ಲೇಖನಗಳು

ರಾಜಕೀಯ ವಿಶ್ಲೇಷಣೆ: ಬಂಗಾಳದಲ್ಲಿ ನಿಜಕ್ಕೂ ಬಿಜೆಪಿ ಸೋತಿದೆಯಾ…?

ಬಿಜೆಪಿ ಚುನಾವಣಾ ರಣತಂತ್ರ ಹೇಗಿರುತ್ತೆ ಗೊತ್ತಾ? ಯಾರೂ ಊಹಿಸಲು ಅಸಾಧ್ಯವಾದ ಚಾಣಕ್ಯ ತಂತ್ರ. ಒಂದು ರೀತಿಯ ಚೆಸ್ ಆಟದ ತರದಲ್ಲಿ. ಸಣ್ಣ ಕಾಲಾಳುಗಳನ್ನು ಕಳೆದು ಕೊಂಡರು ಅಂದ ತಕ್ಷಣವೇ ಇವರು ಸೇೂತರು ಅಂದು ನೀವು ನಕ್ಕು ಬಿಟ್ಟರೆ ಕಾದಿದೆ ನಿಮಗೆ ಮುಂದೆ ಅಪಾಯದ ದಿನವೆಂದೇ ಅರ್ಥ. ಸೊನ್ನೆಯಿಂದ ನೂರಕ್ಕೆ ಜಿಗಿಯುವ ಜಾಯಮಾನ. ಈ ಜಾಯಮಾನ ಅರ್ಥಮಾಡಿಕೊಳ್ಳದ ರಾಷ್ಟ್ರೀಯ ಪಕ್ಷ; ಪ್ರಾದೇಶಿಕ ಪಕ್ಷಗಳು ಇಂದು ಎಂದೂ ಎದ್ದು ಬಾರದ ಕೂಪಕ್ಕೆ ಬಿದ್ದು ಲವ ಲವ ಒದ್ದಾಡುತ್ತಿರುವುದು. ಇದರ ಸಂಕ್ಷಿಪ್ತ ರೇೂಚಕ ತಂತ್ರಗಾರಿಕೆ ಇಲ್ಲಿದೆ ನೇೂಡಿ.

1. ಯಾವುದೇ ಚುನಾವಣೆಯ ಆಖಾಡಕ್ಕೆ ಇಳಿಯುವ ಮೊದಲು ಸ್ಥಳ ಮತ್ತು ಪರಿಸ್ಥಿತಿ ಅಧ್ಯಯನ.
2. ಏಕ ಪಕ್ಷವಾಗಿ ಸ್ಪರ್ಧಿಸಿ ಗೆಲ್ಲಲು ಸಾಧ್ಯವಿಲ್ಲ ಅನ್ನುವ ಪರಿಸ್ಥಿತಿಯಲ್ಲಿ ಅಲ್ಲಿನ ಯಾವುದಾದರೂ ಪ್ರಬಲ ಸ್ಥಳೀಯ ಪಕ್ಷದ ಜೊತೆಗೆ ಹೊಂದಾಣಿಕೆಗೆ ಪ್ರೀತಿ ತೇೂರಿಸುವುದು. ಗೆದ್ದ ಮೇಲೆ ನಿಧಾನವಾಗಿ ಆಡಳಿತದ ಮೂಲಕ ಜನರ ಒಲವು ಗಳಿಸುವ ನೀತಿ ಪ್ರಕಟಿಸುವುದು. ಕ್ರಮೇಣ ಆ ಸ್ಥಳೀಯ ಪಕ್ಷವನ್ನು ಬದಿಗೆ ಸರಿಸಿ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿಯುವುದು. ಉದಾ: ಮಹಾರಾಷ್ಟ್ರ, ಬಿಹಾರ, ಜಮ್ಮುಕಾಶ್ಮೀರ ಕರ್ನಾಟಕ ಕೂಡಾ.
ಒಮ್ಮೆ ಆ ರಾಜ್ಯದಲ್ಲಿ ಪಕ್ಷ ಹಿಡಿತ ಸಾಧಿಸಿದ ಮೇಲೆ ತಮ್ಮದೇ ಸಾಮ್ರಾಜ್ಯ ಸ್ಥಾಪನೆ. ಉ.ಪ್ರ., ಅಸ್ಸಾಂ ಮಾದರಿಯಲ್ಲಿ.

