ನಗರ ಸ್ಥಳೀಯ

ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು, ವದಂತಿ ಹರಡಿದರೆ ಕಠಿಣ ಕ್ರಮ: ದಕ ಜಿಲ್ಲಾ ಎಸ್‌ಪಿ ಎಚ್ಚರಿಕೆ

ಮಂಗಳೂರು: ಕೊರೊನಾ ವೈರಸ್ ಸಾಂಕ್ರಾಮಿಕ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುಳ್ಳು ಸುದ್ದಿಗಳು, ಸಾಮಾಜಿಕ ಸ್ವಾಸ್ತ್ಯ ಮತ್ತು ಶಾಂತಿ ಕದಡುವ, ಪ್ರಚೋದನಕಾರಿ ಸಂದೇಶಗಳು ವದಂತಿಗಳನ್ನು ರ್ಸೃಷ್ಟಿಸುವುದು ಮತ್ತು ಹಂಚಿಕೊಳ್ಳುವುದರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಸಮುದಾಯವನ್ನು ಉದ್ದೇಶಿಸಿದ ಅಥವಾ ಅವಹೇಳನಕಾರಿ ಅಥವಾ ಪ್ರಚೋದನಕಾರಿ ಸಂದೇಶಗಳು, ತಪ್ಪು ಕಲ್ಪನೆಗಳು, ತಪ್ಪು ವ್ಯಾಖ್ಯಾನಗಳನ್ನು ಸೃಷ್ಟಿಸುವ, ಹಂಚುವ, ಕಾರ್ಯಗಳನ್ನು ಯಾರೂ ಮಾಡಬಾರದು. ಒಂದು ವೇಳೆ ಮಾಡಿದ್ದೇ ಆದರೆ ಅವರ ವಿರುದ್ಧ ಕಾನೂನಿನಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಎಚ್ಚರಿಸಿದ್ದಾರೆ.

ಕೊರೊನಾ ಸೋಂಕು ತಗುಲಿ ಕ್ವಾರಂಟೈನ್‌ನಲ್ಲಿರುವವರು ಯಾರಾದರೂ ಇಂತಹ ಸಂದೇಶಗಳನ್ನು ಹರಡುತ್ತಿದ್ದಲ್ಲಿ, ಅವರ ಕ್ವಾರಂಟೈನ್ ಅವಧಿ ಮುಗಿದ ನಂತರ ಸೂಕ್ತ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಜೀವನದಲ್ಲಿ ಧನಾತ್ಮಕ ಯೋಚನೆಗಳಿದ್ದರೆ ಯಶಸ್ಸು ಕಾಣಲು ಸಾಧ್ಯ: ಪ್ರೊ. ಸೀಮಾ ಪ್ರಭು

Upayuktha

60ನೇ ಜನ್ಮದಿನಕ್ಕೆ ಗೋಶಾಲೆಗೆ 60,000 ರೂ ದೇಣಿಗೆ ನೀಡಿದ ನಿವೃತ್ತ ಬ್ಯಾಂಕ್ ಅಧಿಕಾರಿ

Upayuktha

ಕೌಟುಂಬಿಕ ಕಾರಣಕ್ಕೆ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅನುಮತಿ ಪರಿಶೀಲನೆ: ಸಚಿವ ಕೋಟ

Upayuktha