ನಗರ ಸ್ಥಳೀಯ

ಸಂಸ್ಕಾರವನ್ನು ಸಂಪನ್ನಗೊಳಿಸುವುದೇ ಸಾಹಿತ್ಯ: ಇರಾ ನೇಮು ಪೂಜಾರಿ

ಮಂಗಳೂರು: ‘ಸಂಸ್ಕಾರವನ್ನು ಸಂಪನ್ನಗೊಳಿಸುವುದೇ ಸಾಹಿತ್ಯ, ಸಾಹಿತ್ಯದಿಂದ ಮನಸ್ಸು ಸೃಜಶೀಲವಾಗಿರುತ್ತದೆ’ ಎಂದು ಹಿರಿಯ ಕವಿ ಇರಾ ನೇಮು ಪೂಜಾರಿ ಹೇಳಿದರು.

ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಡಿಜಿಟಲ್ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುಟುಕು ಸಾಹಿತ್ಯ ಗಾತ್ರದಲ್ಲಿ ಸಣ್ಣದಾದರೂ ಅದರ ಅರ್ಥ ಸಾಮರ್ಥ್ಯ ವಿಶಾಲವಾದದ್ದು ಮತ್ತು ಅದಕ್ಕೆ ಬಹುದೊಡ್ಡ ಪರಂಪರೆ ಇದೆ ಎಂದು ಅವರು ಅಭಿಪ್ರಾಯ ಪಟ್ಟರು.

ಸತ್ಯವತಿ ಭಟ್ ಕೊಳಚಪ್ಪು, ಸಂಧ್ಯಾ ನವೀನ್ ಮೂಡುಬೆಳ್ಳೆ, ಹರೀಶ್ ಸುಲಾಯ ಒಡ್ಡಂಬೆಟ್ಟು, ವಿಘ್ನೇಶ್ ಭಿಡೆ, ವಿಜಯಲಕ್ಷ್ಮೀ ಕಟೀಲು, ಚಂದನಾ ಕೆ ಎಸ್, ರೇಖಾ ನಾರಾಯಣ್ ಪಕ್ಷಿಕೆರೆ, ಅರುಂಧತಿ ರಾವ್, ಹಿತೇಶ್ ಕುಮಾರ್, ರಶ್ಮಿ ಸನಿಲ್, ವಾಣಿ ಲೋಕಯ್ಯ, ಚಿತ್ರಾಶ್ರೀ ಕೆ.ಎಸ್, ರೇಮಂಡ್ ಡಿಕುನಾ, ಲಕ್ಷ್ಮೀ ವಿ. ತಲಾಂಜೇರಿ, ಡಾ.ಸುರೇಶ್ ನೆಗಳಗುಳಿ, ಆಕೃತಿ ಐ ಎಸ್ ಭಟ್, ಅಕ್ಷಯ ಆರ್ ಶೆಟ್ಟಿ, ರೇಖಾ ಸುದೇಶ್ ರಾವ್, ಕುಮುದಾ ಶೆಟ್ಟಿ, ಅಚ್ಯುತ ರಾವ್ ಮೊದಲಾದವರು ಕವಿಗೋಷ್ಠಿಯಲ್ಲಿ ತಮ್ಮ ಚುಟುಕುಗಳನ್ನು ವಾಚಿಸಿದರು.

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್, ಪರಿಷತ್ತಿನ ಮಾಜಿ ತಾಲೂಕು ಅಧ್ಯಕ್ಷರುಗಳಾದ ಪ್ರೊ.ಪಿ.ಕೃಷ್ಣಮೂರ್ತಿ, ಸುಬ್ರಾಯ ಭಟ್, ಅರೆಹೊಳೆ ಸದಾಶಿವ ರಾವ್, ಖ್ಯಾತ ವ್ಯಂಗ್ಯಚಿತ್ರಕಾರ ವೆಂಕಟ ಭಟ್ ಎಡನೀರು ಮೊದಲಾದವರು ಉಪಸ್ಥಿತರಿದ್ದರು.

ತಾಲೂಕು ಚುಸಾಪ ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು ಅವರು ಕಾರ್ಯಕ್ರಮ ನಿರೂಪಿಸಿದರು.

 

 

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

Related posts

ಕುತ್ಲೂರಿನಲ್ಲಿ ಹುಲಿ ಪ್ರತ್ಯಕ್ಷ, ಗ್ರಾಮದಲ್ಲಿ ಆತಂಕ

Upayuktha

ಬೆಳ್ಳೂರು ಶಾಲಾ ವಿದ್ಯಾರ್ಥಿ ವಿಘ್ನರಾಜ್‌ಗೆ ರಾಷ್ಟ್ರೀಯ ಸ್ಕಾಲರ್‌ಶಿಪ್‌

Upayuktha

ದ.ಕ. 16ಕ್ಕೇರಿದ ಕೊರೊನಾ ಪ್ರಕರಣ

Upayuktha