ಚಂದನವನ- ಸ್ಯಾಂಡಲ್‌ವುಡ್ ಶುಭಾಶಯಗಳು

ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ದೇಶಕ ರಾಜಮೌಳಿ

ಬೆಂಗಳೂರು : ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಯವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 47ನೇ ವಸಂತಕ್ಕೆ ಕಾಲಿಟ್ಟಿರುವ ರಾಜಮೌಳಿ ಅವರಿಗೆ ಅಭಿಮಾನಿಗಳಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ನೆಚ್ಚಿನ ನಿರ್ದೇಶಕ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬದಂತೆ ಸಂಭ್ರಮ ಪಡುತ್ತಿದ್ದಾರೆ.

ರಾಜಮೌಳಿ ರವರು ನಿರ್ದೇಶಕ ಮಾತ್ರವಲ್ಲದೇ, ಅವರು ಉತ್ತಮ ಚಿತ್ರಕಥೆಗಾರ, ಸ್ಟಂಟ್ ನಿರ್ದೇಶಕ ಕೂಡ ಆಗಿದ್ದಾರೆ. ಆಕ್ಷನ್ ಪ್ಯಾಕ್ ಸಿನಿಮಾಗಳಿಗೆ ರಾಜಮೌಳಿ ಹೆಸರುವಾಸಿ. ಬಾಹುಬಲಿ ಸಿನಿಮಾ ಮೂಲಕ ರಾಜಮೌಳಿ ಭಾರತೀಯ ಸಿನಿಮಾರಂಗದಲ್ಲಿ ಹೆಸರು ಮಾಡಿದ್ದರು. ಈ ದೇಶ ಮಾತ್ರವಲ್ಲದೆ ವಿದೇಶದಲ್ಲೂ ಬಾಹುಬಲಿ ದೊಡ್ಡ ಮಟ್ಟಕ್ಕೆ ಹೆಸರು ಗಳಿಸಿ ಕೊಟ್ಟಿದೆ.

ಅವರ ಜೊತೆ ಸಿನಿಮಾ ಮಾಡಲು ಭಾರತೀಯ ಸಿನಿ ತಾರೆಯರು ಕಾಯುತ್ತಿದ್ದು, ಸ್ಟೂಡೆಂಟ್ ನಂ.1 ಸಿನಿಮಾ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ರಾಜಮೌಳಿ 10ಕ್ಕೂ ಹೆಚ್ಚು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

ಇವರ ನಿರ್ದೇಶನದ ಸಿನಿಮಾಗಳು ಸೈ, ಮಗಧೀರ, ಮರ್ಯಾದ ರಾಮಣ್ಣ, ಚತ್ರಪತಿ, ವಿಕ್ರಮಾರ್ಕುಡು, ಈಗ ಮತ್ತು ಬಾಹುಬಲಿ ಸಿನಿಮಾಗಳು ತೆಲುಗು ಸಿನಿಮಾರಂಗದಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡಿವೆ.

ಹಲವಾರು ಅದ್ಭುತ ಸಿನಿಮಾಗಳನ್ನು ನೀಡಿದ ರೌಜಮೌಳಿ ಸದ್ಯಕ್ಕೆ ಆರ್ ಆರ್ ಆರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ಹಾಗೂ ಜೂ.ಎನ್ ಟಿ ಆರ್ ಇಬ್ಬರು ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾವು ಮುಂದಿನ ವರ್ಷ ತೆರೆ ಮೇಲೆ ಮೂಡಿ ಬರುತ್ತದೆ. ಇವರಿಂದ ಇನ್ನೂ ಹೆಚ್ಚಿನ ಚಿತ್ರಗಳು ತೆರೆ ಮೇಲೆ ಬರಲಿ ಎಂಬುದು ಅಭಿಮಾನಿಗಳ ಆಶಯ.

Related posts

ನಟ ಕೋಮಲ್ ಅವರ ಹೊಸ ‘2020’ ಚಿತ್ರಕ್ಕೆ ನಾಯಕಿಯಾಗಿ ಧನ್ಯಾ ಬಾಲಕೃಷ್ಣ

Harshitha Harish

ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ದಲ್ಲಿ ಏರುಪೇರು; ಆಸ್ಪತ್ರೆ ದಾಖಲು

Harshitha Harish

ಜವಾಹರ್ ಲಾಲ್ ನೆಹರು ಅವರ 131 ನೇ ಜನ್ಮದಿನ : ಪ್ರಧಾನಿಯಿಂದ ಗೌರವ

Harshitha Harish