ದೇಶ-ವಿದೇಶ ಪ್ರಮುಖ

ರಾಷ್ಟ್ರೀಯ ಶಿಕ್ಷಣ ನೀತಿಯ ಬೆನ್ನಲ್ಲೇ ಬರುತ್ತಿದೆ ಹೊಸ ರಕ್ಷಣಾ ನೀತಿ

ಕರಡು ನೀತಿ ಬಿಡುಗಡೆಗೊಳಿಸಿದ ರಕ್ಷಣಾ ಸಚಿವಾಲಯ: ಆತ್ಮನಿರ್ಭರವೇ ಮೂಲ ಮಂತ್ರ


ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಹೊಸ ರಕ್ಷಣಾ ನೀತಿಯನ್ನು ತರಲು ಮುಂದಾಗಿದೆ. ದೇಶದ ರಕ್ಷಣಾ ಕ್ಷೇತ್ರವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವ ಪ್ರಯತ್ನದ ಭಾಗವಾಗಿ ಈ ಹೆಜ್ಜೆಯಿಟ್ಟಿದೆ.

ಏರೋಸ್ಪೇಸ್, ನೌಕಾದಳ ಹಡಗುನಿರ್ಮಾಣ ಸಹಿತ ರಕ್ಷಣಾ ಕ್ಷೇತ್ರದಾದ್ಯಂತ ವಿನ್ಯಾಸದಿಂದ ಉತ್ಪಾದನೆಯ ತನಕ ಸ್ವಾವಲಂಬನೆ ಹಾಗೂ ರಫ್ತು ಸಾಧಿಸುವ ಉದ್ದೇಶದೊಂದದಿಗೆ ರಕ್ಷಣಾ ಸಚಿವಾಲಯವು ರಕ್ಷಣಾ ಉತ್ಪಾದನೆ ಮತ್ತು ರಫ್ತು ನೀತಿ 2020ರ (DPEPP 2020) ಕರಡು ಬಿಡುಗಡೆಗೊಳಿಸಿದೆ.

ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಹಾಗೂ ಆತ್ಮನಿರ್ಭರ ಭಾರತ ಪ್ಯಾಕೇಜ್ ಅಡಿ ಮಾಡಲಾಗುವ ಅನೇಕ ಘೋಷಣೆಗಳಿಗೆ ವೇಗ ನೀಡುವುದು ಈ ಕರಡಿನ ಗುರಿಯಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.

ಡಿಪಿಇಪಿಪಿ 2020: ಗುರಿಗಳು ಮತ್ತು ಉದ್ದೇಶಗಳು

1. ಏರೋಸ್ಪೇಸ್ ಮತ್ತು ರಕ್ಷಣಾ ಸರಕು ಮತ್ತು ಸೇವೆಗಳಲ್ಲಿ 2025ರ ವೇಳೆಗೆ ರೂ 35,000 ಕೋಟಿ (5 ಬಿಲಿಯನ್ ಡಾಲರ್) ರಫ್ತು ಸಹಿತ ರೂ 1,75,000 ಕೋಟಿಗಳಷ್ಟು (25 ಬಿಲಿಯನ್ ಡಾಲರ್) ವಹಿವಾಟು ಸಾಧಿಸುವುದು.

2. ಗುಣಮಟ್ಟದ ಉತ್ಪನ್ನಗಳೊಂದಿಗೆ ಸಶಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸಲು ಏರೋಸ್ಪೇಸ್ ಮತ್ತು ನೌಕಾಳದ ಹಡಗು ನಿರ್ಮಾಣ ಉದ್ಯಮದ ಸಹಿತ ರಕ್ಷಣಾ ಉದ್ಯಮವನ್ನು ಶಕ್ತಿಯುತ, ಸದೃಢ ಮತ್ತು ಸ್ಪರ್ಧಾತ್ಮಕವಾಗಿ ಅಭಿವೃದ್ಧಿಪಡಿಸುವುದು.

3. ಆಮದುಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಮತ್ತು ದೇಶೀಯ ವಿನ್ಯಾಸ ಮತ್ತು ಅಭಿವೃದ್ಧಿಯ ಮೂಲಕ ಮೇಕ್ ಇನ್ ಇಂಡಿಯಾ ಉಪಕ್ರಮಗಳನ್ನು ಮಂದಕ್ಕೊಯ್ಯುವುದು.

4. ರಕ್ಷಣಾ ಉತ್ಪನ್ನಗಳ ರಫ್ತು ಉತ್ತೇಜಿಸುವುದು ಮತ್ತು ಜಾಗತಿಕ ರಕ್ಷಣಾ ಮೌಲ್ಯ ಸರಪಣಿಗಳ ಭಾಗವಾಗುವುದು.

5. ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ವಾತಾವರಣ ಸೃಷ್ಟಿಸುವುದು ಮತ್ತು ನವೀನ ರಚನೆಗಳಿಗೆ ಬಹುಮಾನ, ಭಾರತೀಯ ಐಪಿ ಮಾಲೀಕತ್ವ ಮತ್ತು ಸದೃಢ ಮತ್ತು ಸ್ವಾವಲಂಬನೆಯ ರಕ್ಷಣಾ ಉದ್ಯಮವನ್ನು ಉತ್ತೇಜಿಸುವುದು.

ಕೇಂದ್ರೀಕೃತ ಕ್ಷೇತ್ರಗಳು

ಖರೀದಿಯಲ್ಲಿ ಸುಧಾರಣೆಗಳು: ಸ್ವದೇಶಿ ಮತ್ತು ಎಂಎಸ್ಎಂಇಗಳು/ಸ್ಟಾರ್ಟ್‍ಅಪ್‌ಗಳಿಗೆ ಬೆಂಬಲ; ಸಂಪನ್ಮೂಲ ಹಂಚಿಕೆಯನ್ನು ಪ್ರಶಸ್ತಗೊಳಿಸುವುದು; ಹೂಡಿಕೆಗೆ ಉತ್ತೇಜನ, ಎಫ್‌ಡಿಐ ಮತ್ತು ಉದ್ಯಮ ನಡೆಸುವಿಕೆಯನ್ನು ಸುಗಮಗೊಳಿಸುವಿಕೆ; ನಾವೀನ್ಯತೆ ಮತ್ತು ಆರ್‌ ಆಂಡ್ ಡಿ; ಗುಣಮಟ್ಟ ಖಾತ್ರಿ ಮತ್ತು ಪರೀಕ್ಷಾ ಮೂಲಸೌಕರ್ಯ; ಮತ್ತು ರಫ್ತು ಉತ್ತೇಜನ.

ತ್ವರಿತ ಮತ್ತು ಸುವ್ಯವಸ್ಥಿತ ಖರೀದಿ ಕಾರ್ಯವಿಧಾನಗಳು ರಕ್ಷಣಾ ಉತ್ಪಾದನೆ ವ್ಯವಸ್ಥೆಯ ಅಭಿವೃದ್ಧಿಗೆ ನೆರವಾಗಲಿವೆ ಮತ್ತು ಇದು ಈ ಕ್ಷೇತ್ರಕ್ಕೆ ಹೂಡಿಕೆಯ ಹರಿವಿನ ಮೇಲೂ ಪರಿಣಾಮವಾಗಲಿದೆ. ಜತೆಗೆ ಡಿಆರ್‌ಡಿಒ ಈಗಾಗಲೇ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ಬಳಕೆಯೂ ಆಗಲಿದೆ.

ರಕ್ಷಣಾ ನೀತಿಯ ಕರಡಿನ ಸಂಪೂರ್ಣ ವಿವರವನ್ನು ಇಲ್ಲಿ ನೋಡಬಹುದು:  https://ddpmod.gov.in/dpepp ಮತ್ತು https://www.makeinindiadefence.gov.in/admin/webroot/writereaddata/upload…
ಸಾರ್ವಜನಿಕರು ಆಗಸ್ಟ್ 17, 2020ರೊಳಗೆ ಈ ಕರಡಿನ ಕುರಿತು ತಿದ್ದುಪಡಿ, ಸಲಹೆಗಳಿದ್ದರೆ ಈ ಇಮೇಲ್ ವಿಳಾಸಕ್ಕೆ dirpnc-ddp@nic.in ಕಳುಹಿಸಬಹುದು ಎಂದು ರಕ್ಷಣಾ ಸಚಿವಾಲಯ ಹೇಳಿದೆ.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ನೈಸರ್ಗಿಕ ರಾಖಿಗಳನ್ನು ಬಳಸಿ; ಈ ಬಾರಿಯ ರಕ್ಷಾಬಂಧನ ಪರಿಸರ ಸ್ನೇಹಿಯಾಗಿರಲಿ

Upayuktha

ಸಿಯಾಚಿನ್ ಹಿಮ ಪ್ರವಾಹಕ್ಕೆ ನಾಲ್ವರು ಯೋಧರ ಸಹಿತ 6 ಬಲಿ

Upayuktha

ಹೈದರಾಬಾದ್ ಎನ್‌ಕೌಂಟರ್‌: ಪೊಲೀಸರ ಕಾರ್ಯಕ್ಕೆ ಹಲವರ ಮೆಚ್ಚುಗೆ, ಕೆಲವರ ವಿರೋಧ

Upayuktha

Leave a Comment