ಉಡುಪಿ: ತುಳುನಾಡಿನ ಪ್ರಖ್ಯಾತ ಇತಿಹಾಸಕಾರ ಬ್ರಹ್ಮಾವರ ಎಸ್ಎಂಎಸ್ ಕಾಲೇಜ್ ಮಾಜಿ ಪ್ರಾಂಶುಪಾಲರಾದ ದಿವಂಗತ ಡಾ.ವಸಂತ ಶೆಟ್ಟಿಯವರ ಸಂಸ್ಮರಣ ಉಪನ್ಯಾಸ ಇಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಇತಿಹಾಸ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ನಡೆಯಿತು.
ಡಾ.ವಸಂತ ಶೆಟ್ಟಿ ಸ್ಮಾರಕ ಅಧ್ಯಯನ ಸಂಸ್ಥೆ ಬ್ರಹ್ಮಾವರ ಇದರ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಕಾಲೇಜ್ ಪ್ರಾಂಶುಪಾಲದ ಪ್ರೊ.ಬಾಲಕೃಷ್ಣ ಎಸ್ ಹೆಗ್ಡೆಯವರು ವಹಿಸಿದ್ದರು.
ತುಳುನಾಡಿನ ಶಾಸನಗಳ ಅಧ್ಯಯನ ದಲ್ಲಿ ವಿಶೇಷ ಸಾಧನೆ ಮಾಡಿದ್ದ ದಿವಂಗತ ವಸಂತ ಶೆಟ್ಟಿಯವರು ಡಾ.ಗುರುರಾಜ ಭಟ್ ರವರ ಪರಂಪರೆಯಲ್ಲಿ ಸಾಧನೆ ಮಾಡಿದವರು. ಇಂದಿಗೆ ಅವರು ನಮ್ಮನ್ನು ಅಗಲಿ 24 ವರ್ಷಗಳು ಸಂದವು.
ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಲು ಉಡುಪಿಯ ಎಂಜಿಎಂ ಕಾಲೇಜ್ ನ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ವಿನೀತ್ ರಾವ್ ಆಗಮಿಸಿ ತುಳುನಾಡಿನಲ್ಲಿ ಗಾಂಧಿಯವರ ಹೆಜ್ಜೆ ಗುರುತುಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ವಸಂತ ಶೆಟ್ಟಿಯವರು ಸಂಶೋಧನೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಹಾಗಾಗಿ ಅವರ ಪುಣ್ಯ ತಿಥಿ ಯಂದು ಇಂತಹ ಅಧ್ಯಯನ ಶೀಲ ಕಾರ್ಯ ಕ್ರಮಗಳ ನ್ನು ನಡೆಸುವುದು ಔಚಿತ್ಯ ಪೂರ್ಣವಾದ ಕಾರ್ಯಕ್ರಮ ಎಂದು ಇತಿಹಾಸ ವಿಭಾಗದ ಮುಖ್ಯಸ್ಥರಾದ ಮತ್ತು ಐಕ್ಯೂ ಎಸಿ ಸಂಚಾಲಕ ರಾದ ಡಾ.ಸುರೇಶ್ ರೈಯವರು ಅಭಿಪ್ರಾಯ ಪಟ್ಟರು.
ಪ್ರಾಂಶುಪಾಲರಾದ ಬಾಲಕೃಷ್ಣ ಹೆಗ್ಡೆಯವರು ವಸಂತ ಶೆಟ್ಟಿಯವರ ಒಡನಾಟದ ದಿನಗಳನ್ನು ನೆನಪಿಸಿಕೊಂಡು ಕಾರ್ಯಕ್ರಮದ ಆಯೋಜನೆಗಾಗಿ ಕ್ರತಜ್ಞತೆ ಸಲ್ಲಿಸಿದರು.
ದಿ.ವಸಂತ ಶೆಟ್ಟಿ ಸ್ಮಾರಕ ಅಧ್ಯಯನ ಸಂಸ್ಥೆಯ ಸಂಚಾಲಕರು ಮತ್ತು ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರ ದ ನಿರ್ದೇಶಕ ರಾದ ಡಾ.ಜಗದೀಶ್ ಶೆಟ್ಟಿಯವರು ಧನ್ಯವಾದ ಸಲ್ಲಿಸಿದರು. ದ್ವಿತೀಯ ಇತಿಹಾಸ ಎಂ.ಎ ತರಗತಿಯ ವಿದ್ಯಾರ್ಥಿನಿ ಕುಮಾರಿ ರಕ್ಷಿತಾ ಮತ ಕುಮಾರಿ ರೋಲಿಟ ಪ್ರಾರ್ಥನೆ ಹಾಡಿದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