ನಗರ ಸ್ಥಳೀಯ

ಪ್ರತಿಯೊಬ್ಬ ಮಗುವೂ ಸುಶಿಕ್ಷಿತನಾಗುವುದೇ ಟ್ರಸ್ಟ್ ಉದ್ದೇಶ: ಡಾ. ಅಬ್ದುಲ್ ಶಕೀಲ್

ಉಳ್ಳಾಲ: ಪ್ರತಿಯೊಬ್ಬ ಮಗುವೂ ಸುಶಿಕ್ಷಿತನಾಗುವುದೇ ಟ್ರಸ್ಟ್ ನ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ದತ್ತು ಸ್ವೀಕರಿಸುವ ಕಾರ್ಯ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿದೆ ಎಂದು ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್‌ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ. ಅಬ್ದುಲ್ ಶಕೀಲ್ ಹೇಳಿದರು.

ಅವರು ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್‌ ಟ್ರಸ್ಟ್(ರಿ)‌ ವತಿಯಿಂದ ಕೊಡಮಾಡುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ದೇರಳಕಟ್ಟೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.

ಕೇವಲ ಪುಸ್ತಕಗಳನ್ನು ಓದುವುದರಿಂದ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣವನ್ನು ಪಡೆದುಕೊಳ್ಳಬೇಕಿದೆ. ಈ ಮೂಲಕ ಕಲಿತ ಶಿಕ್ಷಣವನ್ನು ಯಥಾವತ್ತಾಗಿ ಜೀವನದಲ್ಲಿ ಅಳವಡಿಸಿಕೊಂಡರೆ ಅದು ಪ್ರಯೋಜನಕ್ಕೆ ಬರುತ್ತದೆ. ಅಲ್ಲದೆ ಒಬ್ಬ ವಿದ್ಯಾರ್ಥಿಯನ್ನು ಸಂಸ್ಕಾರವಂತ ನಾಗರಿಕನನ್ನಾಗಿ ಸೃಷ್ಟಿಸುತ್ತದೆ ಎಂದರು.

ಬೆಳ್ಮ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಸತ್ತಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಪಡೆಯುವುದು ಅತ್ಯಂತ ಮಹತ್ತರವಾದ ಸಮಾಜ ಸೇವೆಯಾಗಿದ್ದು, ಇಂತಹ ಸೇವೆಯನ್ನು ಕೇವಲ ಬೆರಳೆಣಿಕೆಯ ಜನರಷ್ಟೇ ಮಾಡುತ್ತಾರೆ. ಡಾ ಅಬ್ದುಲ್ ಶಕೀಲ್ ರವರು ಸಮಾರು 300ಕ್ಕೂ ಅಧಿಕ ಪ್ರತಿಭಾಂತಹ ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಉನ್ನತ ಶಿಕ್ಷಣವನ್ನು ನೀಡುತ್ತಿದ್ದಾರೆ. ಇದು ಅಭಿನಂದನಾರ್ಹ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಫಿಟ್ ಇಂಡಿಯಾ ಸ್ಕೂಲ್ ವೀಕ್ ಚಟುವಟಿಯಲ್ಲಿ ಭಾಗವಹಿಸಿದ 20 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಬೆಳ್ಮ ಗ್ರಾ.ಪಂ ಉಪಾಧ್ಯಕ್ಷೆ ರಮ್ಲತ್, ಸದಸ್ಯ ಇಕ್ಬಾಲ್ ಎಚ್‌.ಆರ್, ಖಾದರ್, ದೈಹಿಕ ಶಿಕ್ಷಕ ವಿಷ್ಣು ನಾರಾಯಣ ಹೆಬ್ಬಾರ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿಹಾಬುದ್ದೀನ್, ರಮೀಝ್ ಮೀಝಾ, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಸಂದೀಪ್, ಇರ್ಷಾದ್, ನೌಫಲ್.ಬಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ನಯನ ಸ್ವಾಗತಿದರು. ಸಮಾಜ ಶಿಕ್ಷಕಿ ಅರುಣಾ ವಂದಿಸಿದರು‌. ಕನ್ನಡ ಶಿಕ್ಷಕಿ ಅಂಬಿಕಾ.ಕೆ ಕಾರ್ಯಕ್ರಮ ನಿರೂಪಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕೊರೊನಾ ಅಪ್‌ಡೇಟ್ಸ್‌: ಉಡುಪಿಯಲ್ಲಿ 15, ರಾಜ್ಯದಲ್ಲಿ 178 ಪಾಸಿಟಿವ್ ಪ್ರಕರಣ

Upayuktha

‘ರೇಡಿಯೋ ನಿಟ್ಟೆ’ ಏ.13ರಿಂದ ಪ್ರಸಾರ ಆರಂಭ

Upayuktha

ಇಂಡಿಯನ್ ಟೀ ಬೋರ್ಡ್ ಉಪಾಧ್ಯಕ್ಷ ಪಿ. ದುರ್ಗಾದಾಸ್ ಹೆಗ್ಡೆ ನಿಧನ

Upayuktha