್ಲ ;… ।

ಹಗಲಿರುಳೆನ್ನದೆ ಮಾಹಿತಿ ನೀಡುವ ,
ಮಾಧ್ಯಮ ಮಿತ್ರರೆ ನಮನಗಳು ….
ಒಳಿತು-ಕೆಡುಕು ಆರಿಸಿ ನೀಡೋ ,
ಆದರ್ಶ ಮನುಜರು ನೀವುಗಳು….
ಮೌಢ್ಯತೆ-ಸತ್ಯತೆ ಮನುಜಗದೊಳಗಾ
ಮದ್ದನು ನೀವ ಮಾಂತ್ರಿಕರು ; ॥

ಕುಂತರು ನಿಂತರೂ ಮಾಧ್ಯಮ ನಯನ,
ಎವೆ-ತೆರೆಯಿಕ್ಕಲು ಬರುವರು ಪಯಣ ;
ನೇರ ಸಂಪರ್ಕ ಸುದ್ದಿಗಳಣ್ಣ ,
ಎತ್ತ ಮಿಸುಕಿದರೂ ಬಿಡರಣ್ಣ ,
ಬ್ರೇಕಿಂಗ್ ನ್ಯೂಸ್ಗಳೇ ಪವರಣ್ಣ ; ।

✏️ ಸಮ್ಯಕ್ತ್ ಜೈನ್ ಕಡಬ

Related posts

ವರ್ಷಧಾರೆ

Harshitha Harish

ಕವನ: ನಿತ್ಯ ಸತ್ಯ

Upayuktha

ಕವನ: ಭವಿಷ್ಯ

Harshitha Harish