ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾ ಸ್ನಾತಕೋತ್ತರ ಅರ್ಥಶಾಸ್ತ್ರ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ

ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗವು ಮಾರ್ಚ್ 12ರಂದು ನಡೆಸಿದ ರಾಜ್ಯ ಮಟ್ಟದ ಒಂದು ದಿನದ ಪ್ರಬಂಧ ಮಂಡನೆ ಸ್ಪರ್ಧೆ ‘ಉತ್ಕರ್ಷ-2020’ ಯಲ್ಲಿ ಸಂತ ಫಿಲೋಮಿನಾ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ದ್ವಿತೀಯ ವರ್ಷದ 12 ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತು ಅಧ್ಯಯನ ನಡೆಸಿ, ಪ್ರಬಂಧ ಮಂಡನೆಯನ್ನು ನಡೆಸಿದರು.

ಈ ಪ್ರಬಂಧ ಮಂಡನೆ ಸ್ಪರ್ಧೆಯಲ್ಲಿ ಅಮೃತಾ ಕೆ ಮತ್ತು ಶ್ವೇತಾ ಕುಮಾರಿ ‘ಆನ್ ಲೈನ್ ಮಾರ್ಕೆಟಿಂಗ್: ಎಮರ್ಜಿಂಗ್ ಟ್ರೆಂಡ್ಸ್ ಅಂಡ್ ಚ್ಯಾಲೆಂಜಸ್’ ಕುರಿತು ಮಂಡಿಸಿದರು. ಜಯಲಕ್ಷ್ಮೀ ಮತ್ತು ಶ್ರೀವಿದ್ಯಾ ‘ಪೋಸ್ಟ್ ಆಫೀಸ್ ಸೇವಿಂಗ್ ಸ್ಕೀಮ್ಸ್: ಇಂಪಾಕ್ಟ್ ಆನ್ ಸೀವಿಂಗ್ ಬಿಹೇವಿಯರ್ ಆಫ್ ರೂರಲ್ ಇಂಡಿಯಾ’ ಕುರಿತು ಮಂಡಿಸಿದರು. ವರಲಕ್ಷ್ಮೀ ಮತ್ತು ಅನ್ನಮ್ಮ ಕೆ ಟಿ ‘ಹ್ಯೂಮನ್ ರಿಸೋರ್ಸ್ ಮ್ಯಾನೇಜ್‍ಮೆಂಟ್: ಪ್ರಾಬ್ಲೆಮ್ಸ್ ಅಂಡ್ ಸಜೆಶನ್ಸ್’ ಕುರಿತು ಮಂಡಿಸಿದರು.

ಕಾವ್ಯಶ್ರೀ ಮತ್ತು ಸರಸ್ವತಿ ಎಮ್ ಆರ್ ‘ಬಿಸಿನೆಸ್ ಎಥಿಕ್ಸ್ ಅಂಡ್ ಸಿಎಸ್‍ಆರ್: ಕರೆಂಟ್ ಚ್ಯಾಲೆಂಜಸ್ ಇನ್ ಇಂಡಿಯಾ’ ಕುರಿತು ಮಂಡಿಸಿದರು. ನಫಿಸಾತುಲ್ ಮಿಶ್ರಿಯಾ ಮತ್ತು ಪವಿತ್ರ ‘ಸೋಶಿಯಲ್ ಮೀಡಿಯಾ ಮಾಕೆಂಟಿಂಗ್ ಇನ್ ಇಂಡಿಯಾ: ಪ್ರಾಬ್ಲೆಮ್ಸ್ ಅಂಡ್ ಪ್ರಾಸ್ಪೆಕ್ಸ್’ ಕುರಿತು ಮಂಡಿಸಿದರು. ಶ್ವೇತಾ ಜಿ ಎಮ್ ಮತ್ತು ಸ್ವಾತಿ ಕೆ ‘ಸೋಶಿಯಲ್ ಎನ್‍ಟ್ರಿಪ್ರಿನರ್‍ಶಿಪ್: ಕರೆಂಟ್ ಚ್ಯಾಲೆಂಜಸ್ ಇನ್ ಇಂಡಿಯಾ’ ಕುರಿತು ಮಂಡಿಸಿದರು.

ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರದೀಪ್ ಕೆ ಎಸ್ ಮತ್ತು ಬಿ ಟಿ ಸೌಮ್ಯ ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಡಾ ಮಾಲತಿ ಶೆಟ್ಟಿ ಮಾಣೂರು ಅವರಿಗೆ ಕಸಾಪ ಜಿಲ್ಲಾ ಸಮ್ಮೇಳನದಲ್ಲಿ ಸನ್ಮಾನ

Upayuktha

ಧರ್ಮಸ್ಥಳ: ಈ ಬಾರಿ ಭಜನಾ ಕಮ್ಮಟ ಇಲ್ಲ; ಸಾಂಕೇತಿಕ ಪ್ರಾರ್ಥನಾ ಸಮಾವೇಶ ಅ. 3ಕ್ಕೆ

Upayuktha

ಕೊರೋನಾ ಸೋಂಕಿತ ಭಟ್ಕಳ ಮೂಲದ ಗರ್ಭಿಣಿ ಗುಣಮುಖ; ಉಡುಪಿ ಆಸ್ಪತ್ರೆಯಿಂದ ಬಿಡುಗಡೆ

Upayuktha