ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಕುಂದಾಪುರ: ಡಾ|ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯವು ಸೆಪ್ಟೆಂಬರ್ 2020ರಲ್ಲಿ ನಡೆಸಿದ ಅಂತಿಮ ಬಿಕಾಂ ಪರೀಕ್ಷೆಯಲ್ಲಿ ಐದು ಮತ್ತು ಆರನೇ ಸೆಮಿಸ್ಟರ್‌ಗಳ ‘ಫೈನಾನ್ಶಿಯಲ್ ಎಕೌಂಟಿಂಗ್’ ವಿಷಯದಲ್ಲಿ ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ದೀಪಾ ದೇವಾಡಿಗ ಮತ್ತು ಜ್ಯೋತಿ ಇವರು 300ರಲ್ಲಿ 300 ಅಂಕ ಗಳಿಸಿ ICAI ಕೊಡ ಮಾಡುವ ಚಿನ್ನದ ಪದಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಇವರನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಬಿ ಎಂ ಸುಕುಮಾರ ಶೆಟ್ಟಿ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿ ಶುಭಹಾರೈಸಿ ಅಭಿನಂದಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಟ್ಯಾಕ್ಸೇಶನ್ ಫೆಸ್ಟ್ 2020: ಆಳ್ವಾಸ್ ಕಾಲೇಜಿನಲ್ಲಿ ತೆರಿಗೆ ಕುರಿತ ಜಾಗೃತಿ ಕಾರ್ಯಕ್ರಮ

Upayuktha

ಕಾಲೇಜೇನೋ ಆರಂಭವಾಯಿತು, ಆದರೆ….

Upayuktha

ಕಾಸರಗೋಡಿನಲ್ಲಿ ರಾಜ್ಯ ಮಟ್ಟದ ಶಾಲಾ ಕಲೋತ್ಸವ: ಅಂದು-ಇಂದು

Upayuktha