ನಗರ ಸ್ಥಳೀಯ

ಆರ್ಥೋಪೆಡಿಕ್ ಸರ್ಜರಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌

ಮಂಗಳೂರು: ಕೇರಳ ಯುನಿವರ್ಸಿಟಿ ಆಫ್‌ ಹೆಲ್ತ್‌ ಸೈನ್ಸ್‌ ನಡೆಸಿದ ಜೂನ್ 2020ರ ಆರ್ಥೋಪೆಡಿಕ್‌ ಸರ್ಜರಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಡಾ. ಆದರ್ಶ್‌ ಕೃಷ್ಣ ಭಟ್‌ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ.

ಪ್ರಸ್ತುತ ಕೊಟ್ಟಾಯಂ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಸೀನಿಯರ್‌ ರೆಸಿಡೆಂಟ್‌ ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಸದ್ಯ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನೆಲೆಸಿರುವ, ಮೂಲತಃ ಕಾಸರಗೋಡಿನ ನೀರ್ಚಾಲು ಗ್ರಾಮದ ಕುಳಮರ್ವ ಮಹಾಲಿಂಗ ಭಟ್ ಮತ್ತು ಅನಿತಾ ದಂಪತಿಗಳ ಪುತ್ರರಾಗಿದ್ದಾರೆ.

ಇವರಿಗೆ ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಅಭಿನಂದನಾ ಪತ್ರವನ್ನು ವಲಯ ಗುರಿಕ್ಕಾರರಾದ ರಮಾಕಾಂತ್‌ ಭಟ್, ಶಿವಪ್ರಸಾದ್ ಭಟ್ ಮತ್ತು ರವಿಸುಬ್ರಹ್ಮಣ್ಯ ಅವರು ಹಸ್ತಾಂತರಿಸಿ ಅಭಿನಂದನೆ ಸಲ್ಲಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಹಿಂದಿಯಿಂದ ಕನ್ನಡಿಗರಿಗೆ ಉದ್ಯೋಗಾವಕಾಶ ಹೆಚ್ಚು: ಡಾ. ಸುಕನ್ಯಾ ಮೇರಿ

Upayuktha

ಈ ಚುನಾವಣೆ ರಾಜ್ಯದ ಜನರಿಗೆ ಸತ್ವಪರೀಕ್ಷೆ: ಡಿ.ಕೆ ಶಿವಕುಮಾರ್

Upayuktha

ಕಾಸರಗೋಡು ಜಿಲ್ಲೆಗೆ ತುರ್ತು ಆರೋಗ್ಯ ಪ್ಯಾಕೇಜ್ ಘೋಷಿಸಲು ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಗ್ರಹ, ಕೇರಳ ಸಿಎಂಗೆ ಪತ್ರ

Upayuktha