ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಅಂಬೇಡ್ಕರ್‌ ಹೋರಾಟದ ಚಿಂತನೆಗಳು ಸಾರ್ವಕಾಲಿಕ, ಸಾರ್ವತ್ರಿಕ: ಪ್ರೊ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಉಡುಪಿ: ಶಿಕ್ಷಣ ಒಂದೇ ನಮ್ಮೆಲ್ಲರ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ದಿವ್ಯ ಔಷಧಿ ಎಂದು ಬಲವಾಗಿ ನಂಬಿ ಅದನ್ನೇ ಅಸ್ತ್ರವಾಗಿ ಬಳಸಿಕೊಂಡು ಯಶಸ್ಸು ಸಾಧಿಸಿದ ಜಗತ್ತಿನ ಮಹಾನ್ ನಾಯಕರಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಮೊದಲ ಪಂಕ್ತಿಯಲ್ಲಿ ನಿಲ್ಲಬಲ್ಲ ಶ್ರೇಷ್ಠ ಸಾಧಕರು. ಅಸ್ಪಶ್ಯತೆ ಎಂಬ ಕಳಂಕ ಪದ್ದತಿಯ ವಿರುದ್ಧವೇ ಅವರ ಹೇೂರಾಟವೇ ಆಗಿತ್ತು ಹೊರತು ಯಾವುದೇ ಜಾತಿಯ ವಿರುದ್ಧ ಅವರ ಧ್ವನಿಯಾಗಲಿ ದ್ವೇಷವಾಗಲಿ ಇರಲಿಲ್ಲ. ಬರೇ ಹೇೂರಾಟಕ್ಕಾಗಿ ಅವರು ಬದುಕನ್ನು ಸಮಪಿ೯ಸಿಕೊಳ್ಳದೇ ದಿನ ದಲಿತರ ನಿಗ೯ತಿಕರ ಬದುಕನ್ನು ರೂಪಿಸಬಲ್ಲ ಸಂಸ್ಕಾರಯುಕ್ತ ಶಿಕ್ಷಣ ಪ್ರತಿಯೆಾಬ್ಬರಿಗೂ ದೊರಕುವ ವ್ಯವಸ್ಥೆಯ ಕಡೆಗೆ ಅವರ ಪ್ರಯತ್ನ ಮತ್ತು ಚಿಂತನೆ ಅಡಗಿತ್ತು. ಹಾಗಾಗಿ ಡಾ.ಅಂಬೇಡ್ಕರ್‌ರವರ ಬದುಕು ಹೇೂರಾಟದ ಚಿಂತನೆಗಳು ಇಂದಿಗೂ ಸಾವ೯ತ್ರಿಕ ಮತ್ತು ಸಾವ೯ಕಾಲಿಕ ಪ್ರಸ್ತುತತೆಯ ಅಡಿಪಾಯದ ಮೇಲೆ ನಿಂತಿದೆ” ಎಂದು ಅಂಕಣಕಾರ, ರಾಜಕೀಯ ವಿಶ್ಲೇಷಕ ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.

ಉಡುಪಿ ನಗರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡ ಡಾ.ಬಿ.ಆರ್. ಅಂಬೇಡ್ಕರ್‌ ರವರ ಬದುಕು ಹೇೂರಾಟ ಚಿಂತನೆಗಳ ಕುರಿತಾಗಿ ನಡೆದ ವಿಶೇಷ ಉಪನ್ಯಾಸ ಕಾಯ೯ಕ್ರಮದಲ್ಲಿ ಸಂಪನ್ಮೂಲ ಅತಿಥಿಯಾಗಿ ಉಪನ್ಯಾಸವಿತ್ತರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಡಾ.ಶಿವಾನಂದ ನಾಯಕ್ ವಹಿಸಿದ್ದರು. ರಾಜಶಂಕರ್ ಜಿಲ್ಲಾ ಪ್ರಮುಖ, ಆಶಿಸ್ ಶೆಟ್ಟಿ ಜಿಲ್ಲಾ ಸಹ ಸಂಚಾಲಕ, ಸುಮುಖ್ ಭಟ್ ನಗರ ಕಾಯ೯ದಶಿ೯, ಅಶ್ವಿನಿ ಕುಲಾಲ್ ನಗರ ವಿದ್ಯಾರ್ಥಿನಿ ಪ್ರಮುಖ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎ.ಬಿ.ವಿ.ಪಿ. ನಾಯಕ ಪ್ರಸನ್ನ ಹೆಗಡೆ ಸ್ವಾಗತಿಸಿ ವಿದ್ಯಾರ್ಥಿ ಪ್ರತಿನಿಧಿ ಗಣಪತಿ ಹೆಬ್ಬಾರ್ ವಂದನಾಪ೯ಣೆಗೆೈದರು. ವಿದ್ಯಾರ್ಥಿ ಪ್ರತಿನಿಧಿ ಆಕಾಶ್ ಎಸ್. ಕಾಯ೯ಕ್ರಮ ನಿರೂಪಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಮಾನಸಿಕವಾಗಿ ಸದೃಢಗೊಳ್ಳಲು ಸಾಧ್ಯ: ಡಾ.ಡಿ. ವೀರೇಂದ್ರ ಹೆಗ್ಗಡೆ

Sushmitha Jain

ಬ್ಯಾರಿ ಅಧ್ಯಯನ ಪೀಠಕ್ಕೆ ಸಂಯೋಜಕರಾಗಿ ಡಾ. ಎ. ಸಿದ್ಧಿಕ್ ನೇಮಕ

Upayuktha

ಬೆಳಾಲು: ಶ್ರೀ ಧ.ಮಂ.ಪ್ರೌ.ಶಾಲೆಯಲ್ಲಿ ವಿದ್ಯಾರ್ಥಿ ಕವಿಗೋಷ್ಠಿ

Sushmitha Jain