ಕ್ಯಾಂಪಸ್ ಕಲರವ ಗ್ರಾಮಾಂತರ ಸ್ಥಳೀಯ

ಉಜಿರೆಯ ಎಸ್.ಡಿ.ಎಂ. ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಇ-ಚಿಗುರು ಬಿಡುಗಡೆ.

ಉಜಿರೆ: ಶ್ರೀ ಧ.ಮಂ. ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯುನ್ಮಾನ ಪತ್ರಿಕೆ ‘ಇ- ಚಿಗುರು’ ಇಂದು ಬಿಡುಗಡೆಗೊಳಿಸಲಾಯಿತು.

ಉಪಯುಕ್ತ ನ್ಯೂಸ್ ವೆಬ್ ಸೈಟ್ ಸಂಪಾದಕ ಹಾಗೂ ಕಾಲೇಜಿನ ಹಳೆವಿದ್ಯಾರ್ಥಿ ಚಂದ್ರಶೇಖರ ಕುಳಮರ್ವ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ್ ಹೆಗ್ಡೆ ಸಾಂದರ್ಭಿಕ ನುಡಿಗಳನ್ನಾಡಿ ಶುಭಹಾರೈಸಿದರು.

ಕೊರೋನಾ ಸಂಕಷ್ಟದಿಂದಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಆದರೆ ವಿಭಾಗದ ಕಾರ್ಯಚಟುವಟಿಕೆಗಳಿಗೆ ತೊಡಕುಂಟಾಗಬಾರದೆಂಬ ಉದ್ದೇಶದಿಂದ ವಿದ್ಯಾರ್ಥಿಗಳು ಮನೆಯಲ್ಲೇ ಇದ್ದುಕೊಂಡು ಇ-ಚಿಗುರನ್ನು ತಯಾರಿಸಿದ್ದಾರೆ.

ಕಾಲೇಜಿನ ಯೋಜನೆಯಾದ ಇ-ಮ್ಯಾಗಝಿನ್ ಪರಿಕಲ್ಪನೆಗೆ ಇದು ಒತ್ತು ನೀಡಿದೆ‌. ವಿವಿಧ ಮಾಹಿತಿದಾಯಕ ಹಾಗೂ ಕ್ರಿಯಾತ್ಮಕ ಬರಹಗಳನ್ನು ಇ-ಚಿಗುರು ಹೊಂದಿದೆ.

ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಅಮೃತಾ ಎಂ, ಶಶಾಂಕ ಹೆಚ್.ವಿ., ಕೃತಿಕಾರಾಣಿ ಟಿ.ಎಸ್., ಸಿಂಧು ಹೆಗಡೆ, ರಶ್ಮಿ ಯಾದವ್ ಕೆ ಸಂಪಾದಕತ್ವದಲ್ಲಿ ಇ-ಚಿಗುರು ಮೂಡಿಬಂದಿದೆ.

ಇ-ಚಿಗುರು ಬಿಡುಗಡೆ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಸುನಿಲ್ ಹೆಗ್ಡೆ, ಶ್ರುತಿ ಜೈನ್ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ದ್ವಿತೀಯ ಮತ್ತು ತೃತೀಯ ಹಾಗೂ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸುಬ್ರಹ್ಮಣ್ಯದಲ್ಲಿ ಗೃಹರಕ್ಷಕರಿಗೆ ದಿನಸಿ ಕಿಟ್ ವಿತರಣೆ

Upayuktha

ಭಜನೆ ಗುರು ಶ್ರೀ ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆಯವರಿಗೆ ಸನ್ಮಾನ

Upayuktha

ಕನ್ನಡದ ಬೇರು ಗಟ್ಟಿಯಿರಲು ಕನ್ನಡಕ್ಕೆ ಅಳಿವಿಲ್ಲ: ರಾಧಾಕೃಷ್ಣ ಉಳಿಯತಡ್ಕ

Upayuktha
error: Copying Content is Prohibited !!