3. ತಾವು ಮಾಡಿ ಕೊಳ್ಳುವ ತಾತ್ಕಾಲಿಕ ಹೊಂದಾಣಿಕೆಗಳು ತಮ್ಮ ಸಾಮ್ರಾಜ್ಯದ ವಿಸ್ತರಣೆಗೆ ಹೊರತು ಸ್ಥಳೀಯ ತುಂಡರಸರನ್ನು ಬೆಳೆಸಿ ಸಾಮ್ರಾಜ್ಯ ಅವರಿಗೆ ನೀಡುವ ಯೇೂಚನೆ ಖಂಡಿತವಾಗಿಯೂ ಇಲ್ಲ. ಇದು ಪಕ್ಷ ಬೆಳೆಸುವ ಕೌಶಲ್ಯವೂ ಹೌದು. ಆದರೆ ಬೇರೆ ರಾಷ್ಟ್ರೀಯ ಪಕ್ಷ ಸ್ಥಳೀಯ ಹೊಂದಾಣಿಕೆ ಮಾಡಿಕೊಳ್ಳುವುದು ತಾನು ಬೆಳೆಯುದಕ್ಕಿಂತ ಬಿಜೆಪಿಯನ್ನು ಹೇಗಾದರೂ ಮಾಡಿ ಸೇೂಲಿಸಬೇಕೆಂಬ ವಿಧುರ ನೀತಿ. ಹಾಗಾಗಿ ಅವರು ಬೆಳೆಯುವುದಿಲ್ಲ ಇವರನ್ನು ನಂಬಿಕೊಂಡು ಬಂದ ಪಕ್ಷಗಳು ಬೆಳೆಯುವುದಿಲ್ಲ.

4. ಬಿಜೆಪಿ ಕೇವಲ ಮೂರು ದಶಕಗಳಲ್ಲಿ ರಾಜ್ಯ ರಾಷ್ಟ್ರ ವ್ಯಾಪಿಯಾಗಿ ಅಧಿಕಾರದ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಿಕೊಂಡ ಚುನಾವಣಾ ರಣತಂತ್ರವಿದು. ಅವರದ್ದೆ ಆದ ಕೆಲವು ರಾಜ್ಯಗಳಲ್ಲಿ ಸುಲಭವಾಗಿ ಅಧಿಕಾರ ಸ್ಥಾಪನೆ ಮಾಡುವುದರ ಜೊತೆಗೆ ಅವರ ತತ್ವ ಸಿದ್ಧಾಂತಗಳ ಬೇರು ತಳವೂರದ ರಾಜ್ಯಗಳಾದ ಅಸ್ಸಾಂ, ಪುದುಚೇರಿ, ಗೇೂವಾ ರಾಜ್ಯ ಗಳಲ್ಲಿ ಕೇಸರಿ ಪತಾಕಿ ಹಾರಿಸಿದ ಬಿಜೆಪಿ ಮುಂದಿನ ಸಾಮ್ರಾಜ್ಯ ವಿಸ್ತರಣೆಗಾಗಿ ಪಶ್ಚಿಮ ಬಂಗಾಳದ ಕಡೆಗೆ ಮುಖಮಾಡಿದೆ.

ಮೇ 2ರ ಫಲಿತಾಂಶವನ್ನು ನೇೂಡಿದವರು ಈ ಬಿಜೆಪಿ ಸೇೂತೇ ಹೇೂಯಿತು ಅಂದು ಕೊಂಡವರು ಕೆಲವು ಮಂದಿ. ಆದರೆ ಬಿಜೆಪಿಗೆ ಮಾತ್ರ ಈ ಸೇೂಲಿನಲ್ಲಿಯೇ ಉಜ್ವಲ ಭವಿಷ್ಯ ಕಾಣತ್ತಿರವುದು ಆಶ್ಚರ್ಯವಾದರೂ ಸತ್ಯ. 2016ರ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನ ಗಳಿಸಿಕೊಂಡ ಬಿಜೆಪಿ 2021ರಲ್ಲಿ 74 ಸ್ಥಾನಗಳನ್ನು ಪಡೆಯುವುದರೊಂದಿಗೆ ಮುಂದಿನ ಚುನಾವಣಾ ಕಣಕ್ಕೆ ಭದ್ರ ಬುನಾದಿ ಹಾಕಿ ಕೊಂಡಿದೆ. ಹಿಂದಿನ ಸಾಮ್ರಾಜ್ಯ ಅಧಿಪತಿಗಳಾದ ರಾಷ್ಟ್ರೀಯ ಪಕ್ಷಗಳನ್ನು ಸಂಪೂರ್ಣವಾಗಿ ಮಣಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ನಿಧಾನವಾಗಿ ಸ್ಥಳೀಯ ಪಕ್ಷವಾದ ತೃಣಮೂಲಕ್ಕೆ ಲಗ್ಗೆ ಹಾಕುವ ರಣತಂತ್ರದಲ್ಲಿ ಬಿಜೆಪಿ ಯಶಸ್ವಿಯಾಗಿದೆ ಅನ್ನುವುದು ಹಲವು ರಾಜಕೀಯ ಪಂಡಿತರ ಅಭಿಪ್ರಾಯಯೂ ಹೌದು. ಅಂದರೆ ಬಿಜೆಪಿ ಅರ್ಥದಲ್ಲಿ ಅಲ್ಲಿ ಸೇೂತಿರುವುದು ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್. ಏಕೆಂದರೆ 2016ರಲ್ಲಿ ಈ ಎರಡೂ ಪಕ್ಷಗಳು ಗಳಿಸಿದ ಸೀಟುಗಳನ್ನು ಈ ಬಾರಿ ಬಿಜೆಪಿ ಗಳಿಸಿಕೊಂಡಿದೆ ಅಷ್ಟೇ ಸತ್ಯ.

ತೀಮಾ೯ನ: ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ vs ಪ್ರಾದೇಶಿಕ ಪಕ್ಷಗಳು ಅನ್ನುವ ರಾಜಕೀಯ ವಾತಾವರಣ ಸೃಷ್ಟಿಯಾದರೂ ಆಶ್ಚರ್ಯವಿಲ್ಲ. ಬಿಜೆಪಿಯ ಇಂತಹ ಚುನಾವಣಾ ರಣತಂತ್ರ ಎದುರಿಸಬೇಕಾದರೆ ದೂರಗಾಮಿ ರಣತಂತ್ರವನ್ನು ಪ್ರತಿಪಕ್ಷಗಳು ರೂಪಿಸಿಕೊಂಡಾಗ ಮಾತ್ರ ಬಿಜೆಪಿಯ ನಾಗಾಲೇೂಟಕ್ಕೆ ಕಡಿವಾಣ ಹಾಕಬಹುದು.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

 

 

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

Related posts

ರಿಲ್ಯಾಕ್ಸ್ ಆಗಲು, ಮನಸ್ಸಿಗೆ ಮುದ ನೀಡಲು ಸಂಗೀತ ಚಿಕಿತ್ಸೆ

Upayuktha

ಆರೋಗ್ಯ ಬೇಕೆಂದರೆ ಧಾವಂತಕ್ಕೆ ಬ್ರೇಕ್ ಹಾಕಿ, ಹೃದಯಕ್ಕೆ ಸ್ಪೇಸ್ ಕೊಡಿ

Upayuktha

ಏನಿದು ವೆರುಕಸ್ ಕಾರ್ಸಿನೋಮಾ? ಇದು ಅಪಾಯಕಾರಿಯೇ?

Upayuktha