ಗ್ರಾಮಾಂತರ ವ್ಯಾಪಾರ- ವ್ಯವಹಾರ ಸ್ಥಳೀಯ

ಭಾರತ ಪ್ರಬಲ ರಾಷ್ಟ್ರ ಆಗಬೇಕಾದರೆ ಸ್ವದೇಶಿ ಜೀವನವೇ ನಮ್ಮೆಲ್ಲರ ಮೂಲಮಂತ್ರವಾಗಬೇಕು: ಶರತ್ ಕೃಷ್ಣ ಪಡ್ವೆಟ್ನಾಯ

ಬೆಳ್ತಂಗಡಿ: ಭಾರತ ಸಾಂಸ್ಕೃತಿಕವಾಗಿ, ನೈತಿಕ, ಧಾರ್ವಿುಕ, ವಿಜ್ಞಾನ-ತಂತ್ರಜ್ಞಾನ, ಸಾಮಾಜಿಕ, ಆರ್ಥಿಕ, ರಾಜತಾಂತ್ರಿಕವಾಗಿಯೂ ಪ್ರಬಲ ರಾಷ್ಟ್ರ ಆಗಬೇಕಾದರೆ ಸ್ವದೇಶಿ ಜೀವನವೇ ನಮ್ಮೆಲ್ಲರ ಮೂಲಮಂತ್ರವಾಗಬೇಕು ಎಂದು ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ ಹೇಳಿದರು.

‘‘ಇಂದು ಪ್ರತಿಯೊಂದು ವಸ್ತುಗಳು ವಿದೇಶಿ ಮೂಲದವದಾಗಿದ್ದು, ಎಲ್ಲರೂ ಗುಣಮಟ್ಟವಿಲ್ಲದ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ನಮ್ಮಲ್ಲಿಯೇ ಗುಣಮಟ್ಟದಿಂದ ಕೂಡಿದ ಉತ್ಪನ್ನಗಳನ್ನು ಯಾರು ಬಳಸುವುದಿಲ್ಲ. ಇದರಿಂದ ದೇಶಕ್ಕೂ ಹಾಗೂ ನಮ್ಮ ಆರೋಗ್ಯಕ್ಕೂ ನಷ್ಟ ಉಂಟಾಗುತ್ತಿದ್ದು,  ಇದನ್ನು ತಪ್ಪಿಸಲು ನಮ್ಮಲ್ಲಿಯೇ ಉತ್ಪಾದನೆಯಾಗುವ ವಸ್ತುಗಳನ್ನು ಬಳಕೆ ಮಾಡಬೇಕು ಎಂದು ಶರತ್ ಕೃಷ್ಣ ಪಡ್ವೆಟ್ನಾಯ ಹೇಳಿದರು.

ಫೆ.20ರಂದು ಬೆಳ್ತಂಗಡಿ ಮಂಜುನಾಥ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡ ಧನ್ವಿತ ಓಕೆ ಲೈಫ್ ಕೇರ್ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶಭಕ್ತ ಭಾರತೀಯರು, ವ್ಯಾಪಾರಸ್ಥರು ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ವಸ್ತುಗಳನ್ನು ತಮ್ಮದಾಗಿಸಿಕೊಂಡಾಗ ಮಾತ್ರ ಆತ್ಮನಿರ್ಭರ ಭಾರತಕ್ಕೆ ಒಂದು ಅರ್ಥ ಬರಲಿದೆ. ವಿದೇಶಿ ಕಂಪನಿಗಳು ದೇಶವನ್ನು ಲೂಟಿ ಮಾಡುತ್ತಿದ್ದು, ಭಾರತದಲ್ಲಿ  ತಯಾರಿಸಿದ ವಸ್ತುಗಳನ್ನು ಬಳಸುವುದರಿಂದ ದೇಶ ಸಶಕ್ತಗೊಂಡು ಮುಂದಿನ 3 ವರ್ಷಗಳಲ್ಲಿ ಭಾರತ ವಿಶ್ವ ಗುರು ಅಗುದರಲ್ಲಿ ಸಂಶಯ ವಿಲ್ಲ ಎಂದು ಹೇಳಿದರು.

ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಬಳಕೆಯನ್ನು ತ್ಯಜಿಸಿ, ಸಾವಯವ ಮತ್ತು ದೇಶಿ ಆಹಾರ ಪದಾರ್ಥಗಳನ್ನು ಬಳಸುವುದರಿಂದ ಉತ್ತಮ ಆರೋಗ್ಯದೊಂದಿಗೆ ಸಮಾಜವೂ ಸದೃಢಗೊಳ್ಳಲು ಸಹಕಾರಿಯಾಗಲಿದೆ. ಇದರಿಂದ ಆರ್ಥಿಕವಾಗಿ ದೇಶ ಸದೃಢಗೊಂಡು ಮುಂದಿನ 3 ವರ್ಷ ಗಳಲ್ಲಿ ಭಾರತ ವಿಶ್ವ ಗುರು ಅಗುದರಲ್ಲಿ ಸಂಶಯ ವಿಲ್ಲ ಎಂದು ಹೇಳಿದರು.

ಈ ವೇಳೆ ಮುಖ್ಯ ಅತಿಥಿ ಉದ್ಯಮಿ ಶ್ರೀ ರಾಮದಾಸ್ ಪೈ ಮಾತನಾಡಿ -ಸ್ವದೇಶೀ ಉತ್ಪನ್ನಗಳನ್ನು ಬಳಸುವ ಮೂಲಕ ಉದ್ಯೋಗವಕಾಶವನ್ನು ಸೃಷ್ಟಿಸೋಣ ಹಾಗೂ ದೇಶದ ಆರ್ಥಿಕತೆಯನ್ನು ಬೆಳೆಸೋಣ ಎಂದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇನ್ನೋರ್ವ ಅತಿಥಿ ಪಿಲ್ಯದ ನಾಟಿ ವೈದ್ಯ ಬೇಬಿ ಪೂಜಾರಿ ಮಾತನಾಡಿ ನಾವು ಕೊಡುವ ನಾಟಿ ಔಷದಿ ಮತ್ತು ಓಕೆ ಲೈಫ್ ಕೇರ್ ನಲ್ಲಿ ಸಿಗುವ ವಸ್ತುಗಳು ಸಮವಾಗಿ ಇದೆ ಎಂದರು.

Home

ಓಕೆ ಕೇರ್ ನ ರಾಷ್ಟ್ರೀಯ ತರಬೇತುದಾರ ಚಂದ್ರಹಾಸ ಶೆಟ್ಟಿ ಮಾತನಾಡಿ ಸಂಸ್ಥೆಯಲ್ಲಿ ಸಿಗುವ ಎಲ್ಲಾ ಉತ್ಪನ್ನ ಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆ ಮಾಲಕರಾದ ಉಮೇಶ್ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂದ್ರಹಾಸ ಶೆಟ್ಟಿ ಸ್ವಾಗತಿ,  ಉಮೇಶ್ ಬಂಗೇರ ಧನ್ಯವಾದ ನೀಡಿದರು. ಸತೀಶ್ ಬಂಗೇರ ಮತ್ತು ಶೈಲಜಾ ಸತೀಶ್ ನಿರೂಪಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಆಳ್ವಾಸ್ ವಿದ್ಯಾರ್ಥಿಗಳ ಮಾದರಿ ಕಾರ್ಯಕ್ರಮ: ಜಲಸಂರಕ್ಷಣೆಗೆ ಸಾಂಪ್ರದಾಯಿಕ ಕಟ್ಟಗಳ ನಿರ್ಮಾಣ

Upayuktha

ಬೆಳ್ತಂಗಡಿ: ಮೂವರು ಸ್ಕೂಟರ್ ಕಳ್ಳರ ಬಂಧನ

Upayuktha

ಡಾ. ಕೆ.ಪಿ. ಲಕ್ಷ್ಮೀನಾರಾಯಣ ಮೂಡಿತ್ತಾಯ ನಿಧನ

Upayuktha