ಪ್ರಮುಖ ರಾಜ್ಯ

ನೆರೆ ಪರಿಹಾರ: ಮುಖ್ಯಮಂತ್ರಿ ನಿಧಿಗೆ ಧರ್ಮಸ್ಥಳದಿಂದ 25 ಕೋಟಿ ರೂ ದೇಣಿಗೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಕೋ.ರೂ ನೀಡುತ್ತಿರುವುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ಘೋಷಣೆ ಮಾಡಿದ್ದಾರೆ.

ಧರ್ಮಸ್ಥಳದಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಬೆಳ್ತಂಗಡಿ ತಾಲೂಕು ಸಂತ್ರಸ್ತರಿಗೆ 50 ಲಕ್ಷ ರೂ.ಗಳನ್ನು ಶ್ರಮಿಕ ಕಾಳಜಿ ರಿಲೀಫ್ ಫಂಡ್‌ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಮೂಲಕ ಹಸ್ತಾಂತರ ಮಾಡಲಾಯಿತು.

ಪಶ್ಚಿಮಘಟ್ಟ ಅಧ್ಯಯನ ಪೀಠ ಸ್ಥಾಪನೆಗೆ 2 ಕೋ.ರೂ. ಮೀಸಲಿಡುವುದಾಗಿಯೂ ಡಾ ಹೆಗ್ಗಡೆ ಘೋಷಿಸಿದರು. ಅಲ್ಲದೆ ವಿಪತ್ತು ನಿರ್ವಹಣಾ ವೇದಿಕೆ ಸ್ಥಾಪನೆ ಮಾಡಿ 2 ಲಕ್ಷ ಸದಸ್ಯರಿಗೆ ತರಬೇತಿ ನೀಡುವುದಾಗಿ ತಿಳಿಸಿದರು.

ನೆರೆ ಸಂತ್ರಸ್ತರು ಪರಿಹಾರದ ಮೊತ್ತವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಡಾ. ಹೆಗ್ಗಡೆ ಮನವಿ ಮಾಡಿದರು. ಅತಿ ವೃಷ್ಟಿ ನಿಂತು ರಾಜ್ಯದಲ್ಲಿ ಸಮೃದ್ಧಿ ನೆಲೆಸಲಿ ಎಂದು ಆಶಿಸಿದರು.

ಹೇಮಾವತಿ ವಿ.ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಉಪಸ್ಥಿತರಿದ್ದರು.

Related posts

ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿ ನಾಯಿಗಳ ದಾಳಿಗೆ 15 ಜಿಂಕೆಗಳು ಬಲಿ

Upayuktha

ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರ: 1610 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ

Upayuktha

ಸಿಎಂ ಪರಿಹಾರ ನಿಧಿಗೆ 50 ಕೋಟಿ ರೂ. ಚೆಕ್ ಹಸ್ತಾಂತರಿಸಿದ ಸಹಕಾರ ಸಚಿವ ಸೋಮಶೇಖರ್

Upayuktha

Leave a Comment