ನಗರ ಪ್ರಮುಖ ಸ್ಥಳೀಯ

ಮಂಗಳೂರು ನೂತನ ಮೇಯರ್ ದಿವಾಕರ್ ಪಾಂಡೇಶ್ವರ, ಉಪ ಮೇಯರ್ ಜಾನಕಿ

 

ಮಂಗಳೂರು: ಮಂಗಳೂರು ನೂತನ ಮೇಯರ್ ಆಗಿ ಬಿಜೆಪಿಯ ದಿವಾಕರ್ ಪಾಂಡೇಶ್ವರ ಹಾಗೂ ಉಪ ಮೇಯರ್ ಆಗಿ ಅದೇ ಪಕ್ಷದ ಜಾನಕಿ ಯಾನೆ ವೇದಾವತಿ  ಅವರು ಶುಕ್ರವಾರ ಆಯ್ಕೆಗೊಂಡಿದ್ದಾರೆ. ಮೇಯರ್ ಸ್ಥಾನದ ಬಿಜೆಪಿ ಅಭ್ಯರ್ಥಿ ದಿವಾಕರ್ ಪರ 46 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೇಶವ ಮರೋಳಿ ಪರವಾಗಿ 15 ಮತಗಳು ಚಲಾವಣೆಯಾದವು.

ಎಸ್‌ಡಿಪಿಐಯ ಇಬ್ಬರು ಸದಸ್ಯರು ತಟಸ್ಥರಾಗಿದ್ದರು. ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯ ಜಾನಕಿ ಅವರ ಪರವಾಗಿ 46 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಝೀನತ್ ಸಂಶುದ್ದೀನ್ ಪರವಾಗಿ 17 ಮತಗಳು ಚಲಾವಣೆಯಾದವು. ಎಸ್ ಡಿಪಿಐಯ ಇಬ್ಬರು ಸದಸ್ಯರು ಬೆಂಬಲ ನೀಡಿದರು. ಸದನದಲ್ಲಿ ಕೈ ಎತ್ತುವ ಮೂಲಕ ಚುನಾವಣೆ ನಡೆಯಿತು.

ಪಾಲಿಕೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್‌ಡಿಪಿಐ 2 ಸ್ಥಾನವನ್ನು ಹೊಂದಿದೆ. ಮತದಾನದಲ್ಲಿ ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪಾಲ್ಗೊಂಡಿದ್ದರು.

ದಿವಾಕರ್ ಅವರ ಹೆಸರನ್ನು ಬಿಜೆಪಿಯ ಜಯಾನಂದ ಆಂಚನ್ ಸೂಚಿಸಿದರು. ಸುಧೀರ್ ಶೆಟ್ಟಿ ಕಣ್ಣೂರು ಅನುಮೋದಿಸಿದರು. ಕೇಶವ ಮರೋಳಿ ಅವರ ಹೆಸರನ್ನು ಕಾಂಗ್ರೆಸ್‌ನ ಶಶಿಧರ ಹೆಗ್ಡೆ ಸೂಚಿಸಿದರು. ಅಬ್ದುಲ್ ರವೂಫ್ ಅನುಮೋದಿಸಿದರು. ಅದೇ ರೀತಿ ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯ ಜಾನಕಿ ಯಾನೆ ವೇದಾವತಿ ಅವರ ಹೆಸರನ್ನು ಸುಮಿತ್ರಾ ಕರಿಯ ಸೂಚಿಸಿದರು. ಪೂರ್ಣಿಮಾ ಅನುಮೋದಿಸಿದರು.

ನೂತನ ಮೇಯರ್ ಆಗಿ ಆಯ್ಕೆಗೊಂಡ ದಿವಾಕರ್ ಅವರು ಕಂಟೋನ್ಮೆಂಟ್ ವಾರ್ಡ್ ನಂ. 46ರಿಂದ ಸತತ ಮೂರನೇ ಬಾರಿಗೆ ಆಯ್ಕೆಗೊಂಡಿದ್ದಾರೆ. ಈ ಹಿಂದೆ ಅವರು ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಉಪ ಮೇಯರ್ ವೇದಾವತಿ ಅವರು ಕುಳಾಯಿ ವಾರ್ಡ್ ನಂ.9ರಿಂದ ಎರಡನೇ ಬಾರಿಗೆ ಆಯ್ಕೆಗೊಂಡಿದ್ದಾರೆ.

ಮೇಯರ್ ಹುದ್ದೆಯನ್ನು ಹಿಂದುಳಿದ ವರ್ಗ ‘ಎ’ ಹಾಗೂ ಉಪ ಮೇಯರ್ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ಮೀಸಲಾಗಿಡಲಾಗಿತ್ತು.

ಮಂಗಳೂರು ಮಹಾನಗರಪಾಲಿಕೆ ಮಂಗಳಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು. ಮೈಸೂರು ಪ್ರಾದೇಶಿಕ ಆಯುಕ್ತರ ವಿ. ಯಶವಂತ ಅವರ ಸಮಕ್ಷಮದಲ್ಲಿ ಚುನಾವಣೆ ಜರುಗಿತು. ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಕೆ.ಎಂ. ಗಾಯತ್ರಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಪಾಲಿಕೆ ಕಮಿಷನರ್ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

……………..
ಪಾಲಿಕೆ ಸ್ಥಾಯಿ ಸಮಿತಿಗೆ ಆಯ್ಕೆ
ಸಾರ್ವಜನಿಕ ಆರೋಗ್ಯ, ಶಿಕ್ಷಣ, ನ್ಯಾಯ ಸಮಿತಿ
ಆಶ್ರಫ್, ಪೂರ್ಣಿಮಾ, ಚಂದ್ರಾವತಿ, ವರುಣ್ ಚೌಟ, ಲೋಹಿತ್, ಭರತ್ ಕುಮಾರ್, ಸುಮಿತ್ರಾ
….
ಪಟ್ಟಣ ಯೋಜನೆ, ಸುಧಾರಣೆ ಸ್ಥಾಯಿ ಸಮಿತಿ
ಅಬ್ದುಲ್ ಲತೀಫ್, ಎ.ಸಿ. ವಿನಯರಾಜ್, ಶರತ್ ಕುಮಾರ್, ಶಕೀಲಾ ಕಾವ, ಕದ್ರಿ ಮನೋಹರ ಶೆಟ್ಟಿ, ಕಿಶೋರ್ ಕೊಟ್ಟಾರಿ, ನಯನಾ ಆರ್.
……
ಲೆಕ್ಕ ಪತ್ರ ಸ್ಥಾಯಿ ಸಮಿತಿ
ಅನಿಲ್ ಕುಮಾರ್, ಎಂ. ಶಶಿಧರ ಹೆಗ್ಡೆ, ಜಗದೀಶ್ ಶೆಟ್ಟಿ, ಗಾಯತ್ರಿ, ಸಂಧ್ಯಾ, ರೇವತಿ, ಲೋಕೇಶ್
….
ತೆರಿಗೆ ಮತ್ತು ಅಪೀಲು
ಸಂಶುದ್ದೀನ್, ಜೇಸಿಂತಾ, ಕಿರಣ್ ಕುಮಾರ್, ಹೇಮಲತಾ, ಭಾನುಮತಿ, ಸಂಗೀತಾ, ಸಂದೀಪ್

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ತುಳುನಾಡಿನ ಖ್ಯಾತ ಇತಿಹಾಸಕಾರ ಡಾ. ವಸಂತ ಶೆಟ್ಟಿ ಸಂಸ್ಮರಣ ಉಪನ್ಯಾಸ

Upayuktha

‘ಹೋಗಿ ಬನ್ನಿ ಸೀತ’ಕ್ಕ: ಪತ್ರಕರ್ತೆ ಸೀತಾಲಕ್ಷ್ಮೀಗೆ ಶ್ರದ್ಧಾಂಜಲಿ

Upayuktha

ಬಂಗರ ಪಾಲ್ಕೆ ಫಾಲ್ಸ್ ದುರಂತ: ಘಟನಾ ಸ್ಥಳಕ್ಕೆ ದ. ಕ ಡಿಸಿ ಭೇಟಿ

Sushmitha Jain