ನಗರ ಸ್ಥಳೀಯ

ಮಂಗಳೂರು: ದಸಂಸದಿಂದ ಅಂಬೇಡ್ಕರ್ ಜಯಂತಿ

ಅಂಬೇಡ್ಕರ್ ದೇಶಕ್ಕೆ ನೀಡಿದ ಸಂವಿಧಾನ ಪ್ರಪಂಚದಲ್ಲಿಯೇ ಉತ್ಕಷ್ಟ್ರ ಸಂವಿಧಾನ : ಡಾ. ಆಶಾಲತ ಪಿ

ಮಂಗಳೂರು: ಡಾ: ಬಿ.ಆರ್ ಅಂಬೇಡ್ಕರ್‌ರವರ 130ನೇ ಜನ್ಮ ದಿನಾಚರಣೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಶಾಖೆಯ ಮಂಗಳೂರು ನಗರದ ‘ಡಿ’ ಗ್ರೂಪ್ ನೌಕರರ ಸಭಾ ಭವನದಲ್ಲಿ ಎಪ್ರಿಲ್ 18ರಂದು ಜಿಲ್ಲಾ ಸಂಚಾಲಕ ಶೇಖರ್ ಚಿಲಿಂಬಿಯವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಡಾ. ಆಶಾಲತ ಪಿ. ಅವರು ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ದೀಪ ಬೆಳಗಿಸಿ ಉದ್ಗಾಟಿಸಿದರು. ಬಳಿಕ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ನೀಡಿದ ಸಂವಿಧಾನ ಪ್ರಪಂಚದಲ್ಲಿಯೇ ಉತ್ಕಷ್ಟ್ರ ಸಂವಿಧಾನವಾಗಿದ್ದು ಸುಮಾರು 70 ವರ್ಷಗಳ ಕಾಲ ದೇಶವನ್ನು ಆಳಿದ ನಮ್ಮ ರಾಜಕೀಯ ನಾಯಕರು ಸಂವಿಧಾನದ ಆಶಯಗಳನ್ನು ಜಾರಿ ಮಾಡುವಲ್ಲಿ ಭೇದಬಾವ ಮಾಡಿದರು. ಅಂಬೇಡ್ಕರ್‌ರವರು ಶೋಷಿತ ಜನರಿಗೆ ನೀಡಿದ ಮತದಾನದ ಹಕ್ಕನ್ನು ಅಂದಿನ ರಾಜಕೀಯ ನಾಯಕರು ದುರುಪಯೋಗ ಪಡಿಸಿದರು ಎಂದು ಹೇಳಿದರು.

ದೇಶದಲ್ಲಿ ಸ್ವಾತಂತ್ರ್ಯ ರಾಜ್ಯಾಧೀಕಾರ ಪಡೆಯುವಲ್ಲಿ ಜನ ಸಾಮಾನ್ಯರು ಜಾಗ್ರೃತರಾಗಬೇಕು ಎಂದು ಡಾ. ಆಶಾಲತ ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸುಂದರ್ ಉಳ್ಳಾಲ್, ಎಂ.ವಿ.ಪದ್ಮನಾಭ, ಜೆ. ಶ್ರೀನಿವಾಸುಲು, ಶ್ರೀಮತಿ ಯಶೋದ ಚಿಲಿಂಬಿ, ದೇವಪ್ಪ ಬೋದಿ, ಪದ್ಮನಾಭ ಪೇಜಾವರ, ಸುರೇಶ್ ಕೆರೆಕಾಡು, ಲಕ್ಷ್ಮಣ್ ವಾಮಂಜೂರು, ಆರ್.ಸಿ ಅಮೀನ್, ದೇವೆಂದ್ರ ಕಾಪಿಕಾಡ್, ಬಿ.ತುಳಸಿದಾಸ್, ಜಗಜೀವನ್‌ದಾಸ್ ನೀರುಮಾರ್ಗ, ಈಶ್ವರ್ ಪಡುಪೆರಾರ, ಕೆ.ನಾಗೇಶ್ ಬಲ್ಮಠ, ಗಣೇಶ್ ಕಾರೆಕಾಡು ಪುತ್ತೂರು, ಲೋಹಿತ್ ವಿ.ಸುಕುಮಾರ್ ನಾಯ್ಕ, ನವೀನ್ ಅತ್ತಾವರ, ಲೋಕೇಶ್ ಚಿತ್ರ್ರಾಪು, ಗೌರಿ ಚಿಲಿಂಬಿ ಚಂದ್ರಾವತಿ ಪಚ್ಚನಾಡಿ, ಯಶೋದ ಅರೆಕೆರೆಬೈಲ್, ಕರಿಯಣ್ಣ, ರವೀಂದ್ರ, ದೇವೇಂದ್ರ ವಾಮಂಜೂರು, ಸುಜಾತ, ಪೂರ್ಣಿಮ ನಂತೂರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಬುದ್ಧ ವಂದನೆ ವಂದಿಸಿ ಶೇಖರ್ ಹೆಜಮಾಡಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಟಿ ಹೊನ್ನಯ್ಯ ಸ್ವಾಗತಿಸಿ, ಸುರೇಖ ಕೆಮ್ಮಡೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ರಕ್ತದಾನ ಶ್ರೇಷ್ಠದಾನ: ಡಾ| ಚೂಂತಾರು

Upayuktha

ಸುಬೋಧ ಪ್ರೌಢಶಾಲೆ ಪಾಣಾಜೆ: ನವೀಕೃತ ಕಂಪ್ಯೂಟರ್ ಕೊಠಡಿ ನಾಳೆ ಉದ್ಘಾಟನೆ

Upayuktha

‘ಓಶಿಯಾನಸ್ ಫೆಸ್ಟ್’ : ಪುತ್ತೂರು ವಿವೇಕಾನಂದ ಕಾಲೇಜಿಗೆ ಸಮಗ್ರ ಪ್ರಶಸ್ತಿ

Upayuktha