ನಿಧನ ಸುದ್ದಿ ಸಿನಿಮಾ-ಮನರಂಜನೆ

ದೃಶ್ಯಂ ಸಿನಿಮಾ ಖ್ಯಾತಿಯ ನಿರ್ದೇಶಕ ನಿಧನ

ಭಾರತೀಯ ಸಿನಿಮಾರಂಗಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ದೃಶ್ಯಂ ಸಿನಿಮಾ ಖ್ಯಾತಿಯ ನಿರ್ದೇಶಕ ನಿಶಿಕಾಂತ್ ಕಾಮತ್ ಆಗಸ್ಟ್ 17ಕ್ಕೆ ರಾತ್ರಿ ನಿಧನ ಹೊಂದಿದ್ದಾರೆ.

ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ 50 ವರ್ಷದವರಾದ ನಿಶಿತಾಂತ್ ಹೈದರಾಬಾದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜುಲೈ 31ರಂದು ನಿಶಿಕಾಂತ್ ಹೈದರಾಬಾದ್ ನ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ನಿಧನರಾದರು.

ನಿಶಿಕಾಂತ್ ಮರಾಠಿ ಸಿನಿಮಾ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದರು. 2005ರಲ್ಲಿ ರಿಲೀಸ್ ಆದ ‘ಡೊಂಬಿವಾಲಿ ಫಾಸ್ಟ್’ ನಿಶಿಕಾಂತ್ ನಿರ್ದೇಶದ ಚೊಚ್ಚಲ ಸಿನಿಮಾ. ಈ ಸಿನಿಮಾ ಮರಾಠಿಯಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿದೆ.

2006ರಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾರೆ. ಇನ್ನೂ 2015ರಲ್ಲಿ ರಿಲೀಸ್ ಆದ ಅಜಯ್ ದೇವಗನ್ ಟಬು ಅಭಿನಯದ ಮಲಯಾಳಂನ ಸೂಪರ್ ಹಿಟ್ ‘ದೃಶ್ಯಂ’ ಸಿನಿಮಾದ ಹಿಂದಿ ರಿಮೇಕ್ ಮಾಡಿ ರಾಷ್ಟ್ರೀಯ ಗಮನ ಸೆಳೆದಿದ್ದರು.

ಇವರ ನಿಧನ ಸುದ್ದಿ ಕೇಳಿ ಸಿನಿಮಾ ರಂಗದ ಹಲವು ಗಣ್ಯರು ಕಂಬನಿ ಮಿಡಿದರು.

Related posts

ಬಾಳೆಕೋಡಿ ಶಿಲಾಂಜನ ಮಠದ ಶಶಿಕಾಂತಮಣಿ ಸ್ವಾಮೀಜಿ ಇನ್ನಿಲ್ಲ

Upayuktha

ಕಲಬುರಗಿ: ಹಿರಿಯ ಸಾಹಿತಿ ಗೀತಾ ನಾಗಭೂಷಣ್ ನಿಧನ

Upayuktha

ಹಿರಿಯ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ವಿಧಿವಶ

Upayuktha