ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ತೆಲುಗಿನ ಹಕ್ಕನ್ನು ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಪಡೆದುಕೊಂಡಿದ್ದಾರೆ ಎಂದು ಹೊಂಬಾಳೆ ಫಿಲ್ಮ್ ಹೌಸ್ ಹೇಳಿದೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹಕ್ಕಿಗಾಗಿ ದಿಲ್ ರಾಜು ಅವರು 65 ಕೋಟಿ ರೂಪಾಯಿ ನೀಡಿರುವರು ಎಂದು ಮೂಲಗಳು ತಿಳಿಸಿವೆ.
70 ಕೋಟಿ ರೂ. ಬೇಡಿಕೆಯನ್ನು ಇಡಲಾಗಿತ್ತು. ಆದರೆ ಕೊನೆಯದಾಗಿ ನಿರ್ಮಾಪಕರು 65 ಕೋಟಿ ರೂ. ನೀಡಲು ಒಪ್ಪಿಕೊಂಡರು ಎಂದು ಮೂಲಗಳಿಂದ ತಿಳಿದುಬಂದಿದೆ.
ಕೆಜಿಎಫ್ ಚಾಪ್ಟರ್ 2 ನಲ್ಲಿ ಯಶ್, ಸಂಜಯ್ ದತ್, ರವೀನ ಟಂಡನ್, ಪ್ರಕಾಶ್ ರಾಜ್ ಮತ್ತು ಇತರ ಹಲವಾರು ಮಂದಿ ನಟಿಸಿರುವರು.