ಮನೆ ಮದ್ದು ಲೈಫ್‌ ಸ್ಟೈಲ್- ಆರೋಗ್ಯ

ಮೆಂತೆ ಸೇವಿಸಿದರೆ ಏನೇನು ಲಾಭಗಳಿವೆ ಗೊತ್ತಾ?

ಮೆಂತೆ ಕಾಳು ಹೇರಳ ಔಷಧೀಯ ಗುಣಗಳನ್ನು ಹೊಂದಿದೆ. ಒಂದು ಕಪ್ ಉಗುರು ಬೆಚ್ಚಗಿನ ನೀರಿಗೆ ಅರ್ಧ ಚಮಚ ಮೆಂತೆಯನ್ನು ರಾತ್ರಿ ವೇಳೆ ನೆನೆ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದು ಆರೋಗ್ಯ ರಕ್ಷಣೆಯ ದೃಷ್ಟಿಯಲ್ಲಿ ಬಹಳಷ್ಟು ಸಹಕಾರಿ.

– ಮೆಂತೆ ಸೇವನೆಯಿಂದ ಹೊಟ್ಟೆ ಉರಿ ಶಮನವಾಗಿ ಜೀರ್ಣಕ್ರಿಯೆ ಸರಾಗವಾಗುವುದು.

– ಮೆಂತೆ ಸೇವನೆ ತಾಯಂದಿರಲ್ಲಿ ಎದೆ ಹಾಲಿನ ಪ್ರಮಾಣ ಹೆಚ್ಚಳವಾಗುತ್ತದೆ.
– ಮೆಂತೆ ಸೇವನೆ ದೇಹದಲ್ಲಿರುವ ವಿಷಕಾರಕ ಅಂಶಗಳನ್ನು ಹೊರ ಹಾಕಿ, ಮಲಬದ್ಧತೆ ನಿವಾರಿಸುತ್ತದೆ.
– ಮೆಂತೆ ಸೇವನೆಯಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಯಾಗುತ್ತದೆ.
– ಮಧುಮೇಹ ನಿಯಂತ್ರಣದಲ್ಲಿಡುವ ಶಕ್ತಿ ಮೆಂತೆಗಿದೆ.

– ಮೆಂತೆ ನೀರಿನ ಸೇವನೆಯಿಂದ ಸಂಧಿವಾತದ ನೋವನ್ನು ನಿವಾರಣೆ.
– ಫಿಟ್ ಮತ್ತು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಮೆಂತೆ ಸೇವನೆ ಸಹಕಾರಿ.
– ಒಂದು ತಿಂಗಳ ಕಾಲ ಮೆಂತೆ ನೆನೆಸಿದ ನೀರನ್ನು ಕುಡಿದರೆ ಕಿಡ್ನಿಯಲ್ಲಿರುವ ಕಲ್ಲುಗಳನ್ನು ನಿರ್ಮೂಲನೆಯಾಗುವುದು.
– ಮೆಂತೆಯಲ್ಲಿರುವ ಗ್ಲಾಕ್ಟೊಮನ್ನನ್ ಮತ್ತು ಪೊ_ಟಾಶಿಯಂ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.
– ಗರ್ಭಪಾತ ಆಗುವ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೆ ಡೆಲಿವರಿ ನೋವನ್ನು ಕಡಿಮೆ ಮಾಡುತ್ತದೆ.
– ಮಹಿಳೆಯರಲ್ಲಿ ಪೀರಿಯಡ್ಸ್‌ ವೇಳೆ ಕಂಡು ಬರುವ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆ.

– ಆಮಶಂಕೆಯೆಂಬ ಭೇದಿಯಿಂದ ಬಳಲುವವರು ಮೆಂತೆಯನ್ನು ಹುರಿದು ಪುಡಿ ಮಾಡಿ, ಒಂದು ಕಪ್ ಮೊಸರಿಗೆ ಒಂದು ಚಮಚದಷ್ಟು ಮಿಶ್ರಣ ಮಾಡಿ ಕುಡಿದರೆ ಕಡಿಮೆಯಾಗುವುದು.

– ಮೆಂತ್ಯ ಕಾಳನ್ನು ಪುಡಿ ಮಾಡಿ ಒಂದು ಚಹಾ ಚಮಚ ನಿಂಬೆ ರಸ ಮತ್ತು ಜೇನಿನೊಂದಿಗೆ ಮಿಶ್ರ ಮಾಡಿ ಸೇವಿಸಿದರೆ ಜ್ವರ, ಗಂಟಲು ಕೆರೆತ ಮತ್ತು ಕೆಮ್ಮು ಕಡಿಮೆಯಾಗುತ್ತದೆ.

– ಮೆಂತೆಯನ್ನು ಹುರಿದು ಪುಡಿ ಮಾಡಿ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಚಮಚದಷ್ಟು ಪುಡಿಯನ್ನು ನೀರಿನಲ್ಲಿ ಕದಡಿ ಇಲ್ಲವೇ ನೇರವಾಗಿ ಪಂಚಕಜ್ಜಾಯದಂತೆ ತಿಂದು ನೀರು ಕುಡಿದಲ್ಲಿ ವಾತದೋಷ ನಿವಾರಣೆಯಾಗುವುದು.

Related posts

‘ಡಿಜಿಟಲ್ ಅಮಲು’ ಇಳಿಸೋದು ಹೇಗೆ…?

Upayuktha

ಆರೋಗ್ಯವೇ ಭಾಗ್ಯ: ತುಳಸಿ ಎಲೆಗಳ ಸೇವನೆಯಿಂದ ಏನೇನು ಲಾಭಗಳಿವೆ ಗೊತ್ತಾ?

Upayuktha

ಪುನರ್ಪುಳಿ (ಮುರುಗಲ) ಬೀಜದ ಎಣ್ಣೆಗೆ ಬಲು ಬೇಡಿಕೆ: ಆಹಾರ ಮತ್ತು ಔಷಧಕ್ಕೆ ಬಳಕೆ

Upayuktha

Leave a Comment

error: Copying Content is Prohibited !!