ನಗರ ಸ್ಥಳೀಯ

ಎಐಸಿಸಿ ಕಾರ್ಯದರ್ಶಿಯಾಗಿ ನೇಮಕಗೊಂಡ ಐವನ್ ಡಿಸೋಜ ಅವರಿಗೆ ದ.ಕ ಜಿಲ್ಲಾ ಇಂಟಕ್‌ ವತಿಯಿಂದ ಸಮ್ಮಾನ

????????????????????????????????????

ಮಂಗಳೂರು: ಎಐಸಿಸಿ ಕಾರ್ಯದರ್ಶಿಯಾಗಿ, ಕೇರಳ ರಾಜ್ಯದ ಉಸ್ತುವಾರಿಯಾಗಿ ನೇಮಕಗೊಂಡ ಪಿ.ವಿ ಮೋಹನ್ ಮತ್ತು ಐವನ್ ಡಿಸೋಜ ಅವರಿಗೆ ದ.ಕ ಜಿಲ್ಲಾ ಇಂಟಕ್ ವತಿಯಿಂದ ಶನಿವಾರ ಸಮ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ಐವನ್ ಡಿಸೋಜ ಅವರು, ರಾಷ್ಟ್ರ ರಾಜಕಾರಣದ ಬಗ್ಗೆ ಅಪೇಕ್ಷೆ ಇರಲಿಲ್ಲ. ಜಿಲ್ಲಾ ಘಟಕದ ಅಧ್ಯಕ್ಷ ಆಕಾಂಕ್ಷಿಯಾಗಿದ್ದೆ. ಇದೀಗ ಹೈಕಮಾಂಡ್ ದೊಡ್ಡ ಜವಾಬ್ದಾರಿ ನೀಡಿದ್ದು ಮುಂಬರುವ ಕೇರಳ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ ಎಂದರು. ಇಂಟಕ್‍ನ್ನು ಕರ್ನಾಟಕದಲ್ಲಿ ಬಲಪಡಿಸಲು ಮುಂದಾಗಿರುವುದು ಉತ್ತಮ ಹೆಜ್ಜೆ ಎಂದರು.

ಪಿ.ವಿ ಮೋಹನ್ ಮಾತನಾಡಿ, ಕೇರಳದಲ್ಲಿ ಚುನಾವಣೆಯ ಯುದ್ದ ನಡೆಯಲಿದೆ. ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೇರಿಸುವುದೇ ನಮ್ಮ ಪ್ರಮುಖ ಧ್ಯೇಯವಾಗಿದೆ. ಇದಕ್ಕೆ ತಯಾರಾಗುವ ನಿಟ್ಟಿನಲ್ಲಿ ಈ ಸಮ್ಮಾನ ನಮಗೆ ಮತ್ತಷ್ಟು ಹುರುಪು ತುಂಬಿದೆ. ಕಾಂಗ್ರೆಸ್‍ನಲ್ಲಿ ಇಂಟಕ್ ಕಾರ್ಮಿಕ ಸಂಘಟನೆ ಪ್ರಮುಖ ಅಂಗವಾಗಿದೆ. ರಾಕೇಶ್ ಮಲ್ಲಿ ನೇತೃತ್ವದಲ್ಲಿ ಇಂಟಕ್ ಸಂಘಟನೆಯು ಕಾಂಗ್ರೆಸ್ ಪಕ್ಷದ ನಾಯಕರನ್ನೇ ಬೆರಗುಗೊಳಿಸುವಂತೆ ಸಮಾಜಮುಖೀ ಕೆಲಸ ಮಾಡುತ್ತಾ ಪಕ್ಷವನ್ನು ಸಂಘಟಿಸುತ್ತಿದೆ ಎಂದು ಶ್ಲಾಘಿಸಿದರು.

ರಾಷ್ಟ್ರೀಯ ಇಂಟಕ್ ಕಾರ್ಯದರ್ಶಿ ರಾಕೇಶ್ ಮಲ್ಲಿ ಮಾತನಾಡಿ, ಸ್ಥಳೀಯ ಪಾಲಿಕೆ, ಜಿಲ್ಲಾ ಪಂಚಾಯತ್, ವಿಧಾನಸಭೆ ಚುನಾವಣೆಯಲ್ಲಿ ಇಂಟಕ್ ಸಂಘಟನೆಯ ಕಾರ್ಯಕರ್ತರಿಗೆ ಅವಕಾಶ ನೀಡುವ ಕೆಲಸಗಳಾಗಬೇಕು. ಕಳೆದ ಬಾರಿ ಮಾಡಿದ ಮನವಿ ಯಾವುದೇ ಸ್ಪಂದನೆ ದೊರಕಿಲ್ಲ. ಚುನಾವಣೆಯಲ್ಲಿ ಗೆಲುವು ಜತೆಗೆ ಕಾರ್ಮಿಕರಿಗೂ ಪ್ರಾತಿನಿಧ್ಯ ನೀಡಬೇಕಿದೆ. ಈ ಬಗ್ಗೆ ಕಾರ್ಯದರ್ಶಿಗಳು ಹೈಕಮಂಡ್ ಜತೆ ಚರ್ಚಿಸಿ ಅವಕಾಶ ದೊರಕಿಸಬೇಕು ಎಂದರು.

ಕಳ್ಳಿಗೆ ತಾರಾನಾಥ ಶೆಟ್ಟಿ, ದ.ಕ ಇಂಟಕ್ ಅಧ್ಯಕ್ಷ ಮನೋಹರ್ ಶೆಟ್ಟಿ ಶುಭ ಹಾರೈಸಿದರು. ಇಂಟಕ್ ಮುಖಂಡರಾದ ಸಿ ಎ ರಹೀಂ, ಅಬೂಬಕರ್ ಕೃಷ್ಣಾಪುರ, ಪಿ.ಕೆ ಸುರೇಶ್, ತೇಜಸ್ವಿರಾಜ್, ಲುಕ್ಮಾನ್, ಡಿ.ಆರ್.ನಾರಾಯಣ್, ನಾಗೇಂದ್ರ, ಪುನೀತ್ ಶೆಟ್ಟಿ, ಚಿರಂಜೀವಿ, ನಝೀರ್, ಇಂಟಕ್ ಸಂಘಟನೆಯ ವಿವಿಧ ಘಟಕಗಳ ಪದಾಧಿಕಾರಿಗಳು, ಪಾಲಿಕೆ ಸದಸ್ಯರು ಮತ್ತಿತರರು ಉಪಸ್ಥತರಿದ್ದರು.

ಯುವ ಇಂಟಕ್ ರಾಜ್ಯ ಕಾರ್ಯದರ್ಶಿ ದಿನಕರ್ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಯುವ ಇಂಟಕ್ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನಗರ ಸ್ಥಳೀಯ ಸಂಸ್ಥೆ ಅಧ್ಯಕ್ಷ/ ಉಪಾಧ್ಯಕ್ಷರ ಸ್ಥಾನ: ಕರಡು ನಿಯಮಗಳ ಅಧಿಸೂಚನೆ

Upayuktha

ಪೋಷಣ್ ಅಭಿಯಾನದಲ್ಲಿ ರಾಜ್ಯಕ್ಕೆ ನಂ.1 ಸ್ಥಾನದ ಗುರಿ: ಶಶಿಕಲಾ ಜೊಲ್ಲೆ

Upayuktha

ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಬಹುಮಾನವಲ್ಲ: ಪ್ರೊ. ಎಸ್ ಸತೀಶ್ಚಂದ್ರ

Upayuktha