ಚಂದನವನ- ಸ್ಯಾಂಡಲ್‌ವುಡ್

ನಿರ್ದೇಶಕ ಸಿಂಪಲ್ ಸುನಿ ಹುಟ್ಟುಹಬ್ಬ; ‘ರಾಬಿನ್ ಹುಡ್’ ಸಿನಿಮಾ ಅನೌನ್ಸ್

ಸ್ಯಾಂಡಲ್ ವುಡ್ ನಿರ್ದೇಶಕರಾದ ಸಿಂಪಲ್ ಸುನಿ ಯವರ ಇಂದು ಹುಟ್ಟುಹಬ್ಬದ ಸಂಭ್ರಮ. 34ನೇ ವರ್ಷದ ಜನ್ಮದಿನವನ್ನು ನಿರ್ದೇಶಕ ಸಿಂಪಲ್ ಸುನಿ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿಶೇಷ ವೆಂದರೆ ಜನ್ಮದಿನವೇ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನ್ ಭರ್ಜರಿ ಗಿಫ್ಟ್ ನ್ನು ನೀಡಿದ್ದಾರೆ.

 

ಅದೇನೆಂದರೆ ಸುನಿ ನಿರ್ದೇಶನದ ಹೊಸ ಸಿನಿಮಾವನ್ನು ಅನೌನ್ಸ್ ಮಾಡುವ ಮೂಲಕ ಬರ್ತ್ ಡೇ ಗಿಪ್ಟ್ ನೀಡಿದ್ದಾರೆ. ಅದೇ ಸಿನಿಮಾ ಕ್ಕೆ ‘ರಾಬಿನ್ ಹುಡ್’ ಎಂದು ಟೈಟಲ್ ಇಡಲಾಗಿದೆ.

ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಸಿನಿಮಾ ವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದು, ಸುನಿ ಮತ್ತು ಪುಷ್ಕರ್ ಕಾಂಬಿನೇಷನ್ ನಲ್ಲಿ ‘ಅವತಾರ್ ಪುರುಷ’ ಸಿನಿಮಾ ಮೂಡಿ ಬರುತ್ತಿದೆ. ಈಗ ಅದೇ ರೀತಿಯಲ್ಲಿ ಕಾಂಬಿನೇಷನ್ “ರಾಬಿನ್ ಹುಡ್” ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದೆ.

 

ನಿರ್ದೇಶಕ ಸುನಿ ಯವರು ಅವತಾರ್ ಪುರುಷ ಸಿನಿಮಾದಲ್ಲಿ ಬ್ಯುಸಿಯಾಗಿದ್ದು. ಶರಣ್ ಮತ್ತು ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಲಾಕ್ ಡೌನ್ ನಂತರ ಸಿನಿಮಾ ಚಿತ್ರೀಕರಣ ಆರಂಭ ಮಾಡಿದ್ದು, ಇದೀಗ ಹೆಚ್ಚಿನ ಚಿತ್ರೀಕರಣ ಮಾಡಿ ಮುಗಿಸಿದ್ದು , ಸುನಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಹೊಸ ಸಿನಿಮಾ “ರಾಬಿನ್ ಹುಡ್” ಮುಂದಿನ ವರ್ಷ ತಯಾರಾಗುತ್ತದೆ.

Related posts

ಇಂದಿನ ಐಕಾನ್- ಕನ್ನಡದ ಚಾರಿತ್ರಿಕ ನಟ ದತ್ತಣ್ಣ (H.G. ದತ್ತಾತ್ರೇಯ)

Upayuktha

ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್‌ ಜಾರಿ

Harshitha Harish

ಹಿರಿಯ ಚಲನಚಿತ್ರ ನಟ ಮಾಧವ ಜಪ್ಪು ಪಟ್ನ ನಿಧನ

Harshitha Harish

Leave a Comment