ದೇಶ-ವಿದೇಶ ಪ್ರಮುಖ

ಅಂಚೆಯ ಮೂಲಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಮನೆ ಬಾಗಿಲಿಗೆ ತಲುಪಿಸುವ ಯೋಜನೆಗೆ ಚಾಲನೆ

ಪಿಂಚಣಿದಾರರಿಗೆ ಲೈಫ್ ಸರ್ಟಿಫಿಕೇಟ್ ಪ್ರಮಾಣಪತ್ರ ಸಲ್ಲಿಕೆ ಸರಳೀಕೃತ

ಹೊಸದಿಲ್ಲಿ: ಅಂಚೆ ಇಲಾಖೆಯ ಭಾರತೀಯ ಅಂಚೆ ಪಾವತಿ ಬ್ಯಾಂಕ್- ಐಪಿಪಿಬಿ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಉಪಕ್ರಮದಡಿ ಅಂಚೆ ಸೇವಕರ ಮೂಲಕ ಮನೆ ಬಾಗಿಲಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ತಲುಪಿಸುವ ವಿನೂತನ ಯೋಜನೆಯನ್ನು ಯಶಸ್ವಿಯಾಗಿ ಆರಂಭಿಸಿದೆ.

ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರು 2014ರ ನವೆಂಬರ್ ನಲ್ಲಿ, ಪಿಂಚಣಿದಾರರು ಸೂಕ್ತ ಹಾಗೂ ಪಾರದರ್ಶಕ ರೀತಿಯಲ್ಲಿ ಜೀವಂತ ಪ್ರಮಾಣಪತ್ರಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಆನ್ ಲೈನ್ ಮೂಲಕ ಜೀವಂತ ಪ್ರಮಾಣಪತ್ರ ವಿತರಿಸುವ ‘ಜೀವನ್ ಪ್ರಮಾಣ ಪೋರ್ಟಲ್’ ಗೆ ಚಾಲನೆ ನೀಡಿದ್ದರು.

ಅಂದಿನಿಂದ ಸಿಬ್ಬಂದಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ, ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳು ಹಾಗೂ ಪಿಂಚಣಿ ಖಾತೆ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರ ಮಾರ್ಗದರ್ಶನದಲ್ಲಿ ತಂತ್ರಜ್ಞಾನದ ಉನ್ನತೀಕರಣದಿಂದ ಹಿರಿಯ ಪಿಂಚಣಿದಾರರಿಗೆ ಯಾವುದೇ ತೊಂದರೆಯಾಗದ ಮತ್ತು ಹೆಚ್ಚು ಸುಲಭವಾದ ವ್ಯವಸ್ಥೆಯನ್ನು ರೂಪಿಸುತ್ತಿದೆ.

ದೇಶಾದ್ಯಂತ ಈ ಸೌಕರ್ಯ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಡಿಒಪಿಪಿಡಬ್ಲ್ಯೂ ಭಾರತೀಯ ಅಂಚೆ ಪಾವತಿ ಬ್ಯಾಂಕ್ (ಐಪಿಪಿಬಿ)ಅನ್ನು ಬಳಸಿಕೊಂಡು ಅದರ ಅಂಚೆ ಪೇದೆ ಮತ್ತು ಗ್ರಾಮೀಣ ಅಂಚೆ ಸೇವೆಗಳ ಭಾರೀ ಜಾಲವನ್ನು ಬಳಸಿ, ಪಿಂಚಣಿದಾರರಿಗೆ ಅವರ ಮನೆ ಬಾಗಿಲಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅನ್ನು ಪೂರೈಸುವ ಕೆಲಸ ಮಾಡುತ್ತಿದೆ.

ಐಪಿಪಿಬಿ ತನ್ನ ಬ್ಯಾಂಕ್ ಸಾಫ್ಟ್ ವೇರ್ ಅನ್ನು ಕಸ್ಟಮೈಜ್ ಮಾಡಿ, ಅದನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಎಂಇಐಟಿವೈ) ಮತ್ತು ಯಐಡಿಎಐನ ಸಾಫ್ಟ್ ವೇರ್ ಮೂಲಕ ಜೀವನ್ ಪ್ರಮಾಣ್ ಸಾಫ್ಟ್ ವೇರ್ ಅನ್ನು ಲಿಂಕ್ ಮಾಡಲಾಗಿದೆ. ಅದರಿಂದ ಪಿಂಚಣಿದಾರರ ಮನೆ ಬಾಗಿಲಿಗೆ ಡಿಎಲ್‌ಸಿ ಸೇವೆಗಳನ್ನು ಒದಗಿಸಲಾಗುವುದು. ಈ ಸೌಕರ್ಯ ಈಗಾಗಲೇ ಮನೆಯಲ್ಲಿಯೇ ಕುಳಿತು ಬ್ಯಾಂಕ್ ಖಾತೆಯಿಂದ ಹಣ ಪಡೆಯುವ ಸೌಕರ್ಯದ ಜೊತೆ ನೀಡುವ ಹೆಚ್ಚುವರಿ ಸೌಕರ್ಯವಾಗಿದೆ.

ಇದಕ್ಕಾಗಿ ಐಪಿಪಿಬಿ ತನ್ನ 1,36,000 ಹೆಚ್ಚು ಅಂಚೆ ಕಚೇರಿಗಳ ರಾಷ್ಟ್ರೀಯ ಜಾಲವನ್ನು ಮತ್ತು 1,89,000ಕ್ಕೂ ಅಧಿಕ ಗ್ರಾಮೀಣ ಅಂಚೆ ಪೇದೆ ಮತ್ತು ಗ್ರಾಮೀಣ ಅಂಚೆ ಸೇವಕರನ್ನು ಬಳಸಿ, ಅವರ ಸ್ಮಾರ್ಟ್ ಫೋನ್ ಮತ್ತು ಬಯೋಮೆಟ್ರಿಕ್ ಸಾಧನದ ಮೂಲಕ ಮನೆ ಬಾಗಿಲಲ್ಲೇ ಬ್ಯಾಂಕಿಂಗ್ ಸೇವೆ ಒದಗಿಸುತ್ತಿದೆ. ಅದರ ಪರಿಣಾಮ ದೇಶಾದ್ಯಂತ ಭಾರೀ ಪ್ರಮಾಣದ ಪಿಂಚಣಿದಾರರು ಅಂಚೆಪೇದೆ/ಗ್ರಾಮೀಣ ಅಂಚೆ ಸೇವಕರ ಮೂಲಕ ಮನೆ ಬಾಗಿಲಲ್ಲೇ ಸೇವೆಯನ್ನು ಪಡೆಯುವಂತಾಗಿದೆ. ಅವರು ಬ್ಯಾಂಕುಗಳಿಗೆ ಭೇಟಿ ನೀಡುವಂತಿಲ್ಲ ಹಾಗೂ ಬ್ಯಾಂಕ್ ಶಾಖೆಗಳ ಹೊರಗೆ ಸರತಿಯಲ್ಲಿ ಕಾಯುವಂತಿಲ್ಲ.

ಐಪಿಪಿಬಿ ಮೂಲಕ ಮನೆ ಬಾಗಿಲಲ್ಲೇ ಡಿಎಲ್‌ಸಿ ಪೂರೈಕೆ ಸೇವೆಯನ್ನು ಪಡೆಯಲು ಪಿಂಚಣಿದಾರರು ippbonline.com. ಮೂಲಕ ಸಮಗ್ರ ವಿವರಗಳನ್ನು ಪಡೆಯಬಹುದಾಗಿದೆ. ಇದು ಶುಲ್ಕ ವಿಧಿಸಬಹುದಾದ ಸೇವೆಯಾಗಿದ್ದು, ದೇಶಾದ್ಯಂತ ಯಾವುದೇ ಬ್ಯಾಂಕ್ ನಲ್ಲಿ ಪಿಂಚಣಿ ಖಾತೆ ಇದ್ದರೂ ಸಹ ಎಲ್ಲ ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಇದು ಲಭ್ಯವಿದೆ. ‘ಮನೆ ಬಾಗಿಲಲ್ಲೇ ಡಿಎಲ್ ಸಿ ಸೇವೆ’ಯನ್ನು ಪಡೆಯಲು ಐಪಿಪಿಬಿಯನ್ನು @ Youtube (Pension DOPPW) ಮತ್ತು facebook of D/o Pension & Pensioners Welfare ನಲ್ಲಿ ವಿವರಗಳನ್ನು ಪಡೆಯಬಹುದು. ಸದ್ಯದ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತು ಜೀವಂತ ಪ್ರಮಾಣಪತ್ರ ಸಲ್ಲಿಕೆ ಮಾಡಲು ಪಿಂಚಣಿದಾರರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಾರ್ವಜನಿಕ ಪ್ರವೇಶ ಕ್ಕೆ ಮುಕ್ತ ವಿಶಾಖಪಟ್ಟಣಂ ಮೃಗಾಲಯ

Harshitha Harish

ಮಂಗಳೂರು ಪುರಭವನದಲ್ಲಿ 3 ದಿನಗಳ ಗಡಿನಾಡು ಸಂಸ್ಕೃತಿ ಉತ್ಸವಕ್ಕೆ ಚಾಲನೆ

Upayuktha

ಶಬರಿಮಲೆ ಮುಖ್ಯ ಅರ್ಚಕರಾಗಿ ವಿ ಜಯರಾಜನ್ ಪೊಟ್ಟಿ ನೇಮಕ

Upayuktha

Leave a Comment