ಮೊಗ್ರು: ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಇಲಾಖೆಯ 2019-20ನೇ ಸಾಲಿನ ಆತ್ಮ ಯೋಜನೆಯಡಿ ಕೊಡ ಮಾಡುವ ಸಮಗ್ರ ಕೃಷಿ ವಿಭಾಗದ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಮೊಗ್ರು ಗ್ರಾಮದ ಕಡಮ್ಮಾಜೆ ಮನೆಯ ದೇವಿಪ್ರಸಾದ್ ಅವರು ಪಾತ್ರರಾಗಿದ್ದಾರೆ.
30ವರ್ಷಗಳಿಗಿಂತ ಸುರ್ಧೀಗವಾಗಿ ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೆ, ಸಾವಯವ ಕೃಷಿಯನ್ನು ಮಾಡುತ್ತಿದ್ದು, ಇವರ ಸಾಧನೆಯನ್ನು ಪರಿಗಣಿಸಿ, ದ.ಕ. ಜಿಲ್ಲಾ ಕೃಷಿ ಇಲಾಖೆ ಇವರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.