ಜಿಲ್ಲಾ ಸುದ್ದಿಗಳು

ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಡಾ. ರವಿ ಸೂರಾಲು ಆಯ್ಕೆ, ನಾಳೆ ಪ್ರದಾನ

ಮಂಗಳೂರು: ಕಾರ್ಕಳ ಹಿರ್ಗಾನದ ಶ್ರೀ ಕುಂದೇಶ್ವರ ಕ್ಷೇತ್ರದಿಂದ ನೀಡಲಾಗುವ ಶ್ರೀಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಈ ಬಾರಿ ಸೌಕೂರು ಮೇಳದ ಭಾಗವತ ಡಾ. ರವಿಕುಮಾರ್ ಸೂರಾಲು ಅವರಿಗೆ ನೀಡಲಾಗುವುದು.

ಜ.23ರಂದು ರಾತ್ರಿ 9 ಗಂಟೆಗೆ ಹಿರ್ಗಾನ ಶ್ರೀಕುಂದೇಶ್ವರ ದೇವಸ್ಥಾನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭ ಸೌಕೂರು ಮೇಳದವರಿಂದ ಪುಷ್ಪಚಂದನ ಯಕ್ಷಗಾನ ಬಯಲಾಟ ನಡೆಯಲಿದೆ.

ರವಿ ಸೂರಾಲು ಹಿನ್ನೆಲೆ:
ದಿ. ಕಾಳಿಂಗ‌ ನಾವುಡ, ಗೋಪಾಲ ಗಾಣಿಗ ಅವರ ಗರಡಿಯಲ್ಲಿ ಪಳಗಿರುವ ರವಿ ಕುಮಾರ್, ಹಂಗಾರಕಟ್ಟೆ ಕೇಂದ್ರದಲ್ಲಿ ಕೆ.ಪಿ.ಹೆಗಡೆ ಅವರಿಂದ ಭಾಗವತಿಕೆ ಕಲಿತರು. ಈಗ ಸೌಕೂರು ಮೇಳದ ಪ್ರಧಾನ ಭಾಗವತರಾಗಿದ್ದು, ಸಾಲಿಗ್ರಾಮ, ಮಾರಣಕಟ್ಟೆ, ಬಗ್ವಾಡಿ, ಮಂದಾರ್ತಿ, ಕಮಲಶಿಲೆ ಮೊದಲಾದ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯಾಸಕ್ತರೂ ಸ್ಯಾಕ್ಸೋಫೋನ್ ವಾದಕರೂ ಅಗಿರುವ ಸೂರಾಲು ಅವರ ವಾದನದ ಅನೇಕ ಧ್ವನಿ ಸುರುಳಿಗಳು ಲೋಕಾರ್ಪಣೆಗೊಂಡಿವೆ.

ಉತ್ಸವ: ಶ್ರೀಕ್ಷೇತ್ರದಲ್ಲಿ ಜ. 22ರಂದು ಮಹೋತ್ಸವ, ಅನ್ನಸಂತರ್ಪಣೆ, ರಂಗಪೂಜೆ, ಭೂತ ಬಲಿ, ನೇಮೋತ್ಸವ, ಜ.23ರಂದು ಸಂಪ್ರೋಕ್ಷಣೆ ನಡೆಯಲಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮೈಸೂರು: ಹಿಮಾಲಯ ಫೌಂಡೇಷನ್‍ನ ವತಿಯಿಂದ ಆಚಾರ್ಯ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Upayuktha

ಹೋಂ ಕ್ವಾರಂಟೈನ್ ಉಲ್ಲಂಘಿಸಿದವರ ವಿರುದ್ದ ಕೇಸು: ಉಡುಪಿ ಡಿಸಿ ಜಿ.ಜಗದೀಶ್ ಸೂಚನೆ

Upayuktha

ಉಡುಪಿ: ಕರಂಬಳ್ಳಿ ದೇವಸ್ಥಾನಕ್ಕೆ ಸಚಿವ ಪ್ರಭು ಚವ್ಹಾಣ್ ಭೇಟಿ

Upayuktha