ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಜಾಲತಾಣಗಳಲ್ಲೇ ಸಂಪೂರ್ಣವಾಗಿ ಕಳೆದುಹೋಗದಿರಿ: ಅರವಿಂದ ಕುಡ್ಲ

ಪುತ್ತೂರು: ಆನ್‍ಲೈನ್ ಶಿಕ್ಷಣದಿಂದ ಎಷ್ಷು ಉಪಯೋಗವೊ ಅ ದುರುಪಯೋಗವು ಇದೆ. ಕೊರೊನದಿಂದಾಗಿ ಇಡೀ ಜಗತ್ತು ಈಗ ಆನ್‍ಲೈನ್ ಶಿಕ್ಷಣದಲ್ಲಿ ನಿಂತಿದೆ ಅμÉ್ಟೀ ಅಲ್ಲದೆ ಮನೆಯ ಪ್ರತಿಯೊಂದು ವ್ಯವಹಾರಗಳು ಇದರಲ್ಲೆ ನಡೆಯುತ್ತದೆ. ಸಾಮಾಜಿಕ ಜಾಲತಾಣ ಎಂಬುದು ಜನರನ್ನು ಹೇಗೆ ಸೆಳೆದುಕೊಳ್ಳುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ! ಆದರೆ ನಾವು ಅಂತ ಜಾಲತಾಣದ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳಲು ಮುಂದಾಗಬೇಕು. ಜಾಲತಾಣಗಳಲ್ಲೇ ಸಂಪೂರ್ಣವಾಗಿ ಕಳೆದುಹೋಗದಿರಿ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡಂಬೈಲು ಇಲ್ಲಿನ ಮುಖ್ಯ ಶಿಕ್ಷಕರಾದ ಅರವಿಂದ್ ಕುಡ್ಲ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಆಶ್ರಯದಲ್ಲಿ ನಡೆದ ಆನ್ ಲೈನ್ ಶಿಕ್ಷಣ ಮತ್ತು ಸಮಯ ನಿರ್ವಹಣೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.

ಜೀವನದಲ್ಲಿ ಕಲಿತುಕೊಳ್ಳುವುದಕ್ಕೆ ತುಂಬಾ ದಾರಿಗಳಿವೆ, ಅದರಂತೆ ಕಲಿತುಕೊಳ್ಳಲು ಅನೇಕ ಸಂಗತಿಗಳು ಇದೆ. ಇಂತಹ ಆನ್ ಲೈನ್ ನಿಂದ ಕಲಿಯುವ ಸಾಧ್ಯತೆಗಳು ಹೆಚ್ಚು, ಆದರೆ ದುರುಪಯೋಗಕ್ಕೆ ಬಳಸಿಕೊಂಡರೆ ಮಾತ್ರ ಜೀವನ ಹಾಳಗುತ್ತದೆ. ಆನ್‍ಲೈನ್ ಯಾವತ್ತಿಗೂ ನಮ್ಮ ಜಗತ್ತು ಆಗದೆ, ಅದಕ್ಕೆ ನಿರ್ದಿಷ್ಟ ಸಮಯವನ್ನು ಮೀಸಲಿಡಬೇಕು. ಹಾಗೆ ಜನರಲ್ ಮಾಹಿತಿಗಳನ್ನು ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಶ್ರೀನಾಥ್ ಸ್ವಾಗತಿಸಿ, ಸ್ವಯಂಸೇವಕಿ ಚರಿಷ್ಮಾ ವಂದಿಸಿದರು. ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ವಿದ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮೈಕ್ರೋ ಫೈನಾನ್ಸ್‌ಗಳಿಂದ ಬಡ ಮಹಿಳೆಯರ ಸಾಲ ಮನ್ನಾಕ್ಕೆ ಆಗ್ರಹ

Upayuktha

ಪತ್ರಕರ್ತರ 35ನೇ ರಾಜ್ಯ ಸಮ್ಮೇಳನ: ನಾಳೆ ವೆಬ್ ಸೈಟ್ ಅನಾವರಣ

Upayuktha

ಹೊಸಬೆಟ್ಟು ವಾರ್ಡ್ 8ರಲ್ಲಿ ನೀರು ಶೇಖರಣಾ ಘಟಕಕ್ಕೆ ಡಾ.ಭರತ್ ಶೆಟ್ಟಿ ಶಂಕುಸ್ಥಾಪನೆ

Upayuktha